2.2 C
Munich
Saturday, March 11, 2023

Delhi Mayor Election: AAP, BJP councillors continue to clash inside the House | Delhi Mayor Election: ಎಎಪಿ, ಬಿಜೆಪಿ ಮಹಿಳಾ ಕೌನ್ಸಿಲರ್​ಗಳ ನಡುವೆ ಘರ್ಷಣೆ, ಪರಸ್ಪರ ಪೆಟ್ಟಿಗೆಗಳನ್ನು ಎಸೆದು ಗದ್ದಲ, ಮಾತಿನೇಟು

ಓದಲೇಬೇಕು

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಎಎಪಿ ಹಾಗೂ ಬಿಜೆಪಿ ಮಹಿಳಾ ಕೌನ್ಸಿಲರ್​ಗಳ ನಡುವೆ ಘರ್ಷಣೆ ಶುರುವಾಗಿದೆ. ಬುಧವಾರ ಐದನೇ ಬಾರಿಗೆ ಸದನವನ್ನು ಮುಂದೂಡಲಾಗಿತ್ತು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಎಎಪಿ ಹಾಗೂ ಬಿಜೆಪಿ ಮಹಿಳಾ ಕೌನ್ಸಿಲರ್​ಗಳ ನಡುವೆ ಘರ್ಷಣೆ ಶುರುವಾಗಿದೆ. ಬುಧವಾರ ಐದನೇ ಬಾರಿಗೆ ಸದನವನ್ನು ಮುಂದೂಡಲಾಗಿತ್ತು. ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಭರ್ಜರಿ ಗೆಲುವು ಸಾಧಿಸಿದ್ದರು. ಎಎಪಿಯು 150 ಮತ ಗಳಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿತ್ತು.

ಚುನಾವಣೆ ವೇಳೆ ಕೌನ್ಸಿಲರ್​ಗಳು ಮೊಬೈಲ್ ಮೂಲಕ ಮತ ಯಂತ್ರಗಳ ಚಿತ್ರವನ್ನು ತೆಗೆಯುತ್ತಿದ್ದರು, ಇದು ಮತದಾನ ಉಲ್ಲಂಘನೆಯಾದಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆಗ ಗದ್ದಲ ಶುರುವಾಗಿತ್ತು, ಹಾಗಾಗಿ ಈ ಮತಗಳನ್ನು ತಿರಸ್ಕರಿಸಿ ಹೊಸದಾಗಿ ಚುನಾವಣೆ ನಡೆಸಿ ಎಂದು ಒತ್ತಾಯಿಸಿದೆ.

ಮತ್ತಷ್ಟು ಓದಿ: Delhi Mayor Polls: ಫೆ.22ಕ್ಕೆ ಮೇಯರ್ ಚುನಾವಣೆ ಘೋಷಣೆ

250 ವಾರ್ಡ್​ಗಳಿಗೆ ನಡೆದಿದ್ದ ದೆಹಲಿ ಚುನಾವಣೆಯಲ್ಲಿ ಎಎಪಿ 134, ಬಿಜೆಪಿ 104, ಕಾಂಗ್ರೆಸ್ 9 ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಗದ್ದಲ, ಗಲಾಟೆಯ ಹಿನ್ನೆಲೆಯಲ್ಲಿ 4 ಬಾರಿ ದೆಹಲಿ ಮೇಯರ್ ಚುನಾವಣೆಯನ್ನು ಮುಂದೂಡಲಾಗಿತ್ತು. ಪಾಲಿಕೆ ಚುನಾವಣೆ ನಡೆದು 2 ತಿಂಗಳ ಬಳಿಕ ಮೇಯರ್ ಆಯ್ಕೆ ಮಾಡಲಾಗಿದೆ.

150 ಮತಗಳನ್ನು ಪಡೆಯುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಮೇಯರ್ ಪಟ್ಟ ಸಿಕ್ಕಿದೆ. ದೆಹಲಿ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಸದಸ್ಯರಿಗೂ ಮತದಾನದ ಹಕ್ಕು ನೀಡಿದ್ದರು. ಇದೇ ವಿಚಾರಕ್ಕೆ ಪಾಲಿಕೆ ಸಭಾಂಗಣದಲ್ಲಿ ಗದ್ದಲ ನಡೆದಿತ್ತು.

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!