9.8 C
Munich
Thursday, March 9, 2023

Crime News: Including Newborn Baby 2 Children Dead In LPG Cylinder Blast In Noida | Crime News: ನೊಯ್ಡಾದಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ; ಇಬ್ಬರು ಮಕ್ಕಳು ಸಾವು

ಓದಲೇಬೇಕು

ಇಬ್ಬರು ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮೃತರಲ್ಲಿ 12 ವರ್ಷದ ಮಗು ಮತ್ತು 12 ದಿನದ ನವಜಾತ ಹೆಣ್ಣು ಮಗು ಸೇರಿದೆ.

ಸಾಂದರ್ಭಿಕ ಚಿತ್ರ

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾದ (Noida) ಸೆಕ್ಟರ್ 8ರ ಕೊಳೆಗೇರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು (LPG Cylinder Blast) ನವಜಾತ ಶಿಶು ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ನೊಯ್ಡಾದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ನವಜಾತ ಶಿಶು ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಗಾಯಗೊಂಡ ಇತರ ನಾಲ್ವರನ್ನು ದೆಹಲಿಯ ಸಫ್ದರ್‌ಗಂಜ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನೊಯ್ಡಾದ ಮೊದಲ ಹಂತದಲ್ಲಿರುವ ಗುಡಿಸಲಿಗೆ ಬೆಂಕಿ ತಗುಲಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿತು. ಕೂಡಲೇ ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ಆರಿಸುವ ಕಾರ್ಯವನ್ನು ಆರಂಭಿಸಿತ್ತು. ಈ ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ಬೆಂಕಿಯನ್ನು ನಿಯಂತ್ರಿಸಲಾಯಿತು.

ಇದನ್ನೂ ಓದಿ: Fire Accident: ರಾಯಚೂರಿನ ಐಡಿಎಸ್​ಎಂಡಿ ಲೇಔಟ್​ ಬಳಿಯ ಬೆಟ್ಟದ ತಪ್ಪಲಿನಲ್ಲಿ ಧಗಧಗಿಸುತ್ತಿರುವ ಬೆಂಕಿ

ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ತಂಡವು ಗಾಯಾಳುಗಳನ್ನು ಕೂಡಲೇ ನಿತಾರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮೃತರಲ್ಲಿ 12 ವರ್ಷದ ಮಗು ಮತ್ತು 12 ದಿನದ ನವಜಾತ ಹೆಣ್ಣು ಮಗು ಸೇರಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಗ್ಯಾಸ್ ಸಿಲಿಂಡರ್ ಸೋರಿಕೆಯೇ ಈ ಬೆಂಕಿ ದುರಂತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!