5.8 C
Munich
Wednesday, March 8, 2023

Davangere: Student commits suicide by hanging herself from a fan; Allegation of deceased Varshita’s parents against the hostel staff | ದಾವಣಗೆರೆ: ಫ್ಯಾನ್​ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ; ಹಾಸ್ಟೆಲ್​ ಸಿಬ್ಬಂದಿ ವಿರುದ್ಧ ಮೃತ ವರ್ಷಿತಾ ಪೋಷಕರ ಆರೋಪ

ಓದಲೇಬೇಕು

ಫ್ಯಾನ್​ಗೆ ನೇಣು ಬಿಗಿದುಕೊಂಡು ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ನಗರದ ಹಾಸ್ಟೆಲ್​ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ವರ್ಷಿತಾ(18)

ದಾವಣಗೆರೆ: ಫ್ಯಾನ್​ಗೆ ನೇಣು ಬಿಗಿದುಕೊಂಡು ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ನಗರದ ಹಾಸ್ಟೆಲ್​ನಲ್ಲಿ ನಡೆದಿದೆ. ವರ್ಷಿತಾ(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ, ಮೂಲತ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಬಸ್ಸಾಪುರ ಗ್ರಾಮದವರಾದ ವರ್ಷಿತಾ ಹರಿಹರ ನಗರದ ಕಾಲೇಜುವೊಂದರಲ್ಲಿ ಓದುತ್ತಿದ್ದಳು. ಇನ್ನು ವರ್ಷಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ಮಗಳ ಸಾವಿಗೆ ಹಾಸ್ಟೆಲ್​​​ ವಾರ್ಡನ್​​, ಸಿಬ್ಬಂದಿಯೇ ಕಾರಣ ಎಂದು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಆಕೆಯ ಪೋಷಕರು ಒತ್ತಾಯಿಸುತ್ತಿದ್ದಾರೆ. ನನ್ನ ಮಗಳು ಅತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿ ವಿಧಿಸಿ ನ್ಯಾಯ ಕೊಡಿಸುವಂತೆ ಮೃತಳ ಪೋಷಕರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ:ಜಮಖಂಡಿ: ಸಾಲಬಾಧೆ ತಾಳಲಾರದೆ ಸಲೂನ್ ಮಾಲೀಕ ಆತ್ಮಹತ್ಯೆ

ತೋಟದ ಬಾವಿಗೆ ಬಿದ್ದು ಯುವತಿ ಆತ್ಮಹತ್ಯೆ

ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ತಾಲೂಕಿನ ಬಿಳಲಖಂಡ ಸಮೀಪದ ಗುಳ್ಮೆ ಗ್ರಾಮದ ಬಳಿ ತೋಟದ ಬಾವಿಗೆ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಿನ್ನೆ(ಮಾ.7) ರಾತ್ರಿ ಮನೆ ಪಕ್ಕದಲ್ಲಿರುವ ತೋಟದ ಬಾವಿಗೆ ಬಿದ್ದು ಪ್ರತಿಭಾ ಮಂಗಳಾ ಗೊಂಡ (19) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಮೃತ ಯುವತಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಪ್ರಥಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು. ವಾರದ ಹಿಂದೆ ಮನೆಗೆ ಬಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಘಟನೆ ಕುರಿತು ‘ಯುವತಿಗೆ ತನ್ನದೆ ಕ್ಲಾಸಿನ ಯುವಕನೊಬ್ಬನ ಪರಿಚಯವಿತ್ತು, ನನ್ನ ಮಗಳ ಸಾವಿಗೆ ಆ ಯುವಕನೇ ಕಾರಣ ಎಂದು ಯುವತಿ ತಂದೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಪ್ರತ್ಯೇಕ ಎರಡು ಶವಗಳು ಪತ್ತೆ

ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ಸಮೀಪ ಕಾಲುವೆಯಲ್ಲಿ ಪ್ರತ್ಯೇಕ ಎರಡು ಶವಗಳು ಪತ್ತೆಯಾಗಿವೆ. ಯಲ್ಲಪ್ಪ ಗುಡದಪ್ಪಗೋಳ(30), ರಾಜಾಸಾಬ್ ಕಲಾಲ್(35) ಎಂಬುವವರೇ ಮೃತ ರ್ದುದೈವಿಗಳು, ಕುಡಿದ ಮತ್ತಿನಲ್ಲಿ ಮೂರು ದಿನಗಳ ಹಿಂದೆ ಯಲ್ಲಪ್ಪ ಎಂಬುವವರು ಕಾಲುವೆಗೆ ಬಿದ್ದಿದ್ದರು. ಇದಾದ ಬಳಿಕ ನಿನ್ನೆ(ಮಾ.7) ಬಟ್ಟೆ ತೊಳೆಯಲು ಹೋಗಿ ರಾಜಾಸಾಬ್ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಇದೀಗ ಸ್ವಲ್ಪ ದೂರದಲ್ಲಯೇ ಇಬ್ಬರು ಶವಗಳು ಪತ್ತೆಯಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!