9.7 C
Munich
Thursday, March 30, 2023

Devanahalli: Doctor falls victim to Highway Authority’s negligence, unscientific hump inviting death | ದೇವನಹಳ್ಳಿ: ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವೈದ್ಯನ ಬಲಿ, ಸಾವಿಗೆ ಆಹ್ವಾನ ನೀಡುತ್ತಿರುವ ಅವೈಜ್ಞಾನಿಕ ಹಂಪ್

ಓದಲೇಬೇಕು

ಅದು ನಂದಿಬೆಟ್ಟ ಸೇರಿದಂತೆ ಇತ್ತೀಚೆಗೆ ಓಪನ್ ಆದ ಈಶಾ ಪೌಂಡೇಶನ್​ಗೆ ಸಂಪರ್ಕ ಕಲ್ಪಿಸುವ ಪ್ರಮುಖ‌ ಹೆದ್ದಾರಿ. ಹೀಗಾಗೆ ವೀಕೆಂಡ್ ಬಂದ್ರೆ ಸಾಕು ಸಾವಿರಾರು ವಾಹನಗಳು ಆ ಹೆದ್ದಾರಿಯಲ್ಲಿ ಬರ್ತಿದ್ದು‌, ಹೆದ್ದಾರಿ ಪ್ರಾಧಿಕಾರದ ಅದೊಂದು ನಿರ್ಲಕ್ಷ್ಯದಿಂದ ಇದೀಗ ಅಮಾಯಕ ವಾಹನ ಸವಾರ ಜೀವ ಕಳೆದುಕೊಂಡಿದ್ದಾನೆ.

ದೇವನಹಳ್ಳಿ ಹೆದ್ದಾರಿಯ ಅವೈಜ್ಞಾನಿಕ ಹಂಪ್​ಯಿಂದ ವೈದ್ಯ ಬಲಿ

ಬೆಂಗಳೂರು ಗ್ರಾಮಾಂತರ: ಲಕ್ಷ ಲಕ್ಷ ಬೆಲೆ ಬಾಳುವ ಬೈಕ್, ತಲೆಗೆ ಹೆಲ್ಮೆಟ್ ಎಲ್ಲವೂ ಇದ್ರು ಇಲ್ಲಿ ಅಮಾಯಕ ಬೈಕ್ ಸವಾರ ದುರ್ಮರಣಕ್ಕೀಡಾಗಲು ಕಾರಣವಾಗಿರುವುದು ಇದೇ ಅವೈಜ್ಞಾನಿಕ ಹಂಪ್. ಹೌದು ಅಂದಹಾಗೆ ಜಿಲ್ಲೆಯ ದೇವನಹಳ್ಳಿ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 45 ರಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದ್ರಲ್ಲು ವೀಕೆಂಡ್ ಬಂತು ಅಂದ್ರೆ ಸಾಕು ನಂದಿಬೆಟ್ಡ ಮತ್ತು ಈಶಾ ಫೌಂಡೇಶನ್​ಗೆ ತೆರಳುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೇವನಹಳ್ಳಿ ಹೊರವಲಯದ ಕೋಟೆ ಕ್ರಾಸ್ ಬಳಿ ವಾಹನಗಳ ಸ್ವೀಡ್​ಗೆ ಬ್ರೇಕ್ ಹಾಕೋಕ್ಕೆ ಅಂತ ನಿರ್ಮಾಣ ಮಾಡಿರುವ ಹಂಪ್ ಅವೈಜ್ಞಾನಿಕವಾಗಿ ಕೂಡಿದ್ದು, ಇದೀಗ ಇದೇ ಹಂಪ್​ನಿಂದ ಬೆಂಗಳೂರು ಮೂಲದ ವೈದ್ಯ ಆಶಿಶ್ ಸಾವನ್ನಪಿದ್ದಾನೆ.

ಇಂದು(ಫೆ.12) ಬೆಳಗ್ಗೆ 11:30 ರ ಸುಮಾರಿಗೆ ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಮೂಲಕ ಬೆಂಗಳೂರಿನತ್ತ ತನ್ನ ಜಾವ ಬೈಕ್​ನಲ್ಲಿ ಆಶೀಶ್ ಬಂದಿದ್ದು, ಹಂಪ್ ಕಾಣಿಸದ ಕಾರಣ ಬೈಕ್ ಸ್ಕಿಡ್ ಆಗಿ ನೂರು ಅಡಿಗಳಷ್ಟು ಮುಂದಕ್ಕೆ‌ ಹೋಗಿ ಬಿದ್ದಿದ್ದಾನೆ. ಈ ವೇಳೆ ತಲೆಗೆ ಗಂಭೀರ ಗಾಯವಾದ ಕಾರಣ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೆ ದುರ್ಮರಣಕ್ಕೀಡಾಗಿದ್ದಾ‌ನೆ. ಇನ್ನು ಬೈಕ್ ಸವಾರ ಕೆಳಗಡೆ ಬೀಳ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಆತನನ್ನ ಆಸ್ವತ್ರೆಗೆ ದಾಖಲಿಸಲು ಮುಂದಾಗಿದ್ರು ಅಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ.

ವೀಕೆಂಡ್ ಬಂತು ಅಂದ್ರೆ ಸಾಕು ಸಾವಿರಾರು ವಾಹನಗಳು ಹೆದ್ದಾರಿಗೆ ಬರ್ತಿದ್ದು, ಶನಿ ಮತ್ತು ಭಾನುವಾರ ನೂರಾರು ವಾಹನಗಳು ಇದೇ ರೀತಿ ಅಪಘಾತಕ್ಕೀಡಾಗುತ್ತಿವೆ. ಜತೆಗೆ ಈ ಬಗ್ಗೆ ಹಲವು ಭಾರಿ ಸ್ಥಳಿಯರು ಮತ್ತು ದೇವನಹಳ್ಳಿ ಸಂಚಾರಿ ಪೊಲೀಸರು ಅವೈಜ್ಞಾನಿಕ ಹ‌ಂಪ್ ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನೀಡಿದ್ರು ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇಂದು ನಡೆದ ಅಪಘಾತಕ್ಕೆ ಹೆದ್ದಾರಿ ಪ್ರಾಧಿಕಾರವೇ ನೇರ ಹೊಣೆ ಅಂತ ಸ್ಥಳಿಯರು ಆರೋಪಿಸಿದ್ದಾರೆ. ಅಲ್ಲದೆ ನೂರಾರು ರೂಪಾಯಿ ಟೋಲ್ ವಸೂಲಿ ಮಾಡಿದ್ರು ರಸ್ತೆ ವೈಜ್ಞಾನಿಕವಾಗಿ ಮಾಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಸ್ಥಳಿಯರೆಲ್ಲರೂ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ನಾಲ್ಕು ವಾಹನಗಳು ಜಖಂ, ಅದೃಷ್ಟವಶಾತ್ ತಪ್ಪಿದ ಪ್ರಾಣಾಪಾಯ

ಒಟ್ಟಾರೆ ಪ್ರತಿನಿತ್ಯ ಸಾವಿರಾರು ವಾಹನಗಳು ರಸ್ತೆಗೆ ಸು‌ಂಕ ಕಟ್ಟಿ ಸಂಚರಿಸುತ್ತಿದ್ರು ವಾಹನ ಸವಾರರ ಜೀವಕ್ಕೆ ರಕ್ಷಣೆ ನೀಡಬೇಕಾದ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಸವಾರರು ಸಾವಿಗೀಡಾಗುತ್ತಿರುವುದು ನಿಜಕ್ಕೂ ದುರಂತ. ಇನ್ನೂ ನಿರಂತರ ಅಪಘಾತಗಳಿಂದ ಸಾರ್ವಜನಿಕರು ಆಕ್ರೋಶಕ್ಕೋಳಗಾಗಿದ್ದು, ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಎಚ್ಚೆತ್ತು ರಸ್ತೆ ಸರಿಪಡಿಸುವ ಕೆಲಸ ಮಾಡಬೇಕಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!