4.6 C
Munich
Monday, March 27, 2023

China provinces provide 30 days paid leave to newlyweds to increase birth rate | China: ಜನಸಂಖ್ಯೆಯನ್ನು ಹೆಚ್ಚಿಸಲು ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುತ್ತಿರುವ ಚೀನಾ ಪ್ರಾಂತ್ಯ

ಓದಲೇಬೇಕು

ಕಳೆದ ವರ್ಷ ದೇಶವು ತನ್ನ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ದಾಖಲಿಸಿದೆ. ಕಳೆದ ವರ್ಷ ಚೀನಾದಲ್ಲಿ ಕನಿಷ್ಠ ಅಂದರೆ, 1000 ಜನರಿಗೆ ಶೇ. 6.77 ರಷ್ಟು ಜನನ ಪ್ರಮಾಣ ದಾಖಲಾಗಿತ್ತು.

ಚೀನಾ ಜನನ ಪ್ರಮಾಣ

Image Credit source: Time

ಕುಗ್ಗುತ್ತಿರುವ ಜನನ ದರದ ಮಧ್ಯೆ, ಯುವ ವಿವಾಹವನ್ನು ಉತ್ತೇಜಿಸಲು ಮತ್ತು ನವವಿವಾಹಿತರನ್ನು ಪ್ರೋತ್ಸಾಹಿಸಲು ಕೆಲವು ಚೀನೀ ಪ್ರಾಂತ್ಯಗಳು (China Provinces) 30 ದಿನಗಳ ವೇತನ ಸಹಿತ ರಜೆಗಳನ್ನು (Paid Leave) ನೀಡುತ್ತಿವೆ. “ಚೀನಾದಲ್ಲಿ ಮದುವೆಗೆಂದು ಕನಿಷ್ಠ ಮೂರು ದಿನಗಳು ವೇತನ ಸಹಿತ ರಜೆ ನೀಡುತ್ತಾರೆ. ಜನನ ಪ್ರಮಾಣ ಕುಸಿಯುತ್ತಿರುವ ಕಾರಣ ಚೀನಾದ ಕೆಲವು ಪ್ರಾಂತ್ಯಗಳು 30 ದಿನಗಳ ವೇತನ ಸಹಿತ ರಜೆ ನೀಡಲು ನಿರ್ಧರಿಸಿದೆ” ಎಂದು ಡೈಲಿ ಹೆಲ್ತ್‌ನ ಹೇಳಿಕೆಯನ್ನು ಉಲ್ಲೇಖಿಸಿ, ರಾಯಿಟರ್ಸ್ (Reuters) ವರದಿಯು ತಿಳಿಸಿದೆ.

ಕೆಲವು ಚೀನಾ ಪ್ರಾಂತ್ಯಗಳು ಮದುವೆಗೆ 30 ದಿನಗಳ ರಜೆಯನ್ನು ನೀಡಿದರೆ, ಇತರರು ಪ್ರಾಂತ್ಯಗಳು 10 ದಿನಗಳ ರಜೆಯನ್ನು ನೀಡುತ್ತಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಗನ್ಸು ಮತ್ತು ಶಾಂಕ್ಸಿ ಪ್ರಾಂತ್ಯಗಳು 30 ದಿನಗಳನ್ನು ನೀಡುತ್ತಿದ್ದರೆ, ಶಾಂಘೈ 10 ದಿನಗಳನ್ನು ನೀಡುತ್ತಿದೆ ಮತ್ತು ಸಿಚುವಾನ್ ಈಗಲೂ 3 ದಿನಗಳನ್ನು ನೀಡುತ್ತಿದೆ.

“ಮದುವೆ ರಜೆಯನ್ನು ವಿಸ್ತರಿಸುವುದು ಫಲವತ್ತತೆಯ ಪ್ರಮಾಣವನ್ನು ಹೆಚ್ಚಿಸುವ ಪರಿಣಾಮಕಾರಿ ಮಾರ್ಗ” ಎಂದು ಸೌತ್‌ವೆಸ್ಟರ್ನ್ ಯೂನಿವರ್ಸಿಟಿ ಆಫ್ ಫೈನಾನ್ಸ್ ಅಂಡ್ ಎಕನಾಮಿಕ್ಸ್‌ನ ಸಾಮಾಜಿಕ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಡೀನ್ ಯಾಂಗ್ ಹೈಯಾಂಗ್ ಹೇಳಿದ್ದಾರೆ.

ಮದುವೆ ರಜೆಯ ವಿಸ್ತರಣೆಯು ಮುಖ್ಯವಾಗಿ ನಿಧಾನವಾದ ಆರ್ಥಿಕ ಅಭಿವೃದ್ಧಿ ಹೊಂದಿರುವ ಪ್ರಾಂತ್ಯಗಳಲ್ಲಿದೆ. ಕಾರ್ಮಿಕ ಬಲವನ್ನು ವಿಸ್ತರಿಸುವ ಮತ್ತು ಬಳಕೆಯನ್ನು ಉತ್ತೇಜಿಸುವ ತುರ್ತು ಅವಶ್ಯಕತೆಯಿದೆ” ” ಎಂದು ಹೈಯಾಂಗ್ ತಿಳಿಸಿದರು. ಹೈಯಾಂಗ್ ಪ್ರಕಾರ, ದೇಶದ ಜನನ ಪ್ರಮಾಣವನ್ನು ಹೆಚ್ಚಿಸಲು ವಸತಿ ಸಬ್ಸಿಡಿಗಳು ಮತ್ತು ಮಗುವಾದಾಗ ತಂದೆಯಂದಿರಿಗೆ ವೇತನ ಸಹಿತ ರಜೆ ರಜೆ, ಇತರ ಯೋಜನೆಗಳನ್ನು ತರುವುದು ಅಗತ್ಯ.

ಅಧಿಕೃತ ಮಾಹಿತಿಯ ಪ್ರಕಾರ, ಆರು ದಶಕಗಳಲ್ಲಿ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು ಕಳೆದ ವರ್ಷ ಕುಸಿಯಿತು. ಕಳೆದ ವರ್ಷ ದೇಶವು ತನ್ನ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ದಾಖಲಿಸಿದೆ. ಕಳೆದ ವರ್ಷ ಚೀನಾದಲ್ಲಿ ಕನಿಷ್ಠ ಅಂದರೆ, 1000 ಜನರಿಗೆ ಶೇ. 6.77 ರಷ್ಟು ಜನನ ಪ್ರಮಾಣ ದಾಖಲಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನ- ಬೆಂಗಳೂರು ಲವ್ ಸ್ಟೋರಿಗೆ ಟ್ವಿಸ್, ತನ್ನ ಹುಡುಗನಿಗಾಗಿ ಪಾಕ್ ಬೆಡಗಿ ಬೆಂಗಳೂರಿಗೆ ಬಂದಿದ್ದೇಗೆ ಗೊತ್ತಾ?

ದೇಶವು ನಕಾರಾತ್ಮಕ ಜನಸಂಖ್ಯೆಯ ಬೆಳವಣಿಗೆಯನ್ನು ದಾಖಲಿಸಿದ ನಂತರ ಚೀನೀ ವೀರ್ಯ ಬ್ಯಾಂಕುಗಳು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಆರೋಗ್ಯವಂತ ಪುರುಷರಿಗೆ ವೀರ್ಯವನ್ನು ದಾನ ಮಾಡುವಂತೆ ಮನವಿ ಮಾಡುತ್ತಿವೆ ಎಂದು ಈ ತಿಂಗಳ ಆರಂಭದಲ್ಲಿ ವರದಿಯಾಗಿದೆ. ಅಲ್ಲದೆ ಚೀನಾದ ಅಧಿಕಾರಿಗಳು ದೇಶದ ಜನನ ಪ್ರಮಾಣವನ್ನು ಹೆಚ್ಚಿಸಲು ಬೇರೆ ಬೇರೆ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಫಲವತ್ತತೆಯನ್ನು ಉತ್ತೇಜಿಸಲು ಹೊಸ ನೀತಿಗಳನ್ನು ಪರಿಚಯಿಸಬೇಕೆಂದು ಸರ್ಕಾರಕ್ಕೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!