-0.2 C
Munich
Monday, March 27, 2023

Divya Uruduga At Sagar Jatre And She Shares video Fans try to Find Aravind Kp | Divya Uruduga: ಮಾಸ್ಕ್ ಹಾಕಿ ಸಾಗರ ಜಾತ್ರೆ ಸುತ್ತಾಡಿದ ದಿವ್ಯಾ ಉರುಡುಗ; ಫ್ಯಾನ್ಸ್ ಗುರುತಿಸಿದ್ರಾ?

ಓದಲೇಬೇಕು

ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಗೆ ತೆರಳಿದ್ದಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಿವ್ಯಾ ಉರುಡುಗ

ದಿವ್ಯಾ ಉರುಡುಗ (Divya Uruduga) ಅವರು ಎರಡು ಬಾರಿ ಬಿಗ್ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿ ಬಂದಿದ್ದಾರೆ. ಅವರು ಸ್ಪರ್ಧೆ ಮಾಡಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್​ 9’ ಕಳೆದ ವರ್ಷಾಂತ್ಯಕ್ಕೆ ಪೂರ್ಣಗೊಂಡಿದೆ. ‘ಬಿಗ್​ ಬಾಸ್​​’ನಿಂದ ದಿವ್ಯಾ ಉರುಡುಗ ಖ್ಯಾತಿ ಹೆಚ್ಚಿದೆ. ಈಗ ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಯಲ್ಲಿ ಮಾಸ್ಕ್ ಹಾಕಿ ಸುತ್ತಾಡಿದ್ದಾರೆ. ಈ ವಿಡಿಯೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ದಿವ್ಯಾ ಉರುಡುಗ ಅವರು ತೀರ್ಥಹಳ್ಳಿಯವರು. ಅವರಿಗೆ ಊರಿನ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಅನೇಕ ಬಾರಿ ಇದನ್ನು ಅವರು ಹೇಳಿಕೊಂಡಿದ್ದಿದೆ. ಈಗ ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಗೆ ತೆರಳಿದ್ದಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಂಡರೆ ಮುತ್ತಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮಾಸ್ಕ್ ಹಾಕಿ ಅವರು ಓಡಾಡಿದ್ದಾರೆ. ಹೀಗಾಗಿ, ಅವರನ್ನು ಗುರುತಿಸೋದು ಕಷ್ಟವಾಗಿದೆ.

ದಿವ್ಯಾ ಉರುಡುಗ ಹಂಚಿಕೊಂಡಿರುವ ರೀಲ್ಸ್​ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ನಾನು ಜಾತ್ರೆಯಲ್ಲಿದ್ದರೂ ನಿಮ್ಮನ್ನು ಗುರುತಿಸೋಕೆ ಸಾಧ್ಯವಾಗಲಿಲ್ಲವಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ‘ಅರವಿಂದ್ ಕೆಪಿ ಬಂದಿಲ್ಲವೇ, ಅವರಿಗೂ ಜಾತ್ರೆ ತೋರಿಸಬಹುದಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಮೊದಲ ಬಾರಿಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಅಲ್ಲಿ ಬೈಕರ್ ಅರವಿಂದ್ ಕೆಪಿ ಪರಿಚಯ ಅವರಿಗೆ ಆಯಿತು. ಇಬ್ಬರೂ ಪರಸ್ಪರ ಪ್ರೀತಿಸೋಕೆ ಆರಂಭಿಸಿದರು. ಈ ಕಾರಣಕ್ಕೂ ಅವರು ಹೆಚ್ಚು ಗಮನ ಸೆಳೆದರು. ಎಂಟನೇ ಸೀಸನ್​ನಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲೂ ದಿವ್ಯಾ ಸ್ಪರ್ಧೆ ಮಾಡಿದ್ದರು. ಅರವಿಂದ್ ಇಲ್ಲ ಎನ್ನುವ ಕಾರಣಕ್ಕೆ ಅವರು ಕೊಂಚ ಡಲ್ ಆದರು. ಆದರೆ, ಕೊನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದರು. 9ನೇ ಸೀಸನ್​ನಲ್ಲಿ ದಿವ್ಯಾ ಉರುಡುಗ ಅವರು ನಾಲ್ಕನೇ ರನ್ನರ್ ಅಪ್ ಆದರು.

ಇದನ್ನೂ ಓದಿ:Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಅರ್ದಂ ಬರ್ಧ ಪ್ರೇಮ ಕಥೆ’ ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!