6.6 C
Munich
Tuesday, March 21, 2023

Dog Behavior scientific study on why do dogs tilt their head | Science: ನಿಮ್ಮನ್ನು ನೋಡಿ ನಾಯಿ ತಲೆಯನ್ನು ಒಂದು ಬದಿಗೆ ತಿರುಗಿಸುತ್ತಾ? ವಿಜ್ಞಾನ ಏನು ಹೇಳುತ್ತೆ ನೋಡಿ

ಓದಲೇಬೇಕು

“ಮುಂದಿನ ಹಂತದ ಸಂಶೋಧನೆಯಲ್ಲಿ ನಾಯಿಗಳು ಯಾವ ಕಾರಣಕ್ಕೆ ತಲೆಯನ್ನು ಓರೆಯಾಗಿಸುತ್ತದೆ ಎಂಬುದರ ಕುರಿತು ಅಧ್ಯಯನ ಮಾಡಲಿದ್ದೇವೆ” ಎಂದು ಉದೆಲ್ ಹೇಳಿದರು.

Why do dogs tilt their heads?

ನಾಯಿಗಳು (Dogs) ನಮ್ಮ ಹೃದಯವನ್ನು ಗೆಲ್ಲಲು ಮತ್ತು ನಾವು ಅವುಗಳೊಂದಿಗೆ ಸದಾ ಆಟವಾಡಲು ಹಲವಾರು ಮುದ್ದಾದ ವರ್ತನೆಗಳನ್ನು ತೋರಿಸುತ್ತವೆ. ನಿಮ್ಮನ್ನು ನೋಡುತ್ತಿರುವಾಗ ನಾಯಿ ತಲೆಯನ್ನು ಒಂದು ಬದಿಗೆ ತಿರುಗಿಸುವುದು ನಿಮಗೆ ಸದಾ ಸಂತೋಷವನ್ನು ತರುತ್ತದೆ. ತಲೆಯನ್ನು ಈ ರೀತಿ ಬಾಗಿಸುವುದು ಸಾಮಾನ್ಯವಾಗಿ ಗೊಂದಲ ಅಥವಾ ಕುತೂಹಲದ ಸಂಕೇತ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ವಿಜ್ಞಾನ(Science) ಹೊಸ ಅಧ್ಯಯನದ ಮೂಲಕ ಈ ವರ್ತನೆಯ ನಿಜವಾದ ಅರ್ಥ ಏನು ಎಂಬುದನ್ನು ತಿಳಿಸಲು ಪ್ರಯತ್ನಿಸಿದೆ.

Eötvös Loránd ವಿಶ್ವವಿದ್ಯಾನಿಲಯದ ಪೋಸ್ಟ್‌ಡಾಕ್ಟರಲ್ ಅಧ್ಯಯನಗಾರ್ತಿ ಆಂಡ್ರಿಯಾ ಸೊಮ್ಮೀಸ್, ನಾಯಿಗಳು ತಮ್ಮ ತಲೆಯನ್ನು ಏಕೆ ಒಂದು ಬದಿಗೆ ಕೊಂಡೊಯ್ಯುತ್ತವೆ ಎಂಬ ಅಧ್ಯಯನದ ಸಂಶೋಧಕರ ತಂಡವನ್ನು ಮುನ್ನಡೆಸಿದರು. Science.org ಪ್ರಕಾರ, ಬಹು ಆಟಿಕೆ ಹೆಸರುಗಳನ್ನು ತ್ವರಿತವಾಗಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ‘ಪ್ರತಿಭಾನ್ವಿತ ನಾಯಿಗಳ’ ಗುಂಪಿನ ಮೇಲೆ ಅಧ್ಯಯನವನ್ನು ಮಾಡಲಾಗಿದೆ.

ತಲೆಯ ಬಾಗುವಿಕೆಯು ನಾಯಿಗಳಿಗೆ ಏಕಾಗ್ರತೆ ಮತ್ತು ನೆನಪಿಸಿಕೊಳ್ಳುವ ಸಂಕೇತವಾಗಿರಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ. ಹೆಚ್ಚಿನ ನಾಯಿಗಳು ಎರಡು ಆಟಿಕೆಗಳ ಹೆಸರನ್ನು ಸಹ ನೆನಪಿಸಿಕೊಳ್ಳುವುದಿಲ್ಲ. ಆದರೆ ಪ್ರತಿಭಾವಂತ ಬಾರ್ಡರ್ ಕೋಲಿಗಳ (Border Collie) ಗುಂಪು ವಿವಿಧ ಆತಿಗಳ ಹೆಸರನ್ನು ಕಲಿಸದ ಬಳಿಕ, ಕನಿಷ್ಠ 10 ಆಟಿಕೆಗಳನ್ನು ನೆನಪಿಟ್ಟುಕೊಂಡು, ಗುರುತಿಸಿದರು.

ಈ ಗುಂಪಿನ ಒಂದು ನಾಯಿ (ವಿಸ್ಕಿ) ಗುರುತಿಸಲು ಕಲಿತ 59 ಆಟಿಕೆಗಳಲ್ಲಿ 54 ಅನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು Science.org ವರದಿ ಹೇಳಿದೆ. ಸಂಶೋಧಕರು ಹಲವಾರು ತಿಂಗಳುಗಳ ಅವಧಿಯಲ್ಲಿ ಆಟಿಕೆಗಳ ಹೆಸರುಗಳನ್ನು ಕಲಿಯಲು ಮತ್ತು ಗುರುತಿಸುವ ನಾಯಿಗಳ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾದರು. ಈ ಅಧ್ಯಯನದಿಂದ 33 ಇತರ ನಾಯಿಗಳ ವರ್ತನೆ ಮತ್ತು ‘ಪ್ರತಿಭಾವಂತ’ ನಾಯಿಗಳ ವರ್ತನೆ ಮತ್ತು ಕಶಲ್ಯವನ್ನು ಹೋಲಿಸಲು ಸಾಧ್ಯವಾಯಿತು.

ಮಾಲೀಕರು ಮತ್ತೊಂದು ಕೋಣೆಯಲ್ಲಿ ಆಟಿಕೆಗಳನ್ನು ಇರಿಸಿ, ಅವುಗಳ ಹೆಸರನ್ನು ಜೋರಾಗಿ ಹೇಳಿದಾಗ, ಪ್ರತಿಭಾನ್ವಿತ ನಾಯಿಗಳು ಮಾತ್ರ ಹೆಸರುಗಳನ್ನು ಕಲಿಯಲು ಮತ್ತು ನೆನಪಿಟ್ಟುಕೊಂಡು ಆ ವಸ್ತುವನ್ನು ಇನ್ನೊಂದು ಕೋಣೆಯಿಂದ ತರಲು ಸಾಧ್ಯವಾಯಿತು. ಮಾಲೀಕರು ವಸ್ತುವಿನ ಹೆಸರನ್ನು ಜೋರಾಗಿ ಹೇಳಿದಾಗ ಈ ಎಲ್ಲಾ ನಾಯಿಗಳು ತಮ್ಮ ತಲೆಯನ್ನು ಒಂದು ಬದಿಗೆ ತಿರುಗಿಸಿದವು, ಇದು ಏಕಾಗ್ರತೆ ಮತ್ತು ನೆನಪಿಸಿಕೊಳ್ಳುವ ಸಂಕೇತವಾಗಿರಬಹುದು ಎಂದು ಈ ಅಧ್ಯಯನ ಸೂಚಿಸುತ್ತದೆ.

ನಾಯಿಗಳು ತಮ್ಮ ತಲೆಯನ್ನು ಏಕೆ ಓರೆಯಾಗಿಸುತ್ತವೆ ಎಂಬುದರ ಕುರಿತು ಇಂಟರ್ನೆಟ್ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ಲೇಖನಗಳು ಚೆನ್ನಾಗಿ ಕೇಳುವಾಗ ನಾಯಿಗಳ ಈ ಈ ರೀತಿಯ ವರ್ತನೆಯನ್ನು ಪ್ರದರ್ಶಿಸುತ್ತದೆ ಎಂದರೆ, ಕೆಲವು ಅಧ್ಯಯನಗಳು ಮುಂದೆ ಇರುವುದನ್ನು ನೋಡಲು ನಾಯಿಗಳು ಹೀಗೆ ಮಾಡುತ್ತವೆ ಎಂದಿದೆ.

ಇದನ್ನೂ ಓದಿ: ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!

ಅಧ್ಯಯನದಲ್ಲಿ ಭಾಗಿಯಾದ ಎಲ್ಲಾ ಬಾರ್ಡರ್ ಕೋಲಿಗಳಿಗೂ ಮಾಲೀಕರು ಹೇಳಿದ ಪದಗಳು ಪರಿಚಿತವಾಗಿತ್ತು ಎಂದು ಸಂಶೋಧಕರು ಹೇಳಿದರು. ವಸ್ತುಗಳ ಹೆಸರನ್ನು ಹೇಳಿದಾಗ ಪ್ರತಿಭಾನ್ವಿತ ನಾಯಿಗಳಿಗೆ ಮಾತ್ರ ಸರಿಯಾದ ಆಟಿಕೆಗಳನ್ನು ತರಲು ಸಾಧ್ಯವಾಗಿದೆ.

ಮುಖವನ್ನು ಒಂದು ಬದಿಗೆ ಬಗ್ಗಿಸಿದ ಪ್ರತಿಭಾನ್ವಿತ ನಾಯಿಗಳಲ್ಲಿ ಹೆಚ್ಚಿನ ಗಮನ ಅಥವಾ ಏಕಾಗ್ರತೆಯ ಇದ್ದಿರಬಹುದು ಎಂದು ಸಂಶೋಧಕರ ತಂಡವು ತೀರ್ಮಾನಿಸಿದೆ. ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಮಾನವ-ಪ್ರಾಣಿ ಸಂವಾದದ ಸಂಶೋಧಕ ಮೊನಿಕ್ ಉಡೆಲ್, ಸಂಶೋಧನೆ ಕೇವಲ ಪ್ರಾಥಮಿಕವಾಗಿವೆ ಎಂದು ಹೇಳಿದರು.

“ಮುಂದಿನ ಹಂತದ ಸಂಶೋಧನೆಯಲ್ಲಿ ನಾಯಿಗಳು ಯಾವ ಕಾರಣಕ್ಕೆ ತಲೆಯನ್ನು ಓರೆಯಾಗಿಸುತ್ತದೆ ಎಂಬುದರ ಕುರಿತು ಅಧ್ಯಯನ ಮಾಡಲಿದ್ದೇವೆ” ಎಂದು ಉದೆಲ್ ಹೇಳಿದರು.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!