9.8 C
Munich
Friday, March 24, 2023

Emergency movie actress Kangana Ranaut explains why she praised Deepika Padukone | Kangana Ranaut: ದೀಪಿಕಾ ಪಡುಕೋಣೆ ವಿಚಾರದಲ್ಲಿ ಕಂಗನಾ ರಣಾವತ್​ ದ್ವಂದ್ವ ನೀತಿ; ಸ್ವಷ್ಟನೆ ನೀಡಿದ ನಟಿ

ಓದಲೇಬೇಕು

Deepika Padukone | Oscar Awards: ದೀಪಿಕಾ ಪಡುಕೋಣೆ ಅವರನ್ನು ಕಂಗನಾ ರಣಾವತ್​ ಏಕಾಏಕಿ ಹೊಗಳಿರುವುದು ಅಚ್ಚರಿಗೆ ಕಾರಣ ಆಗಿದೆ. ಆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಕಂಗನಾ ರಣಾವತ್, ದೀಪಿಕಾ ಪಡುಕೋಣೆ

ನಟಿ ಕಂಗನಾ ರಣಾವತ್​ (Kangana Ranaut) ಅವರು ಸದಾ ಕಾಲ ವಿವಾದದ ಮೂಲಕವೇ ಸುದ್ದಿ ಆಗುತ್ತಾರೆ. ಬಾಲಿವುಡ್​ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆ (Deepika Padukone) ವಿರುದ್ಧ ಅನೇಕ ಸಂದರ್ಭದಲ್ಲಿ ಅವರು ಟೀಕೆ ಮಾಡಿದ್ದರು. ಆದರೆ ಈಗ ಏಕಾಏಕಿ ವರಸೆ ಬದಲಾಯಿಸಿದ್ದಾರೆ. ಆಸ್ಕರ್​ (Oscars 2023) ಸಮಾರಂಭದಲ್ಲಿ ವೇದಿಕೆ ಏರಿದ ದೀಪಿಕಾರನ್ನು ಕಂಗನಾ ಬಾಯಿತುಂಬ ಹೊಗಳಿದ್ದಾರೆ. ಈ ಬದಲಾವಣೆ ಕಂಡು ನೆಟ್ಟಿಗರಿಗೆ ಅಚ್ಚರಿ ಆಗಿದೆ. ಹಾಗಾಗಿ ಕಂಗನಾ ರಣಾವತ್​ ಅವರ ದ್ವಂದ್ವ ನೀತಿಯನ್ನು ಟ್ರೋಲ್​ ಮಾಡಲಾಗುತ್ತಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮೊದಲು ತೆಗಳಿದ್ದು ಯಾಕೆ ಮತ್ತು ಈಗ ಹೊಗಳಿದ್ದು ಯಾಕೆ ಎಂಬುದನ್ನು ಕಂಗನಾ ರಣಾವತ್​ ವಿವರಿಸಿದ್ದಾರೆ.

ದೀಪಿಕಾ ಬಗ್ಗೆ ಕಂಗನಾ ಟ್ವೀಟ್​:

‘ದೀಪಿಕಾ ಪಡುಕೋಣೆ ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಆ ಕೋಮಲ ಹೆಗಲುಗಳ ಮೇಲೆ ಇಡೀ ದೇಶದ ಪ್ರತಿಷ್ಠೆಯನ್ನು ಹೊತ್ತುಕೊಂಡು, ಆ ವೇದಿಕೆಯಲ್ಲಿ ನಿಂತು ಮಾತನಾಡುವುದು ಸುಲಭವಲ್ಲ. ಭಾರತೀಯ ಮಹಿಳೆಯರು ದಿ ಬೆಸ್ಟ್​ ಎಂಬುದರ ಸಂಕೇತವಾಗಿ ದೀಪಿಕಾ ನಿಂತಿದ್ದಾರೆ’ ಎಂದು ಕಂಗನಾ ರಣಾವತ್​ ಅವರು ಟ್ವೀಟ್​ ಮಾಡಿದರು.

ಇದನ್ನೂ ಓದಿಇದನ್ನೂ ಓದಿ: Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​

ದೀಪಿಕಾ ಪಡುಕೋಣೆ ಬಗ್ಗೆ ಈ ಕಂಗನಾ ರಣಾವತ್​ ಅವರು ಈ ರೀತಿ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರಿಗೆ ಗೊಂದಲ ಆಯ್ತು. ಈ ಮೊದಲು ಅನೇಕ ಬಾರಿ ದೀಪಿಕಾರನ್ನು ಕಂಗನಾ ಕಟುವಾಗಿ ಟೀಕಿಸಿದ್ದರು. ಈಗ ವರಸೆ ಬದಲಿಸಿ ಹೊಗಳಿದ್ದು ಯಾಕೆ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ. ಅದಕ್ಕೆ ಟ್ವಿಟರ್​ ಮೂಲಕವೇ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಂಗನಾ ಬಿಟ್ಟು ದೀಪಿಕಾ, ಆಲಿಯಾ ಹೊಗಳಿದ ಆಮಿರ್ ಖಾನ್; ಸರಿಯಾಗಿ ತಿರುಗೇಟು ಕೊಟ್ಟ ರಣಾವತ್

ಟ್ರೋಲ್​ ಮಾಡಿದವರಿಗೆ ಕಂಗನಾ ಉತ್ತರ:

‘ನಾನು ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ್ದಕ್ಕೆ ಯಾರಿಗೆಲ್ಲ ಅಚ್ಚರಿ ಆಗಿದೆಯೋ ಅಂಥವರು ಹೆಚ್ಚು ಯೋಚನೆ ಮಾಡಬೇಡಿ. ಕೃಷ್ಣ ಮತ್ತು ಧರ್ಮವನ್ನು ಫಾಲೋ ಮಾಡುವ ಸಿಂಪಲ್​ ವ್ಯಕ್ತಿ ನಾನು. ಅರ್ಹರಲ್ಲದವರಿಗೆ ಮೆಚ್ಚುಗೆ ನೀಡುವುದು ಅನಾಚಾರ. ಆದರೆ ಅರ್ಹವಾದ ವ್ಯಕ್ತಿಗೆ ಕ್ರೆಡಿಟ್​ ನೀಡಿದೇ ಇರುವುದು ಅದಕ್ಕಿಂತಲೂ ದೊಡ್ಡ ಪಾಪ ಅಂಥ ಕೃಷ್ಣ ಹೇಳಿದ್ದಾನೆ’ ಎಂದು ಪೋಸ್ಟ್ ಮಾಡುವ ಮೂಲಕ ಕಂಗನಾ ರಣಾವತ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಕಂಗನಾ ರಣಾವತ್​ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರ ನಿರ್ದೇಶನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರ ಮಾಡುತ್ತಿದ್ದಾರೆ. ಅನೇಕ ಪ್ರತಿಭಾವಂತ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!