12.6 C
Munich
Monday, March 20, 2023

Comfortable is boring Says Priyanka chopra over Shah Rukh Khan Comment | ಹಾಲಿವುಡ್ ಎಂಟ್ರಿ ಬಗ್ಗೆ ಪರ-ವಿರೋಧ ಚರ್ಚೆ; ಶಾರುಖ್ ಹೇಳಿಕೆಗೆ ಉತ್ತರ ಕೊಟ್ಟ ಪ್ರಿಯಾಂಕಾ ಚೋಪ್ರಾ

ಓದಲೇಬೇಕು

ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಕೆಮಿಸ್ಟ್ರಿ ವರ್ಕ್​ ಆಗಿದೆ. ‘ಡಾನ್​’, ‘ಡಾನ್​ 2’ ಚಿತ್ರಗಳಲ್ಲಿ ಇವರನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಡಾನ್ 3’ ಚಿತ್ರ ಶೀಘ್ರವೇ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಸ್ಪಷ್ಟತೆ ಸಿಕ್ಕಿಲ್ಲ.

ಪ್ರಿಯಾಂಕಾ-ಶಾರುಖ್

ಪ್ರಿಯಾಂಕಾ ಚೋಪ್ರಾ (priyanka Chopra) ಅವರು ಭಾರತ ತೊರೆದು ಅಮೆರಿಕದಲ್ಲಿ ಸೆಟಲ್ ಆಗಿ 8 ವರ್ಷಗಳ ಮೇಲಾಗಿದೆ. ಸದ್ಯ ಅವರು ಇಂಗ್ಲಿಷ್ ಸೀರಿಸ್ ಹಾಗೂ ಫಿಲ್ಮ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಬಾಲಿವುಡ್​ಗೆ ಮರಳುವ ಯಾವುದೇ ಆಲೋಚನೆ ಇಲ್ಲ. ಭಾರತದ ಅನೇಕ ಸ್ಟಾರ್ಸ್​​ಗಳಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ. ಇಷ್ಟೆಲ್ಲ ಜನಪ್ರಿಯತೆ ಇರುವ ಹೊರತಾಗಿಯೂ ಅವರು ಹಾಲಿವುಡ್​ಗೆ ಕಾಲಿಡುತ್ತಿಲ್ಲ. ಬೇರೆ ಚಿತ್ರರಂಗಕ್ಕೆ ಕಾಲಿಡುವ ಬಗ್ಗೆ ಆಯಾ ಸ್ಟಾರ್ಸ್​​ಗಳು ತಮ್ಮದೇ ಆದ ನಿಲುವು ಹೊಂದಿದ್ದಾರೆ. ಈ ವಿಚಾರದ ಬಗ್ಗೆ ಶಾರುಖ್ ಖಾನ್ ಅವರು ಈ ಮೊದಲು ಮಾತನಾಡಿದ್ದರು. ಇದಕ್ಕೆ ಪ್ರಿಯಾಂಕಾ ಚೋಪ್ರಾ ಉತ್ತರ ನೀಡಿದ್ದಾರೆ. ಇದು ಪ್ರತಿಕ್ರಿಯೆಯೋ ಅಥವಾ ತಿರುಗೇಟೋ ಎಂಬ ಬಗ್ಗೆ ಫ್ಯಾನ್ಸ್​​ಗೆ ಗೊಂದಲ ಮೂಡಿದೆ.

ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಕೆಮಿಸ್ಟ್ರಿ ವರ್ಕ್​ ಆಗಿದೆ. ‘ಡಾನ್​’, ‘ಡಾನ್​ 2’ ಚಿತ್ರಗಳಲ್ಲಿ ಇವರನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಡಾನ್ 3’ ಚಿತ್ರ ಶೀಘ್ರವೇ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಸ್ಪಷ್ಟತೆ ಸಿಕ್ಕಿಲ್ಲ. ಒಂದೊಮ್ಮೆ ಈ ಸಿನಿಮಾ ಸೆಟ್ಟೇರಿದರೆ ಪ್ರಿಯಾಂಕಾ ಹಾಗೂ ಶಾರುಖ್ ಮತ್ತೆ ಒಂದಾಗಬಹುದು ಎಂಬುದು ಫ್ಯಾನ್ಸ್ ಊಹೆ. ಹೀಗಿರುವಾಗಲೇ ಶಾರುಖ್ ಹೇಳಿಕೆಗೆ ಪ್ರಿಯಾಂಕಾ ಉತ್ತರ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ‘ಸಿಟಾಡೆಲ್​’ ಸೀರಿಸ್ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಪ್ರಶ್ನೆ ಕೇಳಿದ ವ್ಯಕ್ತಿ ಶಾರುಖ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ‘ನನಗೆ ಇಲ್ಲೇ ಹಿತ ಎನಿಸುತ್ತದೆ. ಹೀಗಾಗಿ, ಹಾಲಿವುಡ್​ಗೆ ಹೋಗಿಲ್ಲ ಎಂದು ಶಾರುಖ್ ಹೇಳಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎಂದು ಪ್ರಿಯಾಂಕಾ ಚೋಪ್ರಾಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿಇದನ್ನೂ ಓದಿ:  ವಿದೇಶದಲ್ಲೂ ಹೋಳಿ ಆಚರಿಸಿದ ಪ್ರಿಯಾಂಕಾ ಚೋಪ್ರಾ; ಅತಿಥಿಯಾಗಿ ಸಾಥ್​ ನೀಡಿದ ಪ್ರೀತಿ ಜಿಂಟಾ

‘ಆರಾಮಗಿರೋದು ನನಗೆ ಬೇಸರವಾಗಿದೆ. ಹಾಗಂತ ನಾನು ಅಹಂಕಾರಿ ಅಲ್ಲ. ನಾನು ಆತ್ಮ ವಿಶ್ವಾಸ ಹೊಂದಿದ್ದೇನೆ. ನಾನು ಸೆಟ್‌ಗೆ ಹೋದಾಗ ಏನು ಮಾಡುತ್ತೇನೆ ಅನ್ನೋದು ನನಗೆ ಗೊತ್ತು. ನಾನು ಹೇಗೆ ಅನ್ನೋದನ್ನು ಯಾರೂ ಹೇಳಬೇಕಿಲ್ಲ. ಒಂದು ದೇಶದಲ್ಲಿ ಸಿಕ್ಕ ಯಶಸ್ಸಿನ ಮೂಟೆಯನ್ನು ಮತ್ತೊಂದು ದೇಶಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಈಗಲೂ ನಾನು ಆಡಿಷನ್ ತೆಗೆದುಕೊಳ್ಳಲು ಸಿದ್ಧನಿದ್ದೇನೆ’ ಎಂದಿದ್ದಾರೆ ಅವರು.

ಸಿಟಾಡೆಲ್ ಸೀರಿಸ್ ಏಪ್ರಿಲ್ 28ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣಲಿದೆ. ಇದರಲ್ಲಿ ಪ್ರಿಯಾಂಕಾ ಅವರು ಸ್ಪೈ ಪಾತ್ರ ಮಾಡುತ್ತಿದ್ದಾರೆ. ಈ ಸೀರಿಸ್ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!