ಟಗರು, (Tagaru) ಸಲಗ, (Salaga), ಪಾಪ್ಕಾರ್ನ್ ಮಂಕಿ ಟೈಗರ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ, ಸಂಭಾಷಣೆ ಬರೆವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ (Sandalwood) ಚಾಲ್ತಿಯಲ್ಲಿರುವ ಸಂಭಾಷಣೆ ಹಾಗೂ ಚಿತ್ರಕತೆಗಾರ ಮಾಸ್ತಿ. ಟಗರು, (Tagaru) ಸಲಗ, (Salaga), ಪಾಪ್ಕಾರ್ನ್ ಮಂಕಿ ಟೈಗರ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಇದೀಗ ಬಾನದಾರಿಯಲ್ಲಿ ಸೇರಿದಂತೆ ಹಲವು ಸಿನಿಮಾಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಸವಾಲುಗಳು, ಸಂಭಾಷಣೆ ಬರೆಯುವಾಗ ವಹಿಸಬೇಕಾದ ಎಚ್ಚರಿಕೆಗಳು, ಸಂಭಾಷಣೆಗೆ ಪ್ರೇಕ್ಷಕರಿಂದ ಸಿಗುವ ಪ್ರಶಂಸೆಯಿಂದ ಉಂಟಾಗುವ ಆನಂದಗಳ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.