6.5 C
Munich
Saturday, March 4, 2023

Civil Aviation Research Organization, Another Gift To Telangana by PM Modi, Says G Kishan Reddy | CARO- ತೆಲಂಗಾಣಕ್ಕೆ ಮೋದಿ ಕೊಟ್ಟ ಗಿಫ್ಟ್ ಎಂದ ಕಿಶನ್ ರೆಡ್ಡಿ; ಸಂಶೋಧನಾ ಕೇಂದ್ರದ ವಿಶೇಷತೆಗಳೇನು?

ಓದಲೇಬೇಕು

CARO, A Gift by Modi to Telangana: ಕೇಂದ್ರ ಸರ್ಕಾರ ಹೈದರಾಬಾದ್​ನ ಬೇಗಮ್​ಪೇಟ್ ಏರ್​ಪೋರ್ಟ್​​ನಲ್ಲಿ 400 ಕೋಟಿ ರೂ ವೆಚ್ಚದಲ್ಲಿ ವಿಶ್ವದರ್ಜೆಯ ವಿಮಾನಯಾನ ಸಂಶೋಧನಾ ಕೇಂದ್ರ ಸ್ಥಾಪಿಸುತ್ತಿದೆ. ಜುಲೈನಿಂದ ಇದು ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಇದು ತೆಲಂಗಾಣಕ್ಕೆ ಕೇಂದ್ರ ಕೊಟ್ಟ ಉಡುಗೊರೆ ಎಂದು ಸಚಿವ ಕಿಶನ್ ರೆಡ್ಡಿ ಬಣ್ಣಿಸಿದ್ದಾರೆ.

ಜಿ. ಕಿಶನ್ ರೆಡ್ಡಿ

ನವದೆಹಲಿ: ಹೈದರಾಬಾದ್​ನಲ್ಲಿಸಿವಿಲ್ ಏವಿಯೇಶನ್ ರಿಸರ್ಚ್ ಆರ್ಗನೈಸೇಶನ್ (CARO- Civil Aviation Research Organization) ನಿರ್ಮಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಸಚಿವ ಜಿ. ಕಿಶನ್ ರೆಡ್ಡಿ (G Kishan Reddy) ಶ್ಲಾಘಿಸಿದ್ದಾರೆ. ತೆಲಂಗಾಣದ ಅಭಿವೃದ್ಧಿಗಾಗಿ ವಿವಿಧ ವಲಯಗಳಲ್ಲಿ ಕಳೆದ ಎಂಟೂವರೆ ವರ್ಷಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಉಚ್ಚ ಮಟ್ಟದ ವಿಮಾನಯಾನ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿರುವುದು ತೆಲಂಗಾಣಕ್ಕೆ ಪ್ರಧಾನಿ ಮೋದಿ ನೀಡಿದ ಮತ್ತೊಂದು ಉಡುಗೊರೆ ಎಂದು ಕೇಂದ್ರ ವಿಮಾನಯಾನ ಸಚಿವರೂ ಆದ ಕಿಶನ್ ರೆಡ್ಡಿ ಬಣ್ಣಿಸಿದ್ದಾರೆ.

ಹೈದರಾಬಾದ್​ನ ಬೇಗಮ್​ಪೇಟ್ ಏರ್​ಪೋರ್ಟ್​ನಲ್ಲಿ (Begumpet Airport) ಭಾರತೀಯ ವಿಮಾನ ಪ್ರಾಧಿಕಾರದಿಂದ 400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಶೋಧನಾ ಸಂಸ್ಥೆಯು ವಿಮಾನಯಾನ ಕ್ಷೇತ್ರದ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನವನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಆಗಬೇಕಾದ ತಂತ್ರಜ್ಞಾನ ಬದಲಾವಣೆಗಳಿಗಾಗಿ ಇಲ್ಲಿ ಸಂಶೋಧನೆ ನಡೆಯಲಿದೆ.

ವರದಿಗಳ ಪ್ರಕಾರ ಈ ವರ್ಷದ ಜುಲೈನಿಂದಲೇ ಈ ಸಂಸ್ಥೆಯು ಕಾರ್ಯಾಚರಿಸುವ ನಿರೀಕ್ಷೆ ಇದೆ. ಗೃಹ-5 ಪ್ರಮಾಣದಲ್ಲಿ ಈ ಸಂಶೋಧನಾ ಕೇಂದ್ರವನ್ನು ತಯಾರಿಸಲಾಗುತ್ತಿದೆ. ಏಷ್ಯಾದಲ್ಲೇ ಅತ್ಯುನ್ನತ ಎನಿಸುವ ಕೆಲ ತಂತ್ರಜ್ಞಾನ ಈ ಕಟ್ಟಡದಲ್ಲಿರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿData Protection Bill: ಡಾಟಾ ಪ್ರೊಟೆಕ್ಷನ್ ಬಿಲ್​ಗೆ ಅನುಮೋದನೆಯಾಗಿದೆ ಎಂದು ಸಚಿವರು ಹೇಳಿಲ್ಲ: NASSCOM ಸ್ಪಷ್ಟನೆ

ಹೈದರಾಬಾದ್​ನ ಬೇಗಮ್​ಪೇಟ್ ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುತ್ತಿರುವುದಕ್ಕೆ ತೆಲಂಗಾಣ ಜನರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಸಿಎಆರ್​ಒ ತೆಲಂಗಾಣ ರಾಜ್ಯಕ್ಕೆ ಮೆರಗು ತಂದುಕೊಡಬಲ್ಲುದು. ಇಲ್ಲಿಂದ ಹೊಸ ಐಡಿಯಾಗಳು, ತಂತ್ರಜ್ಞಾನ ಮತ್ತು ಗುಣಮಟ್ಟ ಹೆಚ್ಚಿ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ಲಾಭವಾಗಲಿದೆ. ತೆಲಂಗಾಣದ ಯುವಜನತೆಯ ಅಗಣಿತ ಕೌಶಲ್ಯ, ಪ್ರತಿಭೆ ಮತ್ತು ಆಸಕ್ತಿಯನ್ನು ಈ ಸಂಸ್ಥೆ ಉಪಯೋಗಿಸಿಕೊಂಡು ಭಾರತದ ಸಿವಿಲ್ ಏವಿಯೇಶನ್ ಉದ್ಯಮಕ್ಕೆ ಜಾಗತಿಕ ಹೆಗ್ಗುರುತು ಸಿಗುವಂತೆ ಮಾಡಬಲ್ಲುದು ಎಂದು ಆಂಧ್ರದ ಬಿಜೆಪಿ ಮುಖಂಡರೂ ಆದ ಕಿಶನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಎಆರ್​ಒದಲ್ಲಿರುವ ಕೆಲ ಸೌಲಭ್ಯಗಳು

 • ಏರ್ ನ್ಯಾವಿಗೇಶನ್ ಸರ್ವಿಸ್​ಗೆ ರಿಸರ್ಚ್ ಮತ್ತು ಡೆವಲಪ್ಮೆಂಟ್ ಸೌಲಭ್ಯ
 • ಏರ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಕಮ್ಯೂನಿಕೇಶನ್ಸ್ ಡೊಮೈನ್ ಸಿಮುಲೇಟರ್ಸ್
 • ನೆಟ್ವರ್ಕ್ ಎಮುಲೇಟರ್
 • ವಿಷುವಲೈಸೇಶನ್ ಮತ್ತು ಅನಾಲಿಸಿಸ್ ಲ್ಯಾಬ್​ಗಳು
 • ಸರ್ವೇಲೆನ್ಸ್ ಲ್ಯಾಬ್ಸ್ ನ್ಯಾವಿಗೇಶನ್ ಸಿಸ್ಟಂ
 • ಎಮುಲೇಶನ್ ಮತ್ತು ಸಿಮುಲೇಶನ್ ಲ್ಯಾಬ್
 • ಸೈಬರ್ ಸೆಕ್ಯೂರಿಟಿ ಮತ್ತು ಥ್ರೆಟ್ ಅನಾಲಿಸಿಸ್ ಲ್ಯಾಬ್
 • ಡೇಟಾ ಮ್ಯಾನೇಜ್ಮೆಂಟ್ ಸೆಂಟರ್
 • ಪ್ರಾಜೆಕ್ಟ್ ಸಪೋರ್ಟ್ ಸೆಂಟರ್
 • ಸಾಫ್ಟ್​ವೇರ್ ಸಲೂಶನ್ಸ್ ಮತ್ತು ಟೂಲ್ಸ್ ಸೆಂಟರ್
 • ನೆಟ್ವರ್ಕ್ ಇನ್​ಫ್ರಾಸ್ಟ್ರಕ್ಚರ್ ಸೆಂಟರ್

ಇನ್ನಷ್ಟು ಉದ್ಯಮಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!