3.1 C
Munich
Friday, February 24, 2023

harmanpreet kaur cried after india loss against australia in Womens T20 World Cup 2023 | ಸೋತ ಬಳಿಕ ಮಾಜಿ ನಾಯಕಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ಹರ್ಮನ್‌ಪ್ರೀತ್; ವಿಡಿಯೋ ವೈರಲ್

ಓದಲೇಬೇಕು

Women‘s T20 World Cup 2023: ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ದುರದೃಷ್ಟಕರ ರೀತಿಯಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. 34 ಎಸೆತಗಳಲ್ಲಿ 52 ರನ್ ಗಳಿಸಿ ಆಡುತ್ತಿದ್ದ ಕೌರ್ ರನ್ ಔಟ್ ಬಲೆಗೆ ಬೀಳಬೇಕಾಯಿತು.

ಕಣ್ಣೀರಿಟ್ಟ ಹರ್ಮನ್‌ಪ್ರೀತ್ ಕೌರ್

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳೆ ಟಿ20 ವಿಶ್ವಕಪ್​ನಲ್ಲಿ (Women’s T20 World Cup 2023) ಫೈನಲ್​ಗೇರಲು ಭಾರತ ಮಹಿಳಾ ತಂಡ ವಿಫಲವಾಗಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ (India Vs Australia) ಗೆಲುವಿನ ಹಾದಿಯಲ್ಲಿತ್ತು. ಆದರೆ ಜೆಮಿಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ವಿಕೆಟ್‌ಗಳು ಪತನವಾದ ತಕ್ಷಣ ಪಂದ್ಯದ ದಿಕ್ಕೆ ಬದಲಾಯಿತು. ಅಂತಿಮವಾಗಿ ಭಾರತ ತಂಡ 5 ರನ್‌ಗಳಿಂದ ಸೋಲನುಭವಿಸಬೇಕಾಯಿತು ಮತ್ತು ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸು ಅಪೂರ್ಣವಾಗಿ ಉಳಿಯಿತು. ಅಂದಹಾಗೆ, ಟೀಂ ಇಂಡಿಯಾದ (Team India) ಸೋಲಿನ ನಂತರ ನಡೆದ ಘಟನೆಗಳು ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳ ಕಣ್ಣಲ್ಲಿ ನೀರು ಜೀನುಗುವಂತೆ ಮಾಡಿತು. ವಾಸ್ತವವಾಗಿ, ಸೋಲಿನ ನಂತರ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಭಾವುಕರಾದರು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಅವರು ಮಾಜಿ ನಾಯಕಿ ಅಂಜುಮ್ ಚೋಪ್ರಾ ಅವರನ್ನು ಕಂಡ ಕೂಡಲೇ ಅವರನ್ನು ತಬ್ಬಿಕೊಂಡು ಕಣ್ಣೀರಿಡಲು ಆರಂಭಿಸಿದರು. ಮಾಜಿ ನಾಯಕಿ ಕೂಡ ಕೌರ್​ಗೆ ಸಮಾಧಾನ ಮಾಡಿ ಸಂತೈಸಿದರು. ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ಗೆ ಬಂದ ಕೌರ್, ತಾನು ಅಳುವುದನ್ನು ಭಾರತೀಯರು ನೋಡಬಾರದೆಂದು ಕಪ್ಪು ಕನ್ನಡಕ ಧರಿಸಿರುವುದಾಗಿ ಹೇಳಿದರು. ಇದು ಟೀಂ ಇಂಡಿಯಾ ಅಭಿಮಾನಿಗಳು ಭಾವುಕರಾಗುವಂತೆ ಮಾಡಿತು.

ಕಳಪೆ ಫೀಲ್ಡಿಂಗ್, ಅಗ್ರ ಕ್ರಮಾಂಕ ವಿಫಲ, ಆ 2 ವಿಕೆಟ್; ಭಾರತದ ಸೋಲಿಗೆ ಪ್ರಮುಖ 5 ಕಾರಣಗಳಿವು

ಕೌರ್​ ಹಿಂದೆ ಸರಿಯುವವರಲ್ಲ- ಅಂಜುಮ್ ಚೋಪ್ರಾ

ಹರ್ಮನ್‌ಪ್ರೀತ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅಂಜುಮ್ ಚೋಪ್ರಾ, ಈ ಪಂದ್ಯದಲ್ಲಿ ಬಹುಶಃ ಹರ್ಮನ್‌ಪ್ರೀತ್ ಕೂಡ ಆಡುವುದು ಅಸಾಧ್ಯವಾಗಿತ್ತು. ಆದರೆ ಇದು ವಿಶ್ವಕಪ್‌ನ ಸೆಮಿಫೈನಲ್ ಪಂದ್ಯವಾಗಿದ್ದರಿಂದ ಅವರು ಆಡಿದ್ದರು. ಹರ್ಮನ್‌ಪ್ರೀತ್ ಕೌರ್ ಒಂದು ಹೆಜ್ಜೆ ಹಿಂದೆ ಸರಿಯುವವರಲ್ಲ ಎಂಬುದು ನನಗೆ ಗೊತ್ತು. ಅನಾರೋಗ್ಯದ ನಡುವೆಯೂ ಈ ಪಂದ್ಯಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಂಡ ರೀತಿ. ಫೀಲ್ಡಿಂಗ್‌ನಲ್ಲಿ ಅವರು ತೋರಿದ ಶ್ರಮ ಅದ್ಭುತವಾಗಿತ್ತು. ಅಲ್ಲದೆ ಬ್ಯಾಟಿಂಗ್​ನಲ್ಲೂ ಅವರು ತಂಡಕ್ಕೆ ಭರವಸೆ ಮೂಡಿಸಿದರು. ನಾನು ಅವರ ದುಃಖವನ್ನು ಕಡಿಮೆ ಮಾಡಲು ಮಾತ್ರ ಬಯಸಿದ್ದೆ ಎಂದಿದ್ದಾರೆ.

ಹರ್ಮನ್‌ಪ್ರೀತ್ ವಿಕೆಟ್ ಟರ್ನಿಂಗ್ ಪಾಯಿಂಟ್

ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ದುರದೃಷ್ಟಕರ ರೀತಿಯಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. 34 ಎಸೆತಗಳಲ್ಲಿ 52 ರನ್ ಗಳಿಸಿ ಆಡುತ್ತಿದ್ದ ಕೌರ್ ರನ್ ಔಟ್ ಬಲೆಗೆ ಬೀಳಬೇಕಾಯಿತು. ಎರಡನೇ ರನ್ ತೆಗೆದುಕೊಳ್ಳುವಾಗ, ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟ್ ಪಿಚ್‌ನಲ್ಲಿ ಸಿಲುಕಿಕೊಂಡಿದ್ದರಿಂದ ದುರುದೃಷ್ಟಕರವಾಗಿ ಕೌರ್ ಪೆವಿಲಿಯನ್ಗೆ ಮರಳಬೇಕಾಯಿತು. ಹರ್ಮನ್‌ಪ್ರೀತ್‌ ವಿಕೆಟ್‌ ಉರುಳಿದ ಬಳಿಕ ಆಸ್ಟ್ರೇಲಿಯಾ ಮತ್ತೆ ಪಂದ್ಯಕ್ಕೆ ಹಿಂದುರಿಗಿದ್ದಲ್ಲದೆ, ಟೀಂ ಇಂಡಿಯಾದ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!