10.5 C
Munich
Wednesday, March 8, 2023

Holi 2023 team indias these 4 cricketers play holi first time after marriage | Holi 2023: ಮದುವೆ ಬಳಿಕ ಟೀಂ ಇಂಡಿಯಾದ ಈ ನಾಲ್ವರು ಕ್ರಿಕೆಟಿಗರಿಗೆ ಇದು ಮೊದಲ ಹೋಳಿ ಸಂಭ್ರಮ

ಓದಲೇಬೇಕು

ಪೃಥ್ವಿಶಂಕರ

Updated on: Mar 08, 2023 | 3:44 PM

Holi 2023: ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರು ಇದೇ ವರ್ಷ ಸಪ್ತಪದಿ ತುಳಿದಿದ್ದು, ಅವರು ಕೂಡ ತಮ್ಮ ಮಡದಿಯರೊಂದಿಗೆ ಹೋಳಿ ಆಚರಿಸುತ್ತಿದ್ದಾರೆ. ಹಾಗಿದ್ದರೆ ಯಾರು ಆ ನಾಲ್ವರು ಕ್ರಿಕೆಟಿಗರು ಎಂಬುದರ ವಿವರ ಇಲ್ಲಿದೆ.

Mar 08, 2023 | 3:44 PM

ಭಾರತದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ನವದಂಪತಿಗಳಿಗೆ ಈ ಹಬ್ಬ ಇನ್ನಷ್ಟು ವಿಶೇಷ. ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರು ಇದೇ ವರ್ಷ ಸಪ್ತಪದಿ ತುಳಿದಿದ್ದು, ಅವರು ಕೂಡ ತಮ್ಮ ಮಡದಿಯರೊಂದಿಗೆ ಹೋಳಿ ಆಚರಿಸುತ್ತಿದ್ದಾರೆ. ಹಾಗಿದ್ದರೆ ಯಾರು ಆ ನಾಲ್ವರು ಕ್ರಿಕೆಟಿಗರು ಎಂಬುದರ ವಿವರ ಇಲ್ಲಿದೆ.

ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಈ ವರ್ಷ ಜನವರಿ 23 ರಂದು ವಿವಾಹವಾದರು. ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಅವರು ಕೆಎಲ್ ರಾಹುಲ್ ಅವರೊಂದಿಗೆ ಬಹಳ ದಿನಗಳವರೆಗೆ ಡೇಟಿಂಗ್ ಮಾಡಿ ಆ ನಂತರ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಸದ್ಯ ಫಾರ್ಮ್​ನಿಂದ ಬಳಲುತ್ತಿರುವ ರಾಹುಲ್ ಟೀಂ ಇಂಡಿಯಾದೊಂದಿಗಿದ್ದರೂ, ತಂಡದಲಿಲ್ಲ. ಹಾಗಿದ್ದರು ಅವರು ತಮ್ಮ ಪತ್ನಿ ಅಥಿಯಾ ಅವರೊಂದಿಗೆ ತಂಡ ತಂಗಿರುವ ಹೋಟೆಲ್‌ನಲ್ಲಿ ಈ ಹಬ್ಬವನ್ನು ಆಚರಿಸಿದ್ದಾರೆ.

ಟೀಂ ಇಂಡಿಯಾದ ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ಇದೇ ವರ್ಷ ತನ್ನ ಗೆಳತಿ ಮೇಹಾ ಪಟೇಲ್ ಅವರೊಂದಿಗೆ ಜನವರಿ 26 ರಂದು ಗುಜರಾತ್‌ನ ವಡೋದರಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ವಿರಾಮ ತೆಗೆದುಕೊಂಡಿದ್ದ ಅಕ್ಷರ್ ಸಪ್ತಪದಿ ತುಳಿದಿದ್ದರು. ಸದ್ಯ ಅದ್ಭುತ ಫಾರ್ಮ್‌ನಲ್ಲಿರುವ ಅಕ್ಷರ್ ಟೀಂ ಇಂಡಿಯಾದ ಭರವಸೆಯ ಆಟಗಾರ ಎನಿಸಿಕೊಂಡಿದ್ದಾರೆ.

ಟೀಂ ಇಂಡಿಯಾದ ಮತ್ತೋರ್ವ ಆಟಗಾರ ಶಾರ್ದೂಲ್ ಠಾಕೂರ್​ಗೂ ಮದುವೆಯ ನಂತರ ಇದು ಮೊದಲ ಹೋಳಿ ಹಬ್ಬವಾಗಿದೆ. ಶಾರ್ದೂಲ್ 2021 ರಲ್ಲಿ ಗೆಳತಿ ಮಿಥಾಲಿ ಪಾರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೆಲವು ಕಾರಣಗಳಿಂದ ಅವರ ಮದುವೆಯ ದಿನಾಂಕವನ್ನು ಮುಂದೂಡಲಾಯಿತು. ಅದರ ನಂತರ ಈಗ ಫೆಬ್ರವರಿ 27 ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಟೀಂ ಇಂಡಿಯಾದ ವೇಗದ ಬೌಲರ್ ದೀಪಕ್ ಚಹಾರ್​ಗೂ ಮದುವೆಯ ನಂತರ ಇದು ಮೊದಲ ಹೋಳಿಯಾಗಿದೆ. ದೀಪಕ್ ಕಳೆದ ವರ್ಷ ಜೂನ್ 1 ರಂದು ಆಗ್ರಾದಲ್ಲಿ ಗೆಳತಿ ಜಯ ಭಾರದ್ವಾಜ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಸದ್ಯ ಇಂಜುರಿಯಿಂದಾಗಿ ತಂಡದಲ್ಲಿರದ ದೀಪಕ್​, ಈ ಬಾರಿಯ ಐಪಿಎಲ್​ನಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!