ವೇತನ ಶೇಕಡಾ 17 ರಷ್ಟು ಹೆಚ್ಚಳಕ್ಕೆ ಷಡಕ್ಷರಿ ಅವರು ಯಾವ ಲಾಜಿಕ್ ಆಧಾರದಲ್ಲಿ ಒಪ್ಪಿಕೊಂಡರೆಂದು ಸರ್ಕಾರಿ ನೌಕರರು ದಿಗ್ಬ್ರಾಂತರಾಗಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
ಮಡಿಕೇರಿ: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ ಅವರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ (CS Shadakshari) ಐದೂವರೆ ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರ (government employees) ಬೆನ್ನಿಗೆ ಚೂರಿ ಹಾಕಿ ಸರ್ಕಾರದಿಂದ ಉಡುಗೊರೆ (gift) ಪಡೆದಿದ್ದಾರೆ ಎಂದು ಅರೋಪಿಸಿದ್ದಾರೆ. ವೇತನ ಶೇಕಡಾ 17 ರಷ್ಟು ಹೆಚ್ಚಳಕ್ಕೆ ಷಡಕ್ಷರಿ ಅವರು ಯಾವ ಲಾಜಿಕ್ ಆಧಾರದಲ್ಲಿ ಒಪ್ಪಿಕೊಂಡರೆಂದು ಸರ್ಕಾರಿ ನೌಕರರು ದಿಗ್ಬ್ರಾಂತರಾಗಿದ್ದಾರೆ. ಅಸಲು ವಿಷಯವೇನೆಂದರೆ, ಕೆಎಸ್ ಈಶ್ವರಪ್ಪ ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವ ವಾಗ್ದಾನ ಮಾಡಲಾಗಿದೆ. ಆ ಕಾರಣದಿಂದಾಗಿ ಅವರು ಸರ್ಕಾರ ಹೇಳಿದ್ದನ್ನು ಒಪ್ಪಿಕೊಂಡು ಸರ್ಕಾರಿ ನೌಕರರಿಗೆ ಮೋಸ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ