1.2 C
Munich
Tuesday, March 7, 2023

Conrad Sangma sworn in as Chief Minister of Meghalaya national News in kannada | Chief Minister of Meghalaya: ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ

ಓದಲೇಬೇಕು

ಮೇಘಾಲಯದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಅವರು ಇಂದು (ಮಾ.7) ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶಿಲ್ಲಾಂಗ್: ಮೇಘಾಲಯ(Meghalaya) ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ (Conrad Sangma) ಅವರು ಇಂದು (ಮಾ.7) ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮೇಘಾಲಯದ ರಾಜ್ಯಪಾಲ ಫಾಗು ಚೌಹಾಣ್ ಅವರು ಸಂಗ್ಮಾ ಅವರಿಗೆ ಮುಖ್ಯಮಂತ್ರಿಯಾಗಿ ಮತ್ತು ಇಬ್ಬರು ನಾಯಕರಿಗೆ ಉಪಮುಖ್ಯಮಂತ್ರಿಯಾಗಿ, ಇತರ ಒಂಬತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಚುನಾಯಿತರಾದ ಹನ್ನೊಂದು ಶಾಸಕರು ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಪ್ರೆಸ್ಟೋನ್ ಟೈನ್ಸಾಂಗ್ ಮತ್ತು ಸ್ನಿಯಾವ್ಭಲ್ಯಾಂಡ್ ಧಾರ್ ಇರಲಿದ್ದಾರೆ. ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ 2.0 ಎಂದು ಕರೆಯಲ್ಪಡುವ ಹೊಸ ಸರ್ಕಾರವನ್ನು ರಚನೆ ಮಾಡಿದೆ. ಈ ಸಚಿವ ಸಂಪುಟವು ಎಂ ಅಂಪಾರೀನ್ ಲಿಂಗ್ಡೋಹ್ ಎಂಬ ಒಬ್ಬ ಮಹಿಳಾ ಸಚಿವರನ್ನು ಹೊಂದಿದೆ.

ಹೊಸ ಕ್ಯಾಬಿನೆಟ್‌ನಲ್ಲಿ ಎನ್‌ಪಿಪಿ ಪಕ್ಷದಿಂದ ರಕ್ಕಮ್ ಎ ಸಂಗ್ಮಾ, ಮಾರ್ಕ್ಯೂಸ್ ಎಂ ಮರಕ್, ಎಟಿ ಮೊಂಡಲ್ ಮತ್ತು ಕಮಿಂಗೋನ್ ಯಂಬನ್​​. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಯಿಂದ ಪಾಲ್ ಲಿಂಗ್ಡೋಹ್ ಮತ್ತು ಕಿರ್ಮೆನ್ ಶೈಲ್ಲಾ ಹಾಗೂ ಬಿಜೆಪಿಯಿಂದ ಎಎಲ್ ಹೆಕ್ ಮತ್ತು ಶಕ್ಲಿಯಾರ್ ವಾರ್ಜ್ರಿ, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದಿಂದ ಎಚ್‌ಎಸ್‌ಪಿಡಿಪಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 50 ವರ್ಷಗಳ ಗಡಿ ವಿವಾದ ಬಗೆಹರಿಸಲು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳಿಂದ ಐತಿಹಾಸಿಕ ಒಪ್ಪಂದಕ್ಕೆ ಸಹಿ

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಕಳೆದ ತಿಂಗಳು ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು ಆದರೆ ಸರಿಯಾದ ಬಹುಮತ ಬರುವ ಸಾಧ್ಯತೆವಿಲ್ಲ ಎಂದು ಹೊಸ ಸರ್ಕಾರವನ್ನು ರಚಿಸಲು ಚುನಾವಣೋತ್ತರ ಮೈತ್ರಿ ಮಾಡಿಕೊಂಡರು.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!