5.2 C
Munich
Friday, March 3, 2023

Come to our bedroom: Says Saif Ali Khan after annoyed by paparazzi | Saif Ali Khan: ‘ನಮ್ಮ ಬೆಡ್​ರೂಂಗೆ ಬಂದುಬಿಡಿ’; ಪಾಪರಾಜಿ ವಿರುದ್ಧ ಕೆಂಡಕಾರಿದ ಸೈಫ್ ಅಲಿ ಖಾನ್

ಓದಲೇಬೇಕು

Paparazzi | Kareena Kapoor Khan: ಪಾರ್ಟಿ ಮುಗಿಸಿ ಬಂದಿದ್ದರಿಂದ ಸೈಫ್ ಅಲಿ ಖಾನ್​ ಸುಸ್ತಾದಂತೆ ಕಂಡರು. ಹೀಗಿರುವಾಗಲೇ ಕ್ಯಾಮೆರಾಗೆ ಪೋಸ್ ನೀಡಿ ಎನ್ನುವ ಬೇಡಿಕೆಯಿಂದ ಅವರಿಗೆ ಕಿರಿಕಿರಿ ಆಗಿದೆ.

ಸೈಫ್ ಅಲಿ ಖಾನ್

ಇತ್ತೀಚೆಗೆ ಪಾಪರಾಜಿಗಳ (Paparazzi) ಹಾವಳಿ ಹೆಚ್ಚುತ್ತಿದೆ. ಸೆಲೆಬ್ರಿಟಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಪರಾಜಿಗಳು ಎಲ್ಲೆಂದರಲ್ಲಿ ಕ್ಯಾಮೆರಾ ಹಿಡಿದು ಬರುತ್ತಿರುವುದರಿಂದ ನಟ-ನಟಿಯರಿಗೆ ಖಾಸಗಿತನವೇ ಇಲ್ಲದಂತಾಗಿದೆ. ಕುಟುಂಬದ ಜೊತೆ ಎಲ್ಲಾದರೂ ಹೊರಗೆ ಹೊರಟರೆ ಸಾಕು, ಕ್ಯಾಮೆರಾಗಳು ಅವರನ್ನು ಮುತ್ತಿಕೊಳ್ಳುತ್ತವೆ. ಪಾಪರಾಜಿಗಳಿಗೆ ಪೋಸ್ ಕೊಟ್ಟ ನಂತರವೇ ಮುಂದೆ ಸಾಗಬೇಕು. ಅರ್ಜೆಂಟ್​ ಆಗಿ ಹೊರಟಾಗ ಕ್ಯಾಮೆರಾ ಕಡೆ ಮುಖ ಮಾಡದೇ ಇದ್ದರೆ ಅದನ್ನು ಬೇರೆ ರೀತಿಯಲ್ಲಿ ಹೇಳಿ ಸೆಲೆಬ್ರಿಟಿಗಳ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಆಗುತ್ತದೆ. ಈಗ ಸೈಫ್ ಅಲಿ ಖಾನ್ (Saif Ali Khan) ಅವರು ಪಾಪರಾಜಿಗಳ ವಿರುದ್ಧ ಕಿಡಿಕಾರಿದ್ದಾರೆ. ‘ನಮ್ಮ ಬೆಡ್​ರೂಂಗೆ ಬಂದುಬಿಡಿ’ ಎಂದು ಕೆಂಡಕಾರಿದ್ದಾರೆ.

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರು ನಟಿ ಮಲೈಕಾ ಅರೋರಾ ಅವರ ಬರ್ತ್​ಡೇ ಪಾರ್ಟಿಗೆ ತೆರಳಿದ್ದರು. ಮನೆಗೆ ಮರಳುವಾಗ ತಡವಾಗಿತ್ತು. ಆ ಸಂದರ್ಭದಲ್ಲೂ ಪಾಪರಾಜಿಗಳು ಕ್ಯಾಮೆರಾ ಹಿಡಿದು ಸೈಫ್ ಮನೆ ಮುಂದೆ ಕಾದು ನಿಂತಿದ್ದರು. ಸೈಫ್ ಹಾಗೂ ಕರೀನಾ ಕೆಳಗೆ ಇಳಿಯುತ್ತಿದ್ದಂತೆಯೇ ಫೋಟೋಗೆ ಬೇಡಿಕೆ ಇಡಲಾಗಿದೆ.

ಇದನ್ನೂ ಓದಿ: Goodbye: 30 ಸೆಕೆಂಡ್​ ಟೈಮ್​ ಕೊಟ್ಟ ರಶ್ಮಿಕಾ; ಬರೀ 10 ಸೆಕೆಂಡ್​ ಒಳಗೆ ಕೆಲಸ ಮುಗಿಸಿದ ಪಾಪರಾಜಿಗಳು

ಇದನ್ನೂ ಓದಿ



ಪಾರ್ಟಿ ಮುಗಿಸಿ ಬಂದಿದ್ದರಿಂದ ಸೈಫ್ ಸುಸ್ತಾದಂತೆ ಕಂಡರು. ಅವರು ಮನೆ ಒಳಗೆ ತೆರಳುವ ಆತುರದಲ್ಲಿದ್ದರು. ಹೀಗಿರುವಾಗಲೇ ಕ್ಯಾಮೆರಾಗೆ ಪೋಸ್ ನೀಡಿ ಎನ್ನುವ ಬೇಡಿಕೆಯಿಂದ ಅವರಿಗೆ ಕಿರಿಕಿರಿ ಆಗಿದೆ. ‘ಒಂದು ಕೆಲಸ ಮಾಡಿ, ನೀವು ನಮ್ಮ ಬೆಡ್​ರೂಂಗೆ ಬಂದು ಬಿಡಿ’ ಎಂದು ಸೈಫ್ ಏರುಧ್ವನಿಯಲ್ಲೇ ಹೇಳಿದ್ದಾರೆ. ಇದನ್ನು ಕೇಳಿದ ಕೆಲ ಪಾಪರಾಜಿಗಳು ‘ಇಲ್ಲ ಇಲ್ಲ’ ಎಂದು ನಗುವಿನಿಂದ ಹೇಳುವ ಪ್ರಯತ್ನ ಮಾಡಿದ್ದಾರೆ. ಇಷ್ಟಾದ ಬಳಿಕವೂ ಪೋಸ್ ನೀಡದೇ ಸೈಫ್ ಮನೆ ಒಳಗೆ ತೆರಳಿದ್ದಾರೆ.

ಇದನ್ನೂ ಓದಿ: Hrithik Roshan: ಪ್ರೇಯಸಿ ತುಟಿಗೆ ಹೃತಿಕ್​​ ರೋಷನ್​ ಕಿಸ್;​ ಜೂಮ್​ ಹಾಕಿ ವಿಡಿಯೋ ಮಾಡಿದ ಪಾಪರಾಜಿಗಳಿಗೆ ನೆಟ್ಟಿಗರ ಛೀಮಾರಿ

ಇತ್ತೀಚೆಗೆ ಆಲಿಯಾ ಭಟ್ ಅವರು ಪಾಪರಾಜಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದರು. ಮನೆಯಲ್ಲಿ ಇರುವ ಸಂದರ್ಭದಲ್ಲಿ ಪಕ್ಕದ ಬಿಲ್ಡಿಂಗ್​ನಿಂದ ಅವರ ಫೋಟೋಗಳನ್ನು ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡು ಆಲಿಯಾ ಅಸಮಾಧಾನಗೊಂಡಿದ್ದರು. ಇದು ಖಾಸಗಿತನಕ್ಕೆ ಬಂದ ಧಕ್ಕೆ ಎಂದು ಅವರು ಹೇಳಿದ್ದರು.

ಸಿನಿಮಾ ವಿಚಾರಕ್ಕೆ ಬರೋದಾದರೆ ಕರೀನಾ ಕಪೂರ್ ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಆದಿಪುರುಷ್​’ ಚಿತ್ರ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಅವರು ರಾವಣನ ಪಾತ್ರ ಮಾಡಿದ್ದಾರೆ. ಇದರ ಜೊತೆಗೆ ಜೂನಿಯರ್​ ಎನ್​ಟಿಆರ್ ನಟನೆಯ 30ನೇ ಚಿತ್ರದಲ್ಲಿ ವಿಲನ್ ಆಗಿ ಸೈಫ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!