4 C
Munich
Friday, February 24, 2023

Dakshina Kannada: One of the two elephants that killed two people has been captured in Dakshina Kannada | ಇಬ್ಬರನ್ನು ಕೊಂದಿದ್ದ ಎರಡು ಕಾಡಾನೆ ಪೈಕಿ ಒಂದು ಕಾಡಾನೆ ಸೆರೆ: ಅಭಿಮನ್ಯು ನೇತೃತ್ವದ 5 ಸಾಕಾನೆಗಳಿಂದ ಯಶಸ್ವಿ ಕಾರ್ಯಾಚರಣೆ

ಓದಲೇಬೇಕು

ಇಬ್ಬರನ್ನು ಕೊಂದಿದ್ದ ಎರಡು ಕಾಡಾನೆ ಪೈಕಿ ಒಂದು ಕಾಡಾನೆಯನ್ನು ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

ಕಾಡಾನೆ ಸೆರೆ

ದಕ್ಷಿಣ ಕನ್ನಡ: ಇಬ್ಬರನ್ನು ಕೊಂದಿದ್ದ ಎರಡು ಕಾಡಾನೆ (Elephant) ಪೈಕಿ ಒಂದು ಕಾಡಾನೆಯನ್ನು ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಅರಿವಳಿಕೆ ಚುಚ್ಚುಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯಲಾಗಿದೆ. ಅಭಿಮನ್ಯು ನೇತೃತ್ವದ 5 ಸಾಕಾನೆಗಳಿಂದ ಯಶಸ್ವಿ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಲಾಗಿದೆ. ಫೆಬ್ರವರಿ 20ರಂದು ಎರಡು ಕಾಡಾನೆಗಳು ಇಬ್ಬರನ್ನು ಬಲಿಪಡೆದಿದ್ದವು. ಕಡಬದ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಘಟನೆ ನಡೆದಿತ್ತು. 3ನೇ ದಿನ ನಡೆದ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆ ಸೆರೆಯಾಗಿದ್ದು, ಕಾಡಾನೆ ಸೆರೆ ಸಿಕ್ಕ 1 ಕಿ.ಮೀ ವ್ಯಾಪ್ತಿಯಲ್ಲಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕಾಡಾನೆ ಸೆರೆಗೆ ‘ಆಪರೇಷನ್ ಎಲಿಫೆಂಟ್’

ಈ ಘಟನೆ ಸಂಬಂಧ ಕಾಡಾನೆ ಸೆರೆಗೆ ‘ಆಪರೇಷನ್ ಎಲಿಫೆಂಟ್ (Operation Elephant)’ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅರಣ್ಯ ಇಲಾಖೆ ಐದು ಸಾಕಾನೆಗಳಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ನಾಗರಹೊಳೆ ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಕಡಬಕ್ಕೆ ಐದು ಸಾಕಾನೆಗಳು ಆಗಮಿಸಿದ್ದು ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್, ಮಹೇಂದ್ರ ಹೆಸರಿನ ಆನೆಗಳು ಕಾಡಾನೆಗಾಗಿ ಫೀಲ್ಡ್​ಗೆ ಇಳಿದಿದ್ದವು. ಐದು ತಂಡಗಳ ನೇತೃತ್ವದಲ್ಲಿ ರೆಂಜಿಲಾಡಿ, ಕುಟ್ರುಪಾಡಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಂಗಳೂರು: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವು; ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಮಂಗಳೂರು ವಿಭಾಗದ ಡಿಸಿಎಫ್ ಡಾ. ದಿನೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 50 ಕ್ಕೂ ಹೆಚ್ಚು ಸಿಬ್ಬಂದಿ, ಮಾವುತರು, ಕಾವಾಡಿಗರು, ಸ್ಥಳೀಯರ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೆ ಇದರಲ್ಲಿ ನಾಗರಹೊಳೆ ಹಾಗೂ ಮಂಗಳೂರಿನ ತಜ್ಞ ವೈದ್ಯಾಧಿಕಾರಿಗಳ ತಂಡವು ಭಾಗಿಯಾಗಿದ್ದವು.

ಡ್ರೋನ್ ಕ್ಯಾಮೆರಾ ಮೂಲಕ ಕಾಡಾನೆಗಳ ಚಲನವಲನ ಟ್ರ್ಯಾಕ್ ಮಾಡಿ ಕಾಡಾನೆ ಸೆರೆಗೆ ಪ್ಲಾನ್ ಮಾಡಲಾಗಿತ್ತು. ಅರಣ್ಯ ಇಲಾಖೆಯ ಪ್ರಕಾರ ನಾಲ್ಕು ಕಾಡಾನೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಫೆ. 20ರಂದು ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದವು. ಇದರ ಸಾಕಾನೆಗಳು ಕಾಡಾನೆಗಳನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದವು.

ಇದನ್ನೂ ಓದಿ: ಸೌದಿ ಅರೇಬಿಯಾ: ಒಂಟೆಗೆ ಕಾರು ಡಿಕ್ಕಿ ಹೊಡೆದು ಮಂಗಳೂರಿನ ಮೂವರು, ಬಾಂಗ್ಲಾದ ಓರ್ವನ ಸಾವು

ಘಟನೆ ಹಿನ್ನೆಲೆ

ಪೇರಡ್ಕ ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂದಿನಂತೆ ತನ್ನ ಕೆಲಸಕ್ಕೆ ಹೊರಟ್ಟಿದ್ದಳು. ಆದರೆ ಮಾರ್ಗಮಧ್ಯದಲ್ಲಿ ಎದುರಿಗೆ ಆನೆ ಪ್ರತ್ಯಕ್ಷವಾಗಿದೆ. ಇದರಿಂದ ಭಯಗೊಂಡ ರಂಜಿತಾ ಕಿರುಚುತ್ತಾ ಓಡಲು ಆರಂಭಿಸಿದ್ದಾರೆ. ಮನೆಯ ಸಮೀಪ ಯುವತಿ ಕಿರುಚುವ ಧ್ವನಿ ಕೇಳಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಮೇಶ್​ ರೈ ಕೂಡ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಅಲ್ಲೇ ಇದ್ದ ಇನ್ನೊಂದು ಆನೆ ರಮೇಶ್​ ರೈನನ್ನು ಬೆನ್ನಟ್ಟಿದೆ. ಆನೆಯ ಅಟ್ಟಹಾಸಕ್ಕೆ ರಮೇಶ್​ ರೈ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ರೆ ಇತ್ತ ಆನೆ ದಾಳಿಗೆ ಒಳಗಾದ ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!