4.8 C
Munich
Friday, March 10, 2023

cough syrup : Licenses of six cough syrup manufacturers suspended for rule violations, Maha govt tells Assembly | Cough Syrup Makers: ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿ ರದ್ದುಗೊಳಿಸಿದ ಸರ್ಕಾರ

ಓದಲೇಬೇಕು

ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿಗಳನ್ನು ಸರ್ಕಾರ ರದ್ದುಗೊಳಿಸಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಸಂಜಯ್ ರಾಥೋಡ್ ಹೇಳಿದ್ದಾರೆ.

ಕೆಮ್ಮಿನ ಸಿರಪ್

ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿಗಳನ್ನು ಸರ್ಕಾರ ರದ್ದುಗೊಳಿಸಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಸಂಜಯ್ ರಾಥೋಡ್ ಹೇಳಿದ್ದಾರೆ. ಅವುಗಳಲ್ಲಿ ನಾಲ್ವರಿಗೆ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದ್ದು, ಆರು ಕಂಪನಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿದ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಚಿವರು ಹೇಳಿದರು. ಭಾರತದಿಂದ ಆಮದು ಮಾಡಿಕೊಂಡ ಕೆಮ್ಮು ಸಿರಪ್‌ನಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವನ್ನು ಶೇಲಾರ್ ಉಲ್ಲೇಖಿಸಿದ್ದಾರೆ.

ಆದರೆ ಆ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಂಪನಿಯು ಹರಿಯಾಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದು ಸಚಿವರು ಹೇಳಿದರು.

ಮತ್ತಷ್ಟು ಓದಿ: Cough Syrup: ಭಾರತದಲ್ಲಿ ತಯಾರಾದ ಶೀತ-ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು

ಆದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಉತ್ಪನ್ನಗಳನ್ನು (ರಾಜ್ಯದಿಂದ) ರಫ್ತು ಮಾಡುವಾಗ GMP (ಉತ್ತಮ ಉತ್ಪಾದನಾ ಅಭ್ಯಾಸ) ಪ್ರಮಾಣೀಕರಣ ಮತ್ತು ಔಷಧೀಯ ಉತ್ಪನ್ನಗಳ ಪ್ರಮಾಣೀಕರಣದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳನ್ನು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ.

ಅಧ್ಯಕ್ಷ ಸಂಜಯ್ ಶಿರ್ಸತ್ ಮಾತನಾಡಿ, ಶೇ.20 ರಷ್ಟು ತಯಾರಕರು ಶಂಕಿತ ನಿಯಮಗಳ ಉಲ್ಲಂಘನೆಯ ಕಾರಣದಿಂದ ದಾಳಿಗಳನ್ನು ಎದುರಿಸಿದರೆ, ಇದು ಜನರ ಜೀವನದ ಜೊತೆ ಚೆಲ್ಲಾಟವಾಡುವುದರಿಂದ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ರಾಜ್ಯದಲ್ಲಿ 996 ಅಲೋಪತಿ ಔಷಧ ತಯಾರಕರ ಪೈಕಿ 514 ಕಂಪನಿಗಳು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ ಎಂದು ರಾಥೋಡ್ ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!