1.7 C
Munich
Friday, March 3, 2023

Here are the 7 Bollywood Actress who face sexual abuse in Childhood | ‘ಮಲಗಿದ್ದಾಗ ಮಲತಂದೆ ನನ್ನ ಖಾಸಗಿ ಭಾಗ ಮುಟ್ಟಿದ್ದ’; ನಿಜ ಜೀವನದಲ್ಲಿ ಲೈಂಗಿಕ ಕಿರುಕುಳ ಎದುರಿಸಿದ ನಟಿಯರಿವರು

ಓದಲೇಬೇಕು

ಕಂಗನಾ ರಣಾವತ್ ಸೇರಿ ಅನೇಕರಿಗೆ ಈ ರೀತಿಯ ಅನುಭವ ಆಗಿದೆ. ಕಂಗನಾ ಅವರು ಚಿತ್ರರಂಗಕ್ಕೆ ಬಂದಾಗ ಲೈಂಗಿಕ ದೌರ್ಜನ್ಯ ಎದುರುಸಿದ್ದರು. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.

ನಿಜ ಜೀವನದಲ್ಲಿ ಲೈಂಗಿಕ ಕಿರುಕುಳ ಎದುರಿಸಿದ ನಟಿಯರಿವರು

ಅನೇಕರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ. ಆದರೆ, ಅದನ್ನು ಹೇಳಿಕೊಳ್ಳುವ ಧೈರ್ಯ ಮಾಡಿರುವುದಿಲ್ಲ. ಬಾಲಿವುಡ್​ನ (Bollywood) ಅನೇಕ ಹೀರೋಯಿನ್​​ಗಳು ಈ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಕಂಗನಾ ರಣಾವತ್ (Kangana Ranaut) ಸೇರಿ ಅನೇಕರಿಗೆ ಈ ರೀತಿಯ ಅನುಭವ ಆಗಿದೆ. ಕಂಗನಾ ಅವರು ಚಿತ್ರರಂಗಕ್ಕೆ ಬಂದಾಗ ಲೈಂಗಿಕ ದೌರ್ಜನ್ಯ ಎದುರಿಸಿದ್ದರು. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.

ಕಲ್ಕಿ ಕೇಕ್ಲಾ

ಕಲ್ಕಿ ಕೇಕ್ಲಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಗಲ್ಲಿ ಬಾಯ್​’ ಮೊದಲಾದ ಚಿತ್ರಗಳಲ್ಲಿ ಕಲ್ಕಿ ನಟಿಸಿದ್ದಾರೆ. 9ನೇ ವಯಸ್ಸಿನಲ್ಲಿದ್ದಾಗಲೇ ಕಲ್ಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಈ ವಿಚಾರವನ್ನು ಹಲವು ವರ್ಷಗಳ ಕಾಲ ಅವರು ಮುಚ್ಚಿಟ್ಟಿದ್ದರು. ಈ ಬಗ್ಗೆ ಅವರಿಗೆ ಬೇಸರ ಇದೆ.

ಸೋಮಿ ಅಲಿ

ಸೋಮಿ ಅಲಿ ಪಾಕಿಸ್ತಾನದವರು. ಅವರು ಬಾಲಿವುಡ್​ನಲ್ಲಿ ನಟಿಸಿದ್ದರು. ಸಲ್ಮಾನ್ ಖಾನ್ ಅವರ ಮಾಜಿ ಗರ್ಲ್​​ಫ್ರೆಂಡ್ ಕೂಡ ಹೌದು. ಈಗ ಚಿತ್ರರಂಗದಿಂದ ದೂರ ಇದ್ದಾರೆ. ಅವರು 5ನೇ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯ ಎದುರಿಸಿದ್ದರು. ಪಾಕಿಸ್ತಾನದಲ್ಲಿ ಸೋಮಿ ಬಾಲ್ಯವನ್ನು ಕಳೆದಿದ್ದರು.

ಶೀಲಾ ರೇ

ಶೀಲಾ ರೇ ಅವರು ಮಾಡೆಲ್ ಆಗಿದ್ದರು. ಬಾಲಿವುಡ್​ನಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗಿಲ್ಲ. ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಾಲ್ಕು ಜನರು ಅವರನ್ನು ರೇಪ್ ಮಾಡಿದ್ದರು. ಈಗ ಅವರು ನಮ್ಮೊಂದಿಗಿಲ್ಲ.

ಡೈಸಿ ಇರಾನಿ

ಡೈಸಿ ಇರಾನಿ ಅವರು ಬಾಲ ಕಲಾವಿದೆಯಾಗಿ ಹೆಚ್ಚು ಗುರುತಿಸಿಕೊಂಡಿದ್ದರು. 1950-60ರ ಸಂದರ್ಭದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಅವರು 6 ವರ್ಷ ಇದ್ದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಸಿನಿಮಾ ಸೆಟ್​ನಲ್ಲೇ ಈ ಘಟನೆ ನಡೆದಿತ್ತು.

ಕಂಗನಾ ರಣಾವತ್

ಈ ವಿಚಾರ ಅನೇಕರಿಗೆ ಅಚ್ಚರಿ ತರಬಹುದು. ಕಂಗನಾಗೂ ಕಹಿ ಅನುಭವ ಆಗಿತ್ತು. ಕಂಗನಾ ಅವರು ಆಗತಾನೇ ಚಿತ್ರರಂಗಕ್ಕೆ ಬಂದಿದ್ದರು. ಈ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಆದಿತ್ಯ ಪಾಂಚೋಲಿ ಅವರು ಈ ಕೆಲಸ ಮಾಡಿದ್ದರು ಎನ್ನಲಾಗಿದೆ.

ಸೋಫಿಯಾ ಹಯಾತ್

ಸೋಫಿಯಾ ಹಯಾತ್ ಅವರು ‘ಡೈರಿ ಆಫ್ ಬಟರ್​ಫ್ಲೈ’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಈ ಚಿತ್ರ 2011ರಲ್ಲಿ ರಿಲೀಸ್ ಆಯಿತು. ಚಿಕ್ಕ ವಯಸ್ಸಿನಲ್ಲಿ ಅವರಿಗೆ ಕಹಿ ಅನುಭವ ಆಗಿತ್ತು.

ಪದ್ಮಾ ಲಕ್ಷ್ಮೀ

ಬಾಲಿವುಡ್​ ಹಾಗೂ ಹಾಲಿವುಡ್​ನಲ್ಲಿ ಪದ್ಮಲಕ್ಷ್ಮೀ ಆ್ಯಕ್ಟೀವ್ ಇದ್ದಾರೆ. ಅವರು 7ನೇ ವಯಸ್ಸಿನಲ್ಲಿದ್ದಾಗ ಮಲತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ‘ಮಧ್ಯರಾತ್ರಿ ಎದ್ದಾಗ ನನ್ನ ಮಲತಂದೆಯ ಕೈ ಕೆಳಭಾಗದಲ್ಲಿತ್ತು. ಆತ ನನ್ನ ಕೈನ ತೆಗೆದು ಅವನ ಖಾಸಗಿ ಭಾಗದ ಬಳಿ ಇಟ್ಟುಕೊಂಡ. ನಾನು ನಿದ್ರಿಸಿದಾಗ ಇದು ಎಷ್ಟು ಬಾರಿ ಆಗಿದೆಯೋ ಗೊತ್ತಿಲ್ಲ. ಒಮ್ಮೆ ಹುಡುಗಿಯ ಮುಗ್ಧತೆ ಹೋದರೆ ಅದು ಮರಳುವುದಿಲ್ಲ’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!