Daali Dhananjay | Hoysala Movie: ‘ಆನಂದ್ ಆಡಿಯೋ’ ಯೂಟ್ಯೂಬ್ ಮೂಲಕ ‘ಹೊಯ್ಸಳ’ ಟ್ರೇಲರ್ ರಿಲೀಸ್ ಆಗಲಿದೆ. ಡಾಲಿ ನಿರ್ವಹಿಸಿರುವ ಗುರುದೇವ್ ಹೊಯ್ಸಳ ಎಂಬ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಡಾಲಿ ಧನಂಜಯ್
ಯಾವ ಪಾತ್ರ ಕೊಟ್ಟರೂ ಸೈ ಎನ್ನುವಂತಹ ನಟ ಡಾಲಿ ಧನಂಜಯ್ (Daali Dhananjay) ಅವರು ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಗೆಟಪ್ ಪ್ರಯತ್ನಿಸುತ್ತಾರೆ. ಈಗ ಅವರು ಅಭಿನಯಿಸಿರುವ 25ನೇ ಸಿನಿಮಾ ‘ಹೊಯ್ಸಳ’ (Hoysala Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಧನಂಜಯ್ ಅವರು ಚಂದನವನಕ್ಕೆ ಕಾಲಿಟ್ಟಿದ್ದು 2013ರಲ್ಲಿ. ನೋಡ ನೋಡುತ್ತಿದ್ದಂತೆಯೇ ಅವರು 25ನೇ ಸಿನಿಮಾದ ಮೈಲಿಗಲ್ಲು ತಲುಪಿದ್ದಾರೆ. ಅವರ ಪ್ರತಿ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಇರುತ್ತದೆ. ಅದರಲ್ಲೂ ‘ಹೊಯ್ಸಳ’ ಸಿನಿಮಾ ಹೆಚ್ಚು ಕೌತುಕ ಮೂಡಿಸಿದೆ. ಅದಕ್ಕೆ ಕಾರಣ ಪೊಲೀಸ್ ಗೆಟಪ್. ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಮಾರ್ಚ್ 20ರ ಸಂಜೆ 7.29ಕ್ಕೆ ‘ಹೊಯ್ಸಳ’ ಟ್ರೇಲರ್ ರಿಲೀಸ್ (Hoysala Movie Trailer) ಆಗಲಿದೆ.
ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ಗುರುದೇವ್ ಹೊಯ್ಸಳ ಎಂಬ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಹಾಡು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪೋಸ್ಟರ್ಗಳಲ್ಲಿ ಡಾಲಿ ಧನಂಜಯ್ ಅವರ ಗೆಟಪ್ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಲು ‘ಹೊಯ್ಸಳ’ ತಂಡ ಸಜ್ಜಾಗಿದೆ.
ಇದನ್ನೂ ಓದಿ: 19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್
‘ಹೊಯ್ಸಳ’ ಟ್ರೇಲರ್ ಯಾವಾಗ ಬರಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಆ ಕಾಯುವಿಕೆಗೆ ಮಾರ್ಚ್ 20ರ ಸಂಜೆ 7.29ಕ್ಕೆ ಫಲ ಸಿಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಟ್ರೇಲರ್ ರಿಲೀಸ್ ಆಗಲಿದೆ. ಡಾಲಿ ನಿರ್ವಹಿಸಿರುವ ಗುರುದೇವ್ ಹೊಯ್ಸಳ ಎಂಬ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಅನುಮಾನಗಳಿವೆ. ಈ ಚಿತ್ರದಲ್ಲಿ ಡಾಲಿ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆಯಾ? ಗುರುದೇವ್ ಹೊಯ್ಸಳ ಒಳ್ಳೆಯ ಅಧಿಕಾರಿಯಾ ಅಥವಾ ಕೆಟ್ಟವನಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: Daali Dhananjay: ‘ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕೆ ಸಾವಿರಾರು ಜನ ಯಾಕೆ ಸೇರುತ್ತಿದ್ದರು?’: ಕಾರಣ ತಿಳಿಸಿದ ನಟ ಧನಂಜಯ್
‘ಹೊಯ್ಸಳ’ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇವರಿಬ್ಬರನ್ನು ತೆರೆಮೇಲೆ ಒಟ್ಟಿಗೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
𝐆𝐮𝐫𝐮𝐝𝐞𝐯 𝐇𝐨𝐲𝐬𝐚𝐥𝐚 𝐑𝐞𝐩𝐨𝐫𝐭𝐬 𝐨𝐧 𝟐𝟎.𝟎𝟑.𝟐𝟑 𝐚𝐭 𝟕:𝟐𝟗𝐏𝐌💥#EeSalaHoysala #GurudevHoysala in theatres on 30th March.@Dhananjayaka #VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB @yes__karthik pic.twitter.com/tlATC2YnOn
— KRG Studios (@KRG_Studios) March 15, 2023
ಮಾರ್ಚ್ 30ರಂದು ‘ಹೊಯ್ಸಳ’ ಸಿನಿಮಾ ರಿಲೀಸ್ ಆಗಲಿದೆ. ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆ ಮೂಲಕ ಯೋಗಿ ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪಕ್ಕಾ ಕಮರ್ಷಿಯಲ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಒಂದು ಸಾಮಾಜಿಕ ಸಂದೇಶ ಇರಲಿದೆ. ಅದೇನು ಎಂಬುದು ತಿಳಿದುಕೊಳ್ಳಲು ಮಾರ್ಚ್ 30ರ ತನಕ ಕಾಯಬೇಕು. ಈ ಸಿನಿಮಾಗೆ ವಿಜಯ್ ಎನ್. ಅವರು ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.