11.4 C
Munich
Thursday, March 30, 2023

German Chancellor: Modi welcomed by Olaf Scholes, Russia, China discuss Indo-Pacific National News in kannada | German Chancellor: ಓಲಾಫ್ ಶೋಲ್ಸ್ ಸ್ವಾಗತಿಸಿದ ಮೋದಿ, ರಷ್ಯಾ, ಚೀನಾ ಇಂಡೋ-ಪೆಸಿಫಿಕ್ ಕುರಿತು ಚರ್ಚೆ

ಓದಲೇಬೇಕು

ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಸ್ ಇಂದು (ಫೆಬ್ರವರಿ 25) ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ, ರಾಷ್ಟ್ರಪತಿ ಭವನದಲ್ಲಿ ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಸ್ ಅವರಿಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಲಾಯಿತು.

ದೆಹಲಿ:ರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಸ್ (German Chancellor Olaf Scholz) ಇಂದು (ಫೆಬ್ರವರಿ 25) ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ, ರಾಷ್ಟ್ರಪತಿ ಭವನದಲ್ಲಿ ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಸ್ ಅವರಿಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಲಾಯಿತು. ಓಲಾಫ್ ಶೋಲ್ಸ್ ಅವರು ಭಾರತಕ್ಕೆ ಎರಡು ದಿನದ ಭೇಟಿಯಲ್ಲಿ ನಾಳೆ ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ. ಚಾನ್ಸಲರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಅವರು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ಶೋಲ್ಸ್ ಮತ್ತು ಮೋದಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬಳಿಕ ಭಾರತ ಮತ್ತು ಜರ್ಮನ್ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ದ್ವಿಪಕ್ಷೀಯ ಮಾತುಕತೆ ವೇಳೆ ಉಕ್ರೇನ್ ಯುದ್ಧ, ಚೀನಾ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಸಾಧ್ಯತೆಗಳು ಇದೆ ಎಂದು ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ತಿಳಿಸಿದ್ದಾರೆ. ಓಲಾಫ್ ಶೋಲ್ಸ್ ಜತೆ ಉನ್ನತ ಮಟ್ಟದ ಅಧಿಕಾರಿಗಳು, ವಿವಿಧ ಕಂಪನಿಗಳ 12 ಮಂದಿ ಸಿಇಒಗಳನ್ನೊಳಗಂಡ ಉದ್ಯಮಿಗಳ ನಿಯೋಗ ಇರಲಿದೆ. ವಿಶ್ವಸಂಸ್ಥೆಯ ಮಹಾ ಅಧಿವೇಶನ ಮತ್ತು ಭದ್ರತಾ ಮಂಡಳಿಯಂತಹ ಸಂಸ್ಥೆಗಳಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿರುದ್ಧ ಮತ ಚಲಾಯಿಸಬೇಕೆಂದು ಜರ್ಮನಿಯು ಭಾರತಕ್ಕೆ ಹೇಳಿದ್ದರೂ, ಅಂತಹ ವಿಷಯಗಳಲ್ಲಿ ಮತ ಚಲಾಯಿಸುವುದು ಅಥವಾ ದೂರವಿರುವುದು ಯಾವುದೇ ದೇಶದ ಸಾರ್ವಭೌಮ ನಿರ್ಧಾರವಾಗಿದೆ. ಇಂಥ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಭಾರತ ಮತ್ತು ಜರ್ಮನಿ ಜತೆಯಾಗಿ ಮುಂದೆ ಸಾಗಲಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Olaf Scholz: ಜರ್ಮನಿ ಚಾನ್ಸಲರ್ ಓಲಾಫ್ ಶೋಲ್ಸ್ ಇಂದು ಭಾರತಕ್ಕೆ, ನಾಳೆ ಬೆಂಗಳೂರಿಗೆ ಭೇಟಿ

ಇಂಡೋ-ಪೆಸಿಫಿಕ್, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಚೀನೀ ಆಕ್ರಮಣಶೀಲತೆಯನ್ನು ಕಂಡು ಉಭಯ ನಾಯಕರು ಈ ಬಗ್ಗೆ ದೀರ್ಘಕಾಲದ ಚರ್ಚಿಸಲು ನಿರೀಕ್ಷಿಸಲಾಗುವುದು. ಜರ್ಮನಿ ಮತ್ತು ಭಾರತವು ದೃಢವಾದ ವಾಣಿಜ್ಯ ಸಂಬಂಧವನ್ನು ಹೊಂದಿದೆ. ಜರ್ಮನಿಯು EU ನಲ್ಲಿ ಭಾರತದ ಶ್ರೇಷ್ಠ ವ್ಯಾಪಾರ ಪಾಲುದಾರ ಮತ್ತು ಅದರ ಟಾಪ್ 10 ಅಂತರರಾಷ್ಟ್ರೀಯ ವ್ಯಾಪಾರ ಸಂಬಂಧಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆದಾರರಲ್ಲಿ ಒಬ್ಬರು ಎಂದು ಹೇಳಿದ್ದಾರೆ.

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!