11.5 C
Munich
Thursday, February 23, 2023

Dhruva Sarja Starrer Martin Kannada Movie Pan India Teaser Released | Martin Teaser: ಬಂದ ಮಹಾನ್ ಕ್ರೂರಿ ಮಾರ್ಟಿನ್, ಆಕ್ಷನ್ ತುಂಬಿದ ಟೀಸರ್​ನಲ್ಲಿ ಅಬ್ಬರಿಸಿದ ಧ್ರುವ ಸರ್ಜಾ

ಓದಲೇಬೇಕು

ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಆಗಿದೆ. ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಭರ್ಜರಿ ಮೈಕಟ್ಟಿನ ಧ್ರುವ ಸರ್ಜಾ ವೈರಿಗಳನ್ನು ಕುಟ್ಟಿ ಪುಡಿಮಾಡುತ್ತಿರುವ ದೃಶ್ಯಗಳು ಟೀಸರ್ ತುಂಬ ಇದ್ದು, ಅಭಿಮಾನಿಗಳಲ್ಲಿ ಥ್ರಿಲ್ ಆಗಲು ಸಾಕಷ್ಟು ಸರಕನ್ನು ಟೀಸರ್​ ಮೂಲಕ ನಿರ್ದೇಶಕ ಎಪಿ ಅರ್ಜುನ್ ನೀಡಿದ್ದಾರೆ.


ಧ್ರುವ ಸರ್ಜಾ (Dhruva Sarja) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ಮಾರ್ಟಿನ್ ಟೀಸರ್ (Martin Teaser) ಬಿಡುಗಡೆ ಆಗಿದೆ. ಕನ್ನಡದಿಂದ ಮತ್ತೊಂದು ಅದ್ಭುತ ಆಕ್ಷನ್ ಸಿನಿಮಾ ಹೊರಬರುತ್ತಿರುವ ನಿರೀಕ್ಷೆಯನ್ನು ಟೀಸರ್ ಮೂಡಿಸಿದೆ. ಭರ್ಜರಿ ಮೈಕಟ್ಟಿನ ಧ್ರುವ ಸರ್ಜಾ ವೈರಿಗಳನ್ನು ಕುಟ್ಟಿ ಪುಡಿಮಾಡುತ್ತಿರುವ ದೃಶ್ಯಗಳು ಟೀಸರ್ ತುಂಬ ಇದ್ದು, ಅಭಿಮಾನಿಗಳಲ್ಲಿ ಥ್ರಿಲ್ ಆಗಲು ಸಾಕಷ್ಟು ಸರಕನ್ನು ಟೀಸರ್​ ಮೂಲಕ ನಿರ್ದೇಶಕ ಎಪಿ ಅರ್ಜುನ್ ನೀಡಿದ್ದಾರೆ.

ಟೀಸರ್ ತುಂಬಾ ಆಕ್ಷನ್ ದೃಶ್ಯಗಳೇ ತುಂಬಿವೆಯಾದರೂ ಆ ದೃಶ್ಯಗಳು ಕುತೂಹಲ ಹುಟ್ಟಿಸುವಂತೆಯೇ ಇದೆ. ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕನ ಮಾಸ್ ಎಂಟ್ರಿ ತೋರಿಸಿರುವ ಅರ್ಜುನ್ ಅಲ್ಲಿಂದ ಭಾರತಕ್ಕೆ ಕತೆಯನ್ನು ಹೇಗೆ ಲಿಂಕ್ ಮಾಡಿದ್ದಾರೆಂಬುದು ಟೀಸರ್ ನೋಡಿದವರ ಕುತೂಹಲ.

ಧ್ರುವ ಸರ್ಜಾ ಅಂತೂ ಟೀಸರ್​ನಲ್ಲಿಯೇ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಟೀಸರ್​ನಲ್ಲಿ ಬರುವ ಪಾತ್ರವೊಂದು ಹೇಳುವಂತೆ ಅತ್ಯಂತ ಕ್ರೂರಿ ಈ ಮಾರ್ಟಿನ್. ಅಂತೆಯೇ ಧ್ರುವ ಸರ್ಜಾ ಸಹ ಕ್ರೂರ ಮ್ಯಾನರಿಸಂ ಹಾಗೂ ಬೆಟ್ಟದಂಥಹಾ ದೇಹದೊಟ್ಟಿಗೆ ಭೀತಿ ಹುಟ್ಟಿಸುವಂತೆ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟೀಸರ್ ಇಲ್ಲಿದೆ

ಟೀಸರ್​ನಲ್ಲಿ ಬಂದೂಕು, ಬಾಂಬುಗಳು ಭರ್ಜರಿಯಾಗಿ ಅಬ್ಬರಿಸಿವೆ. ಜೊತೆಗೆ ಹೈಟೆನ್ಶನ್ ಕಾರ್ ಚೇಸ್​ಗಳು ಸಹ ಇವೆ. ಟೀಸರ್​ನಲ್ಲಿ ಹೀಗೆ ಕಂಡು ಮರೆಯಾಗುವ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸುವುದು ಪಕ್ಕಾ.

ಧ್ರುವ ಸರ್ಜಾರ ಈ ಹಿಂದಿನ ಸಿನಿಮಾ ಪೊಗರುನಲ್ಲಿ ಕಾಯ್ ಗ್ರೀನ್ ಸೇರಿದಂತೆ ವಿದೇಶಿ ದೈತ್ಯ ಬಾಡಿ ಬಿಲ್ಡರ್​ಗಳ ಜೊತೆ ಸೆಣೆಸಾಡಿದಂತೆಯೇ ಈ ಸಿನಿಮಾದಲ್ಲಿಯೂ ದೈತ್ಯ ಬಾಡಿಬಿಲ್ಡರ್​ಗಳ ಜೊತೆ ಸೆಣೆಸಾಡಿದ್ದಾರೆ ಧ್ರುವ ಸರ್ಜಾ. ಒಟ್ಟಾರೆಯಾಗಿ ಟೀಸರ್ ಭಾರಿ ನಿರೀಕ್ಷೆ ಮೂಡಿಸಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಟೀಸರ್ ಬಿಡುಗಡೆ ಕಂಡಿದೆ.
ಇಂದು (ಫೆಬ್ರವರಿ 23) ಮಧ್ಯಾಹ್ನವೇ ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಮಾರ್ಟಿನ್ ಟೀಸರ್​ ಅನ್ನು ಎಕ್ಸ್​ಕ್ಲೂಸಿವ್ ಆಗಿ ಪ್ರದರ್ಶನ ಮಾಡಲಾಗಿತ್ತು. ಇದೀಗ ಲಹರಿ ಯೂಟ್ಯೂಬ್ ಚಾನೆಲ್​ನಲ್ಲಿ ಅಧಿಕೃತವಾಗಿ ಎಲ್ಲರ ವೀಕ್ಷಣೆಗೆಂದು ಬಿಡುಗಡೆ ಮಾಡಲಾಗಿದೆ.

ಧೃವ ಸರ್ಜಾ ಅಭಿನಯದ ಮಾರ್ಟಿನ್​ ಟೀಸರ್​ ಬಿಡುಗಡೆ ಸುದ್ದಿಗೋಷ್ಠಿ ಲೈವ್​

ಮಾರ್ಟಿನ್ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಮತ್ತಷ್ಟು ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!