7.1 C
Munich
Tuesday, March 21, 2023

Five directors Kannada anthology movie Pentagon will release on 7th April | Pentagon: ಏಪ್ರಿಲ್​ 7ಕ್ಕೆ ರಿಲೀಸ್​ ಆಗಲಿದೆ ‘ಪೆಂಟಗನ್​’ ಸಿನಿಮಾ; ಒಂದು ಟಿಕೆಟ್​ನಲ್ಲಿ 5 ಕಥೆ

ಓದಲೇಬೇಕು

Guru Deshpande | Pentagon Movie: ಹಾಡುಗಳು ಮತ್ತು ಟೀಸರ್​ ಮೂಲಕ ‘ಪೆಂಟಗನ್​’ ಸಿನಿಮಾ ಗಮನ ಸೆಳೆಯುತ್ತಿದೆ. ಕಥಾಸಂಕಲನದ ರೀತಿ ಮೂಡಿಬಂದಿರುವ ಈ ಚಿತ್ರ ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ.

ಪೆಂಟಗನ್ ಸಿನಿಮಾ ಪೋಸ್ಟರ್

ಚಂದನವನದಲ್ಲಿ ಸಾಕಷ್ಟು ಭಿನ್ನವಾದಂತಹ ಪ್ರಯತ್ನಗಳು ನಡೆಯುತ್ತಿವೆ. ಆ ಪೈಕಿ ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಅವರು ಕೂಡ ತಮ್ಮ ಛಾಪು ಮೂಡಿಸುತ್ತಿದ್ದಾರೆ. 5 ಭಿನ್ನವಾದ ಕಥೆಗಳ ಸಂಕಲನದ (Anthology Movie) ರೀತಿಯಲ್ಲಿ ‘ಪೆಂಟಗನ್​’ ಸಿನಿಮಾ ಮೂಡಿಬಂದಿದೆ. ಈ ಪ್ರಾಜೆಕ್ಟ್​ನ ಉಸ್ತುವಾರಿಯನ್ನು ಹೊತ್ತಿರುವ ಗುರು ದೇಶಪಾಂಡೆ ಅವರು ನಿರ್ಮಾಣದ ಜೊತೆಗೆ ಒಂದು ಕಥೆಯನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ರಿಲೀಸ್​ ಡೇಟ್​ ಘೋಷಣೆ ಆಗಿದೆ. ಏಪ್ರಿಲ್​ 7ರಂದು ‘ಪೆಂಟಗನ್​’ ಸಿನಿಮಾ (Pentagon Movie) ಬಿಡುಗಡೆ ಆಗಲಿದೆ. ಒಂದು ಟಿಕೆಟ್​ ಖರೀದಿಸಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ 5 ಕಥೆಗಳು ಸಿಗಲಿವೆ. ಡಿಫರೆಂಟ್​ ಪ್ರಯತ್ನ ಎಂಬ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ಕೌತುಕ ಮೂಡಿಸಿದೆ.

ಕಥಾಸಂಕಲನದ ರೀತಿ ಮೂಡಿಬಂದ ಸಿನಿಮಾಗಳ ಸಂಖ್ಯೆ ತುಂಬ ವಿರಳ. ‘ಜಿ ಸಿನಿಮಾಸ್​’ ಬ್ಯಾನರ್​ ಮೂಲಕ ‘ಪೆಂಟಗನ್​’ ಸಿನಿಮಾ ಮೂಡಿಬಂದಿದೆ. ಇದರಲ್ಲಿನ 5 ಬೇರೆ ಬೇರೆ ಕಥೆಗಳಿಗೆ ಐವರು ನಿರ್ದೇಶಕರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಸಿನಿಪ್ರಿಯರಿಗೆ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಇದೆ. ಇಂಥ ಭಿನ್ನವಾದ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗಲಿದೆ ಎಂಬ ಭರವಸೆಯಲ್ಲಿ ಚಿತ್ರತಂಡ ರಿಲೀಸ್​ ಡೇಟ್​ ಘೋಷಣೆ ಮಾಡಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್​ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್​ಸ್ಟಾರ್

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಐವರು ಖ್ಯಾತ ನಿರ್ದೇಶಕರು ‘ಪೆಂಟಗನ್​’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಗುರು ದೇಶಪಾಂಡೆ, ‘ಶಿವಾಜಿ ಸುರತ್ಕಲ್​’ ಸಿನಿಮಾ ಖ್ಯಾತಿಯ ಆಕಾಶ್​ ಶ್ರೀವತ್ಸ, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ‘ಬ್ರಹ್ಮಚಾರಿ’ ಚಿತ್ರದ ಚಂದ್ರಮೋಹನ್ ಹಾಗೂ ಹೊಸ ನಿರ್ದೇಶಕ ಕಿರಣ್ ಕುಮಾರ್​ ಅವರು ತಲಾ ಒಂದು ಕಥೆಗೆ ನಿರ್ದೇಶನ ಮಾಡಿದ್ದಾರೆ. ಎಲ್ಲ ಪ್ರತಿಭಾವಂತರ ಸಂಗಮ ಈ ಸಿನಿಮಾದಲ್ಲಿ ಆಗಿದೆ.

ಇದನ್ನೂ ಓದಿ: Kantara: ಇಟಾಲಿಯನ್​, ಸ್ಪ್ಯಾನಿಶ್​ ಭಾಷೆಯಲ್ಲೂ ರಿಲೀಸ್​ ಆಗತ್ತೆ ‘ಕಾಂತಾರ’; ಗುಡ್​ ನ್ಯೂಸ್​ ನೀಡಿದ ‘ಹೊಂಬಾಳೆ’

‘ಪೆಂಟಗನ್​’ ಚಿತ್ರದ ಪಾತ್ರವರ್ಗದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪ್ರಕಾಶ್​ ಬೆಳವಾಡಿ, ಕಿಶೋರ್​, ಪಿ. ರವಿಶಂಕರ್​, ತನಿಶಾ, ಪ್ರೇರಣಾ ಕಂಬಂ, ಪ್ರೀತಿಕಾ ದೇಶಪಾಂಡೆ, ರವಿ ನಾಯಕ್​, ಶ್ರುತಿ ನಾಯಕ್​, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ. ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹಾಡುಗಳು ಮತ್ತು ಟೀಸರ್​ ಮೂಲಕ ‘ಪೆಂಟಗನ್​’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಕಿಶೋರ್​ ಮಾಡಿರುವ ಕನ್ನಡ ಹೋರಾಟಗಾರನ ಪಾತ್ರ ಕೊಂಚ ವಿವಾದ ಹುಟ್ಟುಹಾಕುವಂತಿದೆ. ‘ಕಾಮನಬಿಲ್ಲು’ ಹಾಡು ಯುವ ಪ್ರೇಕ್ಷಕರ ಗಮನ ಸಳೆದಿದೆ. ಒಟ್ಟಿನಲ್ಲಿ ‘ಪೆಂಟಗನ್​’ ನೋಡಲು ಸಿನಿಪ್ರಿಯರು ಕಾತರದಿಂದ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!