7.6 C
Munich
Friday, March 3, 2023

FIR filed against Shah Rukh Khan wife Gauri Khan under IPC section 409 for this reason | Gauri Khan: ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಆರೋಪ; ಶಾರುಖ್ ಪತ್ನಿ ಗೌರಿ ಖಾನ್​ ಮೇಲೆ ಎಫ್​ಐಆರ್​ ದಾಖಲು

ಓದಲೇಬೇಕು

FIR against Gauri Khan: ಮುಂಬೈ ನಿವಾಸಿ ಜಶ್ವಂತ್​ ಷಾ ಎಂಬುವವರು ಶಾರುಖ್​ ಖಾನ್​ ಪತ್ನಿ ಗೌರಿ ಖಾನ್​ ವಿರುದ್ಧ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್​ 409 ಅಡಿಯಲ್ಲಿ ಅವರ​ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ಗೌರಿ ಖಾನ್, ಶಾರುಖ್ ಖಾನ್

ನಟ ಶಾರುಖ್​ ಖಾನ್​ (Shah Rukh Khan) ಕುಟುಂಬದವರು ವಿವಾದದಿಂದ ದೂರು ಇರಬೇಕು ಎಂದುಕೊಳ್ಳುತ್ತಾರೆ. ಆದರೆ ವಿವಾದಗಳ ಅವರನ್ನು ಹುಡುಕಿಕೊಂಡು ಬರುತ್ತವೆ. ಕಳೆದ ವರ್ಷ ಶಾರುಖ್​ ಪುತ್ರ ಆರ್ಯನ್​ ಖಾನ್​ ಅವರ ಹೆಸರು ಡ್ರಗ್ಸ್​ ಪ್ರಕರಣದಲ್ಲಿ ತಳುಕುಹಾಕಿಕೊಂಡಿತ್ತು. ಈ ವರ್ಷ ಆರಂಭದಲ್ಲಿ ‘ಬೇಷರಂ ರಂಗ್​..’ ಹಾಡಿನ ಕಾರಣದಿಂದ ಶಾರುಖ್​ ಖಾನ್​ ಅವರು ವಿವಾದಕ್ಕೆ ಒಳಗಾಗಿದ್ದರು. ಈಗ ಅವರ ಪತ್ನಿ ಗೌರಿ ಖಾನ್​ಗೆ ಕಾನೂನಿನ ಸಂಕಷ್ಟ ಎದುರಾಗಿದೆ. ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪ ಅವರ ಮೇಲಿದೆ. ಹಾಗಾಗಿ ಗೌರಿ ಖಾನ್​ (Gauri Khan) ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಕೇಸ್​ ಬಗ್ಗೆ ಇಲ್ಲಿದೆ ವಿವರ..

ಶಾರುಖ್​ ಖಾನ್​ ಕುಟುಂಬದವರು ಹಲವು ಬಿಸ್ನೆಸ್​ನಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್​ ಪತ್ನಿ ಗೌರಿ ಖಾನ್​ ಅವರು ಇಂಟೀರಿಯರ್​ ಡಿಸೈನರ್​ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೆಲವು ರಿಯಲ್​ ಎಸ್ಟೇಟ್​ ಕಂಪನಿಗೆ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದಾರೆ. ಅವರು ಪ್ರಚಾರ ರಾಯಭಾರಿ ಆಗಿರುವ ಕಂಪನಿಯೊಂದರಿಂದ ತಮಗೆ ಮೋಸ ಆಗಿದೆ ಎಂದು ಗ್ರಾಹಕರೊಬ್ಬರು ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ: ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ

ಇದನ್ನೂ ಓದಿ



ಮುಂಬೈ ನಿವಾಸಿ ಜಶ್ವಂತ್​ ಷಾ ಎಂಬುವವರು ಗೌರಿ ಖಾನ್​ ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ರಿಯಲ್​ ಎಸ್ಟೇಟ್​ ಕಂಪನಿಯೊಂದರ ಮೂಲಕ ಜಶ್ವಂತ್​ ಅವರು ಫ್ಲಾಟ್​ ಖರೀದಿಸಿದ್ದರು. ಅದಕ್ಕಾಗಿ ಅವರು 86 ಲಕ್ಷ ರೂಪಾಯಿ ಪಾವತಿಸಿದ್ದರು. ಹಣ ಪಡೆದುಕೊಂಡರೂ ಕೂಡ ಆ ಕಂಪನಿಯವರು ತಮಗೆ ಫ್ಲಾಟ್​ ನೀಡಿಲ್ಲ ಎಂದು ಜಶ್ವಂತ್​ ಷಾ ಈಗ ಆರೋಪಿಸಿದ್ದಾರೆ. ಗೌರಿ ಖಾನ್​ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದರಿಂದಲೇ ತಾವು ಆ ಫ್ಲಾಟ್​ ಖರೀದಿಸಿದ್ದು ಎಂದು ಜಶ್ವಂತ್​ ಷಾ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾರುಖ್​ ಪತ್ನಿ ಗೌರಿ ಖಾನ್​ಗೂ ಅಂಟಿತ್ತು ಗಾಂಜಾ ಕಳಂಕ; ಏರ್​ಪೋರ್ಟ್​ನಲ್ಲಿ ನಡೆದ ಆ ಘಟನೆ ನಿಜವೇ?

ಶಾರುಖ್​ ಖಾನ್​ ಅವರಿಗೆ ಬಹುವರ್ಷಗಳ ಬಳಿಕ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಪಠಾಣ್​’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್​ ಆಗಿದೆ. ಆ ಗೆಲುವನ್ನು ಶಾರುಖ್​ ಕುಟುಂಬದವರು ಎಂಜಾಯ್​ ಮಾಡುತ್ತಿದ್ದಾರೆ. ಅದರ ನಡುವೆ ಈ ಚೀಟಿಂಗ್​ ಕೇಸ್​ ತಲೆಬಿಸಿ ಶುರುವಾಗಿದೆ. ಐಪಿಸಿ ಸೆಕ್ಷನ್​ 409 ಅಡಿಯಲ್ಲಿ ಗೌರಿ ಖಾನ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ಗೌರಿ ಖಾನ್​ ಅವರು ಒಳಾಂಗಣ ವಿನ್ಯಾಸಕಿ ಆಗಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳ ಮನೆ ಮತ್ತು ಕಚೇರಿಯ ಇಂಟೀರಿಯರ್​ ಡಿಸೈನ್​ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅದರ ನಡುವೆ ಅವರು ಕೆಲವು ಕಿರಿಕ್​ಗಳನ್ನು ಎದುರಿಸುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!