3.9 C
Munich
Wednesday, March 29, 2023

Delhi Man Assaults, Pushes Woman Into Cab On Busy Road | Delhi: ನಡುರಸ್ತೆಯಲ್ಲಿ ಯುವತಿಯನ್ನು ಥಳಿಸಿ, ಬಲವಂತವಾಗಿ ಕ್ಯಾಬ್​ಗೆ ಹತ್ತಿಸಿದ ವ್ಯಕ್ತಿಯ ವಿಡಿಯೋ ವೈರಲ್

ಓದಲೇಬೇಕು

ವ್ಯಕ್ತಿಯೊಬ್ಬ ಯುವತಿಯನ್ನು ನಡು ರಸ್ತೆಯಲ್ಲಿ ಥಳಿಸಿ ಬಲವಂತವಾಗಿ ಕ್ಯಾಬ್​ನೊಳಗೆ ಕೂರಿಸಿ ಕರೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕ್ಯಾಬ್

Image Credit source: NDTV

ವ್ಯಕ್ತಿಯೊಬ್ಬ ಯುವತಿಯನ್ನು ನಡು ರಸ್ತೆಯಲ್ಲಿ ಥಳಿಸಿ ಬಲವಂತವಾಗಿ ಕ್ಯಾಬ್​ನೊಳಗೆ ಕೂರಿಸಿ ಕರೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಘಟನೆ ನಡೆಯುವಾಗ ಹಲವು ಮಂದಿ ವೀಕ್ಷಿಸುತ್ತಿದ್ದರೇ ವಿನಃ ಯುವತಿಯ ಸಹಾಯಕ್ಕೆ ಯಾರೂ ಬಾರದಿರುವುದೇ ವಿಪರ್ಯಾಸ.

ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ದೆಹಲಿಯ ಮಂಗೋಲ್ಪುರಿ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ವಿವರವಾದ ವರದಿಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ, ಯುವತಿಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು  ಕ್ರಮ ಕೈಗೊಂಡಿದ್ದಾರೆ.

ಕ್ಯಾಬ್ ಮಾಲೀಕನ ವಿಳಾಸ ಗುರುಗ್ರಾಮ ಆಗಿದ್ದು, ಪೊಲೀಸ್ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ವಾಹನ ಮತ್ತು ಚಾಲಕನನ್ನು ಪತ್ತೆಹಚ್ಚಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ:Bengaluru Crime: ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದಿದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಾಫ್ಟ್‌ವೇರ್ ಗಂಡ‌

ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ ರೋಹಿಣಿಯಿಂದ ವಿಕಾಸಪುರಿಗೆ ಊಬರ್ ಮೂಲಕ ವಾಹನವನ್ನು ಬುಕ್ ಮಾಡಿದ್ದರು. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ, ಹೊಡೆದಾಟ ನಡೆದಿದೆ. ಜಗಳದ ನಂತರ ಹುಡುಗಿ ಅಲ್ಲಿಂದ ಹೊರಡಲು ಬಯಸಿದ್ದಳು. ಬಾಲಕ ಬಾಲಕಿಯನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದಲ್ಲದೇ ಶನಿವಾರ ತಡರಾತ್ರಿ 11:30ರ ಸುಮಾರಿಗೆ ಗುರುಗ್ರಾಮ್‌ನ ಇಫ್ಕೋ ಚೌಕ್‌ನಲ್ಲಿ ಈ ಕ್ಯಾಬ್ ಕಾಣಿಸಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಅದರ ಸಿಸಿಟಿವಿ ದೃಶ್ಯಾವಳಿಯೂ ಪೊಲೀಸರಿಗೆ ಸಿಕ್ಕಿದೆ. ರಾತ್ರಿ ಕ್ಯಾಬ್ ಚಲಾಯಿಸುತ್ತಿದ್ದ ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!