7.5 C
Munich
Sunday, March 26, 2023

Covid Cases increase Union Ministry of Health and Family Welfare issues new guidelines | Covid-19 Guidelines: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಓದಲೇಬೇಕು

ದೇಶಾದ್ಯಂತ ಕಳೆದ ವಾರದಲ್ಲಿ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ -19 ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೋವಿಡ್-19 ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ

ಹೊಸದಿಲ್ಲಿ: ದೇಶಾದ್ಯಂತ ಕಳೆದ ವಾರದಲ್ಲಿ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ -19 ನಿಯಂತ್ರಣಕ್ಕಾಗಿ ಹೊಸ (ಪರಿಷ್ಕೃತ) ಮಾರ್ಗಸೂಚಿಗಳನ್ನು (Covid-19 Guidlines) ಬಿಡುಗಡೆ ಮಾಡಿದೆ. ಪರಿಷ್ಕೃತ Ccovid-19 ಮಾರ್ಗಸೂಚಿಗಳ ಪ್ರಕಾರ, “ದೈಹಿಕ ಅಂತರ, ಒಳಾಂಗಣ ಮಾಸ್ಕ್ ಬಳಕೆ, ಕೈ ಸ್ವಚ್ಛಗೊಳಿಸುವುದು, ರೋಗಲಕ್ಷಣದ ನಿರ್ವಹಣೆ (ಜಲೀಕರಣ, ಆಂಟಿಪೈರೆಟಿಕ್ಸ್, ಆಂಟಿಟಸ್ಸಿವ್) ತಾಪಮಾನ ಪರಿಶೀಲನೆ ಮಾಡಬೇಕು. ಉಸಿರಾಟದ ತೊಂದರೆ, ಅಧಿಕ ಜ್ವರ ಅಥವಾ ತೀವ್ರ ಕೆಮ್ಮು, ವಿಶೇಷವಾಗಿ 5 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ತಕ್ಷಣದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಮಧ್ಯಮ ಅಥವಾ ತೀವ್ರತರವಾದ ಆರೋಗ್ಯ ಸಮಸ್ಯೆ ಕಂಡುಬಂದರೆ ರೆಮ್‌ಡೆಸಿವಿರ್ ಲಸಿಕೆಯನ್ನು 5 ದಿನಗಳವರೆಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ಕೋವಿಡ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆಗಳ ಕಾರ್ಯತಂತ್ರವನ್ನು ಅನುಸರಿಸುವಂತೆ ಪತ್ರ ಬರೆದಿದೆ.

ಇದನ್ನೂ ಓದಿ: ಸೌಮ್ಯವಾದ ಜ್ವರವು ಔಷಧಿಗಳಿಗಿಂತ ವೇಗವಾಗಿ ದೇಹದ ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ

ಕಳೆದ ಕೆಲವು ತಿಂಗಳುಗಳಲ್ಲಿ ಭಾರತವು ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿತ್ತು. ಆದಾಗ್ಯೂ, ಕಳೆದ ಕೆಲವು ವಾರಗಳಲ್ಲಿ ನಿರ್ದಿಷ್ಟವಾಗಿ ಕೆಲವು ರಾಜ್ಯಗಳಲ್ಲಿನ ಕೋವಿಡ್ ಪತ್ತೆ ಪ್ರಕರಣಗಳಲ್ಲಿ ಹೆಚ್ಚಳಗೊಂಡಿದೆ. ಮಾರ್ಚ್ 8 ರ ಕೊನೆಗೊಂಡ ವಾರದಲ್ಲಿ ಒಟ್ಟು 2,082 ಪ್ರಕರಣಗಳು ವರದಿಯಾಗಿದ್ದವು. ಈ ಸಂಖ್ಯೆ ಮಾರ್ಚ್ 15 ಕ್ಕೆ ಕೊನೆಗೊಂಡ ವಾರದಲ್ಲಿ 3,264 ಪ್ರಕರಣಗಳಿಗೆ ಏರಿದೆ ಎಂದು ಸಚಿವಾಲಯವು ಪತ್ರದಲ್ಲಿ ತಿಳಿಸಿದೆ.

ಗುಜರಾತ್​ನಲ್ಲಿ ಮಾರ್ಚ್ 8ಕ್ಕೆ ಕೊನೆಗೊಂಡ ವಾರದಲ್ಲಿ ಇದ್ದ 105 ಕೋವಿಡ್ ಪ್ರಕರಣಗಳ ಸಂಖ್ಯೆ ಒಂದೇ ವಾರದಲ್ಲಿ 279 ಕ್ಕೆ ಹೆಚ್ಚಳಗೊಂಡಿದೆ ಎಂದು ವರದಿಯಾಗಿದೆ. ಶೇಕಡಾವಾರು ನೋಡುವುದಾದರೆ, ಮಾರ್ಚ್ 15 ಕ್ಕೆ ಕೊನೆಗೊಂಡ ವಾರದಲ್ಲಿ ರಾಜ್ಯವು 1.11 ರಷ್ಟು ಪಾಸಿಟಿವ್ ಕೇಸ್​ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ ಭಾರತದ ಪಾಸಿಟಿವಿಟಿ ದರ ಶೇ.0.61 ರಲ್ಲಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!