4.6 C
Munich
Tuesday, March 7, 2023

Hubballi-Ankola railway line project Landslide scare in Western Ghats Pralhad Joshi clarifies at Dharwad news in kannada | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ: ಪಶ್ಚಿಮಘಟ್ಟದಲ್ಲಿ ಭೂಕುಸಿತದ ಭೀತಿ, ಪ್ರಲ್ಹಾದ್ ಜೋಶಿ ಸ್ಪಷ್ಟನೆ

ಓದಲೇಬೇಕು

ಹುಬ್ಭಳ್ಳಿ ಅಂಕೋಲಾ ರೈಲು ಯೋಜನೆಯು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಹಾದುಹೋಗಲಿದ್ದು, ಭೂ ಕುಸಿತಗಳು ಉಂಟಾಗಬಹುದು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದ ತಜ್ಞರ ಸಮಿತಿ ಎಚ್ಚರಿಸಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಪ್ರಲ್ಹಾದ್ ಜೋಶಿ

ಧಾರವಾಡ: ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ (Hubballi-Ankola Railway Line Project) ನಿರ್ಮಾಣದ ವೇಳೆ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ (Landslide scare in Western Ghats) ಇದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದ ತಜ್ಞರ ಸಮಿತಿ ಪರಿಸರ ಸಚಿವಾಲಯಕ್ಕೆ ಸೂಚಿಸಿದೆ. ಆದರೆ ಭೂಕುಸಿತದ ಬಗ್ಗೆ ರೈಲ್ವೆ ಇಲಾಖೆಯ ಯೋಜನಾ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರನ್ನು ಪ್ರಶ್ನಿಸಿದಾಗ, ಅದರ ಬಗ್ಗೆ ಸುದೀರ್ಘವಾಗಿ ಮಾಹಿತಿ ತರಿಸಬೇಕಿದೆ. ಎಲ್ಲ ಕ್ಲಿಯರ್ ಆದ ನಂತರ ನೋಡುತ್ತೇವೆ ಎಂದರು.

ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿರುವ ಈ ರೈಲು ಮಾರ್ಗ ಪ್ರಸ್ತಾವನೆಯನ್ನು 1998ರಲ್ಲೇ ಸಲ್ಲಿಸಲಾಗಿತ್ತು. ಅಂದಿನಿಂದಲೂ ಯೋಜನೆಗೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂರಕ್ಷಕರ ವಿರೋಧವಿದೆ. ರೈಲು ಮಾರ್ಗ ಹಾದು ಹೋಗುವ ಕಾಡಿನ ಪ್ರದೇಶ ಪರಿಸರದ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿದೆ. ಯೋಜನೆ ನಿರ್ಮಾಣದ ವೇಳೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದ್ದು, ಪ್ರಾಣಿ ಸಂಕುಲಕ್ಕೆ ಸಂಚಕಾರ ಬರಲಿದೆ. ಯೋಜನೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾದ ನಂತರ ರೈಲಿಗೆ ಸಿಲುಕಿ ಪ್ರಾಣಿಗಳು ಸಾವನ್ನಪ್ಪಬಹುದು. ಈಗಾಗಲೇ ಮಧ್ಯಪ್ರದೇಶದಲ್ಲಿ ಇಂತಹ ಘಟನೆಗಳು ಸಂಭವಿಸಿವೆ. ವನ್ಯಜೀವಿಗಳ ಮೇಲಾಗುವ ಪರಿಣಾಮದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಸಮಿತಿ ಸೂಚಿಸಿದೆ.

ಇದನ್ನೂ ಓದಿ: ಉಗ್ರರ ವಿಚಾರದಲ್ಲಿ ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಬಿಟ್ಟು, ದೇಶದ ಜೊತೆ ನಿಲ್ಲುವುದನ್ನ ಕಲಿಯಲಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಐಐಟಿಗೆ ಭೂಮಿ ಕೊಟ್ಟಿದ್ದು ನಾವು, ನಮ್ಮ ಕಾಲದ ಐಐಟಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ಬಗ್ಗೆಯೂ ಸಿದ್ದರಾಮಯ್ಯ ಹಾಗೆ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಬರೀ ಬಡಿದಾಟದಲ್ಲೇ ಕಾಲಹರಣ ಮಾಡಿಹೋದರು. ನಾವು ಮಾಡದ ಕಾರಣ ನೀವು ಮಾಡುತ್ತಿದ್ದೀರಿ ಎನ್ನುವಂತಿದೆ ಹೇಳಿಕೆ. ಇದಕ್ಕಾಗಿ ನಾನು ಸಿದ್ದರಾಮಯ್ಯಗೆ ಧನ್ಯವಾದ ಹೇಳುತ್ತೇನೆ. 13 ಬಾರಿ ಬಜೆಟ್ ಮಾಡಿಸಿದವರು ಬಾಲಿಶವಾಗಿ ಮಾತಾಡಬಾರದು ಎಂದರು.

ಐಐಟಿಗೆ ಭೂಮಿ ಕೊಟ್ಟಿದ್ದು ನಾವು ಎಂದು ಹೇಳುವುದಕ್ಕೂ ಮುನ್ನ ಸಿದ್ದರಾಮಯ್ಯ ಅವರು, ಬೆಂಗಳೂರು-ಮೈಸೂರು ಹೈವೇ ಕ್ರೆಟಿಡ್ ನಮಗೆ ಸಲ್ಲಬೇಕು. ಇದರಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದ ಯಾವ ಪಾತ್ರವೂ ಇಲ್ಲ. ತಾಪ್​​ ಸಿಂಹ ಕ್ಷೇತ್ರದ ವ್ಯಾಪ್ತಿಗೆ ಕೆಲವೇ ಕಲವು ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಾನು ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹೆಚ್​​.ಸಿ.ಮಹದೇವಪ್ಪಗೂ ಈ ರಸ್ತೆಯ ಎಲ್ಲಾ ಮಾಹಿತಿ ಗೊತ್ತಿದೆ. ಮಾ.9ರಂದು ಬೆಂಗಳೂರು-ಮೈಸೂರು ಹೈವೇ ಪರಿಶೀಲನೆ ಮಾಡುತ್ತೇವೆ ಎಂದಿದ್ದರು.

ಸಿದ್ದರಾಮಯ್ಯನವರೇ ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ: ಜೋಶಿ

ಐಐಟಿ ರಾಯಚೂರಿಗೆ ಎಂದು ಸಿದ್ದರಾಮಯ್ಯ ಗೊಂದಲ ಮಾಡಿದ್ದರು. ಐಐಟಿಗೆ ಧಾರವಾಡದಲ್ಲಿ ಜಾಗ ಒದಗಿಸಿದವರು ಆರ್.ವಿ.ದೇಶಪಾಂಡೆ. ಸಿದ್ದರಾಮಯ್ಯನವರೇ ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ. ರಾಹುಲ್ ಗಾಂಧಿ ಜೊತೆ ಪಾದಯಾತ್ರೆ ನಂತರ ಅವರಂತೆ ಇವರೂ ಆಗಿದ್ದಾರೆ. ರಾಹುಲ್ ಗಾಂಧಿ ಮಾತಾಡಿದರೆ ತಿಳಿವಳಿಕೆ ಇಲ್ಲ ಅನ್ನೋ ಕನಿಕರವಿರುತ್ತದೆ. ಆದರೆ ಮಾಜಿ ಸಿದ್ದರಾಮಯ್ಯಗೆ ಕನಿಕರದ ಅಗತ್ಯವಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!