ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿ ಸಲ್ಲಿಸಲು ಬಂದಾಗ ದರ್ಪ ತೋರಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಆರೋಪ ಮಾಡಿದ್ದಾರೆ.

ಶಾಸಕಿ ರೂಪಾಲಿ, ಮಾಜಿ ಶಾಸಕ ಸತೀಶ್ ಸೈಲ್
ಕಾರವಾರ: ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿ ಸಲ್ಲಿಸಲು ಬಂದಾಗ ದರ್ಪ ತೋರಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ್ (Roopali Naik) ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ (Satish Sail) ಆರೋಪ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಘಟನೆ ನಡೆದಿದೆ. ರೂಪಾಲಿ ನಾಯ್ಕ್ ಮತ್ತು ಸತೀಶ್ ಸೈಲ್ ನಡುವೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಸತೀಶ್ ಸೈಲ್‌ಗೆ ಕುಡುಕ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು ಮೇಜಿನ ಮೇಲಿದ್ದ ಪೇಪರ್ ವೇಟೇಜ್ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸದ್ಯ ಶಾಸಕಿ ದರ್ಪವನ್ನ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.