8.4 C
Munich
Thursday, March 2, 2023

Fact Check On News Of Pakistan Stopping Indian Aircraft Going To Turkey | Fact Check: ಟರ್ಕಿಗೆ ಹೋಗುತ್ತಿದ್ದ ಭಾರತದ ವಿಮಾನಗಳನ್ನು ಪಾಕಿಸ್ತಾನ ತಡೆದಿತಾ? ವಾಸ್ತವದಲ್ಲಿ ಆಗಿದ್ದೇನು?

ಓದಲೇಬೇಕು

ಟರ್ಕಿಗೆ ಹೋಗುತ್ತಿದ್ದ ಭಾರತೀಯ ವಿಮಾನಗಳನ್ನು ಪಾಕಿಸ್ತಾನ ತಡೆದಿವೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದು ನಿಜವಾ? ಈ ಬಗ್ಗೆ ಒಂದು ಫ್ಯಾಕ್ಟ್ ಚೆಕ್ ವರದಿ:

ಭಾರತೀಯ ವಾಯುಪಡೆ ವಿಮಾನ

ನವದೆಹಲಿ: ಭೂಕಂಪದಿಂದ ಜರ್ಝರಿತವಾಗಿರುವ ಟರ್ಕಿ ಮತ್ತು ಸಿರಿಯಾ (Turkey and Syria Earthquake) ದೇಶಗಳಿಗೆ ಜಗತ್ತಿನ ಅನೇಕ ದೇಶಗಳು ಸಹಾಯಹಸ್ತ ಚಾಚಿವೆ. ಭಾರತ ಕೂಡ ವಿವಿಧ ರಕ್ಷಣಾ ಸಾಮಗ್ರಿಗಳನ್ನು (India Rescue Team To Turkey) ಟರ್ಕಿಗೆ ಕಳುಹಿಸಿಕೊಟ್ಟಿದೆ. ಔಷಧಿ, ರಕ್ಷಣಾ ಸಿಬ್ಬಂದಿ, ಶ್ವಾನ ದಳ ಇತ್ಯಾದಿ ನೆರವನ್ನು ಭಾರತ ಒದಗಿಸುತ್ತಿದೆ. ಈಗಾಗಲೇ ಟರ್ಕಿಗೆ ಭಾರತದಿಂದ ನಾಲ್ಕು ಮಿಲಿಟರಿ ವಿಮಾನಗಳು ಹೋಗಿವೆ. ಆದರೆ ಟರ್ಕಿಗೆ ಹೋಗುತ್ತಿದ್ದ ಭಾರತೀಯ ವಿಮಾನಗಳನ್ನು ಪಾಕಿಸ್ತಾನ ತಡೆದಿವೆ ಎನ್ನುವಂತಹ ಸುದ್ದಿಗಳು ನಿನ್ನೆ ಮಂಗಳವಾರ ಸೋಷಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ ಆಗಿದ್ದವು. ಟರ್ಕಿಗೆ ಅದರ ಮಿತ್ರದೇಶವೇ ಅಡ್ಡಿಪಡಿಸುತ್ತಿದೆ ಎನ್ನುವಂತಹ ವಿಮರ್ಶೆಗಳು ವ್ಯಕ್ತವಾಗಿದ್ದವು.

ಆದರೆ, ವಾಸ್ತವದಲ್ಲಿ ಈ ಸುದ್ದಿ ನಿಜವಾ? ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾಗಿರುವುದರ ಪ್ರಕಾರ ಪಾಕಿಸ್ತಾನದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಬೇರೆ ಮಾರ್ಗಗಳ ಮೂಲಕ ಭಾರತೀಯ ಮಿಲಿಟರಿ ಸರಕು ಸಾಗಣೆ ವಿಮಾನಗಳು ಟರ್ಕಿಗೆ ಹೋದವು ಎನ್ನಲಾಗಿದೆ.

ಪಾಕಿಸ್ತಾನದ ಮೂಲಕ ಹಾದು ಹೋದರೆ ಟರ್ಕಿಯನ್ನು ಬೇಗ ತಲುಪಬಹುದು. ನಿನ್ನೆ ಟರ್ಕಿಯ ಅಂಕಾರ ನಗರಕ್ಕೆ ಹೋಗಲು ವಾಯು ಪ್ರದೇಶ ಬಳಕೆಗೆ ಪಾಕಿಸ್ತಾನದ ಅನುಮತಿಯನ್ನು ಭಾರತ ಕೇಳಿಯೂ ಇಲ್ಲ. ಆದರೆ ಪಾಕಿಸ್ತಾನದೊಂದಿಗೆ ತಿಕ್ಕಾಟ ಇದ್ದರಿಂದ ಭಾರತ ಸಾಮಾನ್ಯವಾಗಿ ಬಳಸು ಮಾರ್ಗದ ಮೂಲಕ ಅಫ್ಘಾನಿಸ್ತಾನ, ಇರಾನ್ ಇತ್ಯಾದಿ ದೇಶಗಳಿಗೆ ಹೋಗುತ್ತದೆ. ನಿನ್ನೆಯೂ ಅದೇ ಆಗಿದ್ದು. ವಾಯುಪಡೆ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಇದನ್ನು ಖಚಿತಪಡಿಸಿದ್ದಾರೆ.

ನಮ್ಮ ವಿಮಾನವು ಪಾಕಿಸ್ತಾನದ ಮೇಲೆ ಹಾರಾಟ ಮಾಡುವುದಿಲ್ಲ. ಇದು ನಮ್ಮ ಕಾರ್ಯಾಚರಣೆ ವಿಧಾನವಾಗಿದೆ. ಯೂರೋಪ್ ಅಥವಾ ಪಶ್ಚಿಮ ಏಷ್ಯಾದ ಭಾಗಕ್ಕೆ ಹೋಗಲು ಪಾಕಿಸ್ತಾನ ವಾಯು ಪ್ರದೇಶದ ಬದಲು ಗುಜರಾತ್ ಕಡೆಯಿಂದ ಇರುವ ಬಳಸು ಮಾರ್ಗದಲ್ಲಿ ಹೋಗುತ್ತೇವೆ ಎಂದು ಈ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Syria Earthquake: ಹುಟ್ಟು ಸಾವು ಎಲ್ಲವೂ ದೈವಿಚ್ಛೆ: ಅವಶೇಷಗಳಡಿ ಹುಟ್ಟಿ, ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿರುವ ಭಾರತೀಯ ನಾಗರಿಕರನ್ನು ಐಎಎಫ್ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ ಕರೆಸಲಾಯಿತು. ಆ ತುರ್ತು ಸಂದರ್ಭದಲ್ಲೂ ಭಾರತದಿಂದ ಪಾಕಿಸ್ತಾನದ ವಾಯುಭಾಗದ ಬಳಕೆ ಆಗಲಿಲ್ಲ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಿಂದ ತಜಿಕಿಸ್ತಾನದ ದುಷಂಬೆ ನಗರ ತಲುಪಿ ಆ ಮೂಲಕ ಇರಾನ್ ದೇಶಕ್ಕೆ ಹೋಗಿ ಅಲ್ಲಿಂದ ಭಾರತಕ್ಕೆ ನಾಗರಿಕರನ್ನು ಕರೆತರಲಾಗಿತ್ತು.

ಟರ್ಕಿಗೆ ಭಾರತದಿಂದ ನಾಲ್ಕು ಬ್ಯಾಚ್ ಪರಿಹಾರ ಸಾಮಗ್ರಿ

ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾರತದಿಂದ ಈವರೆಗೆ ನಾಲ್ಕು ವಿಮಾನಗಳನ್ನು ಕಳುಹಿಸಿಕೊಡಲಾಗಿದೆ. ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಸರಕು ಸಾಗಣೆ ವಿಮಾನಗಳ ಪರಿಹಾರ ಸಾಮಗ್ರಿಗಳು, ತಜ್ಞರ ತಂಡ, ಶ್ವಾನ ದಳ ಇತ್ಯಾದಿ ನೆರವನ್ನು ಕಳುಹಿಸಿಕೊಡಲಾಗಿದೆ. ಸಿರಿಯಾಗೂ ಭಾರತದಿಂದ ನೆರವು ಹೋಗುತ್ತಿದೆ. ಸಿ-130ಜೆ ವಿಮಾನವು ಆರು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಿರಿಯಾಗೆ ತೆರಳಿದೆ ಎಂಬ ಮಾಹಿತಿ ಲಭ್ಯವಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!