7.4 C
Munich
Sunday, March 26, 2023

Deepika Das Lost Cat Found In Mangalore, Deepika Said Cat Has Been Kidnapped | Deepika Das: ಮಂಗಳೂರಿನಲ್ಲಿ ಪತ್ತೆಯಾಯ್ತು ದೀಪಿಕಾ ದಾಸ್ ಬೆಕ್ಕು, ಅಪಹರಣ ಎಂದ ನಟಿ

ಓದಲೇಬೇಕು

ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಶ್ವೇಶ್ವರ ಬಡಾವಣೆಯಿಂದ ಕಾಣೆಯಾಗಿದ್ದ ನಟಿ ದೀಪಿಕಾ ದಾಸ್​ರ ಪ್ರೀತಿಯ ಕಪ್ಪು ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ.

ದೀಪಿಕಾ ದಾಸ್

ನಟಿ ದೀಪಿಕಾ ದಾಸ್​ರ (Deepika Das) ಪ್ರೀತಿಯ ಬೆಕ್ಕು (Cat) ಕೆಲ ದಿನಗಳ ಹಿಂದೆ ಕಾಣೆಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕಿದ್ದ ದೀಪಿಕಾ ದಾಸ್ ತಮ್ಮ ಪ್ರೀತಿಯ ಬೆಕ್ಕು ಶ್ಯಾಡೊ ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ನಗದು ಬಹುಮಾನ ಕೊಡುವುದಾಗಿಯೂ ಘೋಷಿಸಿದ್ದರು. ಇದೀಗ ದೀಪಿಕಾರ ಬೆಕ್ಕು ಸಿಕ್ಕಿದೆ.

ತಮ್ಮ ಪ್ರೀತಿಯ ಬೆಕ್ಕು ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದೀಪಿಕಾ ದಾಸ್, ಬೆಂಗಳೂರಿನಲ್ಲಿ ಕಳೆದು ಹೋದ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ ಎಂದಿದ್ದಾರೆ. ಅಲ್ಲದೆ, ತಮ್ಮ ಬೆಕ್ಕು ಅಪಹರಣಕ್ಕೆ ಒಳಗಾಗಿತ್ತೆಂದು ಸಹ ಹೇಳಿದ್ದಾರೆ.

‘ಒಳ್ಳೆಯ ಸುದ್ದಿ, ನಮಗೆ ಶ್ಯಾಡೊ (ಬೆಕ್ಕು) ಸಿಕ್ಕಿತು. ಬೆಕ್ಕನ್ನು ಅಪಹರಣ ಮಾಡಿ ಮಂಗಳೂರಿಗೆ ಕಳಿಸಲಾಗಿತ್ತು. ಕೊನೆಗೂ ನಮ್ಮ ಬೆಕ್ಕು ಸಿಕ್ಕಿತು. ಬೆಕ್ಕನ್ನು ಪತ್ತೆ ಹಚ್ಚುವಲ್ಲಿ ನೆರವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಬೆಕ್ಕು ನಮ್ಮ ಕೈ ಸೇರಿದ ಬಳಿಕ ಸಂಪೂರ್ಣ ವಿವರವನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ದೀಪಿಕಾ ದಾಸ್.

ದೀಪಿಕಾ ದಾಸ್​ರ ಬೆಕ್ಕು ಏಳು ದಿನಗಳ ಹಿಂದೆ ಬೆಂಗಳೂರಿನ ವಿಶ್ವೇಶ್ವರ ಬಡಾವಣೆಯಿಂದ ನಾಪತ್ತೆಯಾಗಿತ್ತು. ಪರ್ಷಿಯನ್ ಬ್ರೀಡ್​ನ ಕಪ್ಪು ಬಣ್ಣದ ಬೆಕ್ಕನ್ನು ಹುಡುಕಿಕೊಟ್ಟವರಿಗೆ 10 ರಿಂದ 15 ಸಾವಿರ ಬಹುಮಾನ ನೀಡಲಾಗುವುದು ಎಂದು ದೀಪಿಕಾ ದಾಸ್ ಜಾಹೀರಾತು ನೀಡಿದ್ದರು. ದೀಪಿಕಾರ ಜಾಹೀರಾತಿಗೆ ನೆಟ್ಟಿಗರು ತರಹೇವಾರಿಯಾಗಿ ಪ್ರತಿಕ್ರಿಯಿಸಿದ್ದರು.

ದೀಪಿಕಾ ದಾಸ್ ಮಸ್ತ್ ಆಫರ್; ಕಳೆದ ಬೆಕ್ಕು ಹುಡುಕಿಕೊಟ್ರೆ 10-15 ಸಾವಿರ ರೂ. ಬಹುಮಾನ

ದೀಪಿಕಾರ ಕಾಣೆಯಾದ ಬೆಕ್ಕಿನ ಕುರಿತು ಕಾಳಜಿ ವ್ಯಕ್ತಪಡಿಸಿದ್ದ ನಟಿ ಸಂಜನಾ ಗಲ್ರಾನಿ, ಸಂಪೂರ್ಣ ಕಪ್ಪು ಬಣ್ಣದ ಬೆಕ್ಕುಗಳನ್ನು ವಾಮಾಚಾರಕ್ಕೆ ಬಳಸಿ ಬಲಿ ಕೊಡುವ ಆತಂಕವೂ ಇದೆ. ನನ್ನ ಕಸಿನ್ ಬಳಿ ಇದ್ದ ಕಪ್ಪು ಬಣ್ಣದ ಬೆಕ್ಕನ್ನು ಕದ್ದು ಬಲಿ ಕೊಡಲಾಗಿತ್ತು ಎಂದಿದ್ದರು.

ಹೇಗೋ ದೀಪಿಕಾ ದಾಸ್​ರ ಬೆಕ್ಕು ಪತ್ತೆಯಾಗಿದೆ. ಆದರೆ ಅದನ್ನು ಅಪಹರಣ ಮಾಡಿದ್ದು ಯಾರು, ಬೆಂಗಳೂರಿನಿಂದ ಅದು ಮಂಗಳೂರಿಗೆ ಹೋಗಿದ್ದು ಹೇಗೆ? ಅಪಹರಣ ಮಾಡಿದ್ದು ಏಕೆ? ಇಂಬಿತ್ಯಾದಿ ಪ್ರಶ್ನೆಗಳಿಗೆ ದೀಪಿಕಾ ದಾಸ್ ಅವರೇ ಉತ್ತರ ನೀಡಲಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!