4.3 C
Munich
Tuesday, March 7, 2023

G20 Meeting detailed Calender for march and event details in Kannada | G20 Meeting Calender: ಭಾರತದಲ್ಲಿ ಜಿ20 ಸಭೆಗಳು; ಇಲ್ಲಿದೆ ಪೂರ್ತಿ ಕ್ಯಾಲೆಂಡರ್

ಓದಲೇಬೇಕು

2022ರ ಡಿಸೆಂಬರ್​​​ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್​ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ.

ಜಿ20 ಶೃಂಗಸಭೆ

ನವದೆಹಲಿ: ಜಿ20 ಸದಸ್ಯ ರಾಷ್ಟ್ರಗಳ (G20 Nations) ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡ ಬಳಿಕ ದೇಶದಲ್ಲಿ ಈಗಾಗಲೇ ಅನೇಕ ಸಭೆಗಳು ನಡೆದಿವೆ. ಕೆಲವು ದಿನಗಳ ಹಿಂದಷ್ಟೇ ಜಿ20 ದೇಶಗಳ ವಿದೇಶಾಂಗ ಸಚಿವರ ಶೃಂಗಸಭೆ ದೆಹಲಿಯಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿಯೂ ಅನೇಕ ಸಭೆಗಳು ನಡೆಯಲಿವೆ. ಈ ವಿಚಾರವಾಗಿ ಪರಿಷ್ಕೃತ ಹಾಗೂ ವಿಸ್ತೃತ ವೇಳಾಪಟ್ಟಿಯನ್ನು ಜಿ20 ಆಡಳಿತ ಬಿಡುಗಡೆ ಮಾಡಿದೆ. 2022ರ ಡಿಸೆಂಬರ್​​​ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್​ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ ಎಂದು ಪ್ರಕಟಣೆ ತಿಳಿಸಿದೆ.

ಈ ಪೈಕಿ 2 ಸಭೆಗಳು ಬೆಂಗಳೂರಿನಲ್ಲಿ ಫೆಬ್ರುವರಿ 24 ಹಾಗೂ 25ರಂದು, ನವದೆಹಲಿಯಲ್ಲಿ ಮಾರ್ಚ್ 1 ಹಾಗೂ 2ರಂದು ವಿದೇಶಾಂಗ ಸಚಿವರ ಸಭೆ ನಡೆದಿದೆ. 1 ಶೆರ್ಪಾ ಮೀಟಿಂಗ್, 19 ಕಾರ್ಯಕಾರಿ ಸಭೆಗಳು, ಯುರೋಪಿಯನ್ ಯೂನಿಯನ್​ಗೆ ಸಂಬಂಧಿಸಿದ 12 ಸಭೆಗಳು 1 ಕರ್ಟನ್​ ರೈಸರ್ ಸಭೆ ನಡೆದಿದೆ. ಮಾರ್ಚ್​ 6ರ ನಂತರ 19 ಸಭೆಗಳು ನಡೆಯಲಿದೆ. ಏಪ್ರಿಲ್​​ನಲ್ಲಿ 16 ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  1. ಹಣಕಾಸು ವಿಚಾರದಲ್ಲಿ ಜಾಗತಿಕ ಸಹಭಾಗಿತ್ವಕ್ಕೆ ಸಂಬಂಧಿಸಿದ ಸಭೆ ಮಾರ್ಚ್​ 6-7ರಂದು ಹೈದರಾಬಾದ್​ನಲ್ಲಿ ನಡೆಯುತ್ತಿದೆ.
  2. ಎಸ್​​​ಎಐ 20 ಇನ್​​ಸೆಪ್ಷನ್ ಮೀಟಿಂಗ್ ಮಾರ್ಚ್​ 13ರಿಂದ 15ರ ವರೆಗೆ ಗುವಾಹಟಿಯಲ್ಲಿ ನಡೆಯಲಿದೆ.
  3. 2ನೇ ಶೈಕ್ಷಣಿಕ ಕಾರ್ಯಕಾರಿ ಸಮಿತಿ ಸಭೆಯು ಮಾರ್ಚ್​ 15ರಿಂದ 17ರ ವರೆಗೆ ಅಮೃತಸರದಲ್ಲಿ ನಡೆಯಲಿದೆ.
  4. ಬಿ20 ಸಭೆ ಮಾರ್ಚ್​ 16ರಂದು ಗ್ಯಾಂಗ್ಟಕ್​ನಲ್ಲಿ ನಡೆಯಲಿದೆ.
  5. ಬಿ20 ಸಭೆ ಮಾರ್ಚ್​ 17ರಂದು ಸೂರತ್​​ನಲ್ಲಿ ನಡೆಯಲಿದೆ.
  6. ಸ್ಟಾರ್ಟಪ್​ 20 ಸೈಡ್ ಮೀಟಿಂಗ್ ಮಾರ್ಚ್​ 18-19ರಂದು ಗ್ಯಾಂಗ್ಟಕ್​ನಲ್ಲಿ ನಡೆಯಲಿದೆ.
  7. ಲೇಬರ್ 20 ಇನ್​ಸೆಪ್ಷನ್ ಮೀಟಿಂಗ್ ಮಾರ್ಚ್ 19-20ರಂದು ಅಮೃತಸರದಲ್ಲಿ ನಡೆಯಲಿದೆ.
  8. 2ನೇ ಜಂಟಿ ಹಣಕಾಸು ಮತ್ತು ಆರೋಗ್ಯ ಕಾರ್ಯಪಡೆ ಸಭೆ ಮಾರ್ಚ್ 20ರಂದು ನಡೆಯಲಿದ್ದು, ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.
  9. ಸಿವಿಲ್ 20 ಇನ್​ಸೆಪ್ಷನ್ ಮೀಟಿಂಗ್ ಮಾರ್ಚ್​ 21-22ರಂದು ನಾಗ್ಪುರದಲ್ಲಿ ನಡೆಯಲಿದೆ.
  10. ಸುಸ್ಥಿರ ಹಣಕಾಸು ಕಾರ್ಯಪಡೆಯ 2ನೇ ಸಭೆ ಮಾರ್ಚ್ 21-23ರಂದು ಉದಯಪುರದಲ್ಲಿ ನಡೆಯಲಿದೆ.
  11. ಮಾರ್ಗಸೂಚಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 24-25ರಂದು ಚೆನ್ನೈಯಲ್ಲಿ ನಡೆಯಲಿದೆ.
  12. ಆರ್​ಐಐಜಿ ಕಾರ್ಯಕ್ರಮ (ಡಿಬಿಟಿ) ಮಾರ್ಚ್​ 24-25ರಂದು ದಿಬ್ರೂಗಢ/ಇಟಾನಗರದಲ್ಲಿ ನಡೆಯಲಿದೆ.
  13. ಪರಿಸರ ಮತ್ತು ಹವಾಮಾನ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 27-29ರಂದು ಗಾಂಧಿನಗರದಲ್ಲಿ ನಡೆಯಲಿದೆ.
  14. ವ್ಯಾಪಾರ, ಹೂಡಿಕೆ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಾರ್ಚ್ 28ರಿಂದ 30ರ ವರೆಗೆ ಮುಂಬೈಯಲ್ಲಿ ನಡೆಯಲಿದೆ.
  15. ಮೂಲಸೌಕರ್ಯ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 28 ಹಾಗೂ 29ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
  16. ಕೃಷಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್​ 29ರಿಂದ 31ರ ವರೆಗೆ ಚಂಡೀಗಢದಲ್ಲಿ ನಡೆಯಲಿದೆ.
  17. 2ನೇ ಶೆರ್ಪಾ ಮೀಟಿಂಗ್ ಮಾರ್ಚ್ 30ರಿಂದ ಏಪ್ರಿಲ್ 2ರ ವರೆಗೆ ಕುಮಾರಕೋಮ್​​ನಲ್ಲಿ ನಡೆಯಲಿದೆ.
  18. ವಿಪತ್ತು ನಿರ್ವಹಣಾ ಗ್ರೂಪ್​ನ ಮೊದಲ ಸಭೆ ಮಾರ್ಚ್​ 30ರಿಂದ ಏಪ್ರಿಲ್ 1ರ ವರೆಗೆ ಗಾಂಧಿನಗರದಲ್ಲಿ ನಡೆಯಲಿದೆ.
  19. ಫೈನಾನ್ಶಿಯಲ್ ಆರ್ಕಿಟೆಕ್ಚರ್ ವರ್ಕಿಂಗ್ ಗ್ರೂಪ್​ನ 2ನೇ ಸಭೆ ಮಾರ್ಚ್ 30 ಹಾಗೂ 31ರಂದು ಪ್ಯಾರಿಸ್​​ನಲ್ಲಿ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!