ರೌಡಿಶೀಟರ್ಗಳು ರೌಡಿಶೀಟರ್ಗಳ ಮೇಲೆ ಭೀಕರ ದಾಳಿ ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಭೀಕರ ಘಟನೆಯಲ್ಲಿ ಓರ್ವ ರೌಡಿಶೀಟರ್ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರವಾಗಿದ್ದಾನೆ.
ಸಾಂದರ್ಭಿಕ ಚಿತ್ರ
ದಾವಣಗೆರೆ: ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ರೌಡಿಶೀಟರ್ಗಳ ಮೇಲೆ ದಾಳಿ ನಡೆಸಿದ ರೌಡಿಶೀಟರ್ಗಳು ಓರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ (Murder of Rowdy sheeter) ಮಾಡಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ರೌಡಿಶೀಟರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಆಂಜನೇಯ ಅಲಿಯಾಸ್ ಅಂಜನಿ (30) ಹತ್ಯೆಯಾಗಿದ್ದು, ಮಧು (28) ಗಂಭೀರವಾಗಿ ಗಾಯಗೊಂಡ ರೌಡಿಶೀಟರ್. ಬೈಕ್ನಲ್ಲಿ ತೆರಳುತ್ತಿದ್ದಾಗ ಇತರೆ ರೌಡಿಶೀಟಗಳು ಅಂಜನಿ, ಮಧುನನ್ನು ಅಡ್ಡಗಟ್ಟಿ ಮಚ್ಚಿನಿಂದ ದಾಳಿ ನಡೆಸಿದ ಕೃತ್ಯ ಎಸಗಿದ್ದಾರೆ.
ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿಗಳಾದ ಅಂಜನಿ ಮತ್ತು ಮಧು ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಅದರಂತೆ ಇಬ್ಬರು ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಕಾರ್ಪಿಯೊ ಕಾರಿನಲ್ಲಿ ಬಂದ ಇತರೆ ರೌಡಿಶೀಟರ್ಗಳು ಬೈಕ್ ಅಡ್ಡಗಟ್ಟಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅಂಜನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮಧುನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ನ್ಯಾಮತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಅನೈತಿಕ ಸಂಬಂಧ; ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ
ಅಷ್ಟಕ್ಕೂ ಇಂದು ನಡೆದಿದ್ದೇನು?
ಹಂದಿ ಅಣ್ಣಿ ಕೊಲೆ ಪ್ರಕರಣ ಸಂಬಂಧ ಇಂದು ಮಧು ಮತ್ತು ಆಂಜನೇಯ ಕೋರ್ಟ್ಗೆ ಹಾಜರಾಗಿ ವಾಪಸ್ ಬರುತ್ತಿದ್ದರು. ಬೈಕ್ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ಗಾಡಿಯೊಂದು ಫಾಲೋ ಮಾಡಿದೆ. ಅಲ್ಲದೆ ಬೋವಿನ ಕೋವಿ ಬಳಿ ಮಧು ಮತ್ತು ಆಂಜನೇಯನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಹಲ್ಲೆ ಮಾಡಿದ ಗ್ಯಾಂಗ್ನಲ್ಲಿ ನಾಲ್ಕೈದು ಮಂದಿ ಇದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸ್ಥಳದಲ್ಲಿ ಸ್ಕಾರ್ಪಿಯೋ ಪತ್ತೆಯಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ