7.3 C
Munich
Saturday, April 1, 2023

Hydraulic Failure: Full Emergency Declared at Thiruvananthapuram Airport | Thiruvananthapuram Airport: ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ, ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಓದಲೇಬೇಕು

ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೈಡ್ರಾಲಿಕ್ ವೈಫಲ್ಯದಿಂದಾಗಿ ಕಲ್ಲಿಕೋಟೆಯಿಂದ ದಮ್ಮಮ್​ಗೆ ಹೋಗುತ್ತಿದ್ದ ವಿಮಾನವನ್ನು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು, ನಂತರ ಇಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ಹೇಳಲಾಗಿದೆ.

ಕಲ್ಲಿಕೋಟೆಯ ಕರಿಪುರ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.44ಕ್ಕೆ ವಿಮಾನ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನವನ್ನು ಲ್ಯಾಂಡ್ ಮಾಡಲು ಮೊದಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ವಿಮಾನದ ಇಂಧನವನ್ನು ಉರಿಸುವ ಮೂಲಕ ಅದರ ತೂಕವನ್ನು ತಗ್ಗಿಸುವ ಸಲುವಾಗಿ ಮತ್ತಷ್ಟು ಹಾರಾಟ ನಡೆಸಲಾಯಿತು ಎನ್ನಲಾಗಿದೆ. ಲ್ಯಾಂಡಿಂಗ್ ಮಾಡುವುದಕ್ಕೂ ಮುನ್ನ ಎರಡು ಗಂಟೆ ಅದು ಹಾರಾಟ ನಡೆಸುವ ಮೂಲಕ ಇಂಧನ ಮಟ್ಟವನ್ನು ಕಡಿಮೆ ಮಾಡಲಾಗಿತ್ತು.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಐಎಕ್ಸ್ 3 385 ವಿಮಾನದಲ್ಲಿ 182 ಪ್ರಯಾಣಿಕರಿದ್ದರು. ಕ್ಯಾಲಿಕಟ್‌ನಿಂದ ಟೇಕ್‌ಆಫ್ ಆಗುವಾಗ ವಿಮಾನದ ಹಿಂಭಾಗವು ರನ್‌ವೇಗೆ ಅಪ್ಪಳಿಸಿತು.
ಇದಾದ ಬಳಿಕ ತರಾತುರಿಯಲ್ಲಿ ಪೈಲಟ್‌ಗಳು ವಿಮಾನದ ಇಂಧನವನ್ನು ಅರಬ್ಬಿ ಸಮುದ್ರದಲ್ಲಿ ಎಸೆದು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!