11.3 C
Munich
Wednesday, March 22, 2023

I don’t think I will be allowed to speak says congress MP Rahul Gandhi | ಸಂಸತ್​​ನಲ್ಲಿ ಮಾತನಾಡಲು ಅವಕಾಶ ನೀಡುತ್ತಾರೆ ಎಂದು ನನಗನಿಸುವುದಿಲ್ಲ: ರಾಹುಲ್ ಗಾಂಧಿ

ಓದಲೇಬೇಕು

ನಾನು ಸಂಸದನಾಗಿರುವುದರಿಂದ ಸಂಸತ್ತಿನಲ್ಲಿ ಭಾಷಣ ಮಾಡುವುದು ನನ್ನ ಮೊದಲ ಜವಾಬ್ದಾರಿಯಾಗಿದೆ. ಸಂಸತ್ತಿನಲ್ಲಿ ಮಾತನಾಡುವ ಮೊದಲು ಈ ಬಗ್ಗೆ ಮಾಧ್ಯಮಗಳೊಂದಿಗೆ ವಿವರವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಸಂಸದನಾಗಿ ಸಂಸತ್ತು ನನ್ನ ವೇದಿಕೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ

ನಾಲ್ವರು ಕೇಂದ್ರ ಸಚಿವರು ತಮ್ಮ ವಿರುದ್ಧ ಎತ್ತಿರುವ ಆರೋಪಗಳಿಗೆ ಉತ್ತರ ನೀಡಿ ಮಾತನಾಡುವ ಭರವಸೆಯೊಂದಿಗೆ ನಾನು ಸಂಸತ್​​ಗೆ(Parliament) ಬಂದಿದ್ದೆ. ಬಂದ ಒಂದು ನಿಮಿಷದಲ್ಲಿ ಸಂಸತ್ತನ್ನು ಮುಂದೂಡಲಾಗಿದೆ ಎಂದು ರಾಹುಲ್ ಗಾಂಧಿ (Rahul Gandhi) ಗುರುವಾರ ಹೇಳಿದ್ದಾರೆ. ನಿಮ್ಮ  ದುರದೃಷ್ಟ, ನಾನು ಸಂಸತ್ತಿನ ಸದಸ್ಯನಾಗಿದ್ದೇನೆ ಮತ್ತು ನಾಲ್ವರು ಸಚಿವರು ಸಂಸತ್ತಿನಲ್ಲಿ ಆರೋಪ ಮಾಡಿರುವುದರಿಂದ, ಮಾತನಾಡಲು ಅವಕಾಶ ಪಡೆಯುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು. ಭಾರತೀಯ ಪ್ರಜಾಪ್ರಭುತ್ವ (Indian democracy) ಕಾರ್ಯನಿರ್ವಹಿಸುತ್ತಿದ್ದರೆ, ನಾನು ಸಂಸತ್ತಿನಲ್ಲಿ ಮಾತನಾಡಲು ಸಾಧ್ಯವಾಗುತ್ತದೆ. ನೀವು ನೋಡುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ಪರೀಕ್ಷೆಯಾಗಿದೆ. ಬಿಜೆಪಿಯ ನಾಲ್ವರು ನಾಯಕರು ಸಂಸತ್ ಸದಸ್ಯನ ಬಗ್ಗೆ ಆರೋಪ ಮಾಡಿದ ನಂತರ, ಆ ನಾಲ್ವರು ಸಚಿವರಿಗೆ ನೀಡಿದ ಜಾಗವನ್ನೇ ಸಂಸತ್ ಸದಸ್ಯರಿಗೂ ನೀಡಲಿದ್ದಾರಾ ಅಥವಾ ಮಾತನಾಡಬೇಡಿ ಎಂದು ಹೇಳುತ್ತಾರಾ ನೋಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ನಾನು ಇಂದು ಸಂಸತ್ತಿಗೆ ಹೋಗಿದ್ದೆ. ನಾಲ್ವರು ಸಚಿವರು ಮಾಡಿರುವ ಆರೋಪಗಳ ವಿರುದ್ಧ ಸಂಸತ್ತಿನಲ್ಲಿ ಮಾತನಾಡಲು ನಾನು ಬಯಸುತ್ತೇನೆ ಎಂದು ಸ್ಪೀಕರ್​​ಗೆ ಹೇಳಿದೆ. ಅಲ್ಲಿ ಯಾವುದೇ ಸ್ಪಷ್ಟ ಮಾಹಿತಿ ನನಗೆ ಸಿಕ್ಕಿಲ್ಲ. ಅಲ್ಲಿ ನನಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೂ ನಾನು ನಾಳೆ ನನಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ, ಇಂದು ನಾನು ಆಗಮಿಸಿದ 1 ನಿಮಿಷದಲ್ಲಿ ಸದನವನ್ನು ಮುಂದೂಡಲಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿಯವರು ಅದಾನಿ ಕುರಿತು ಮಾಡಿದ ಸಂಸತ್ತಿನ ಭಾಷಣದಿಂದ ಇಡೀ ವಿಷಯ ಪ್ರಾರಂಭವಾಗಿತ್ತು.”ಇಡೀ ಪ್ರಯತ್ನವು ಅದಾನಿ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯುವುದು. ಅವರು ಸಂಸತ್ತಿನಲ್ಲಿ ಮಾತನಾಡಲು ನನಗೆ ಅವಕಾಶ ನೀಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಮೇಜಿನ ಮೇಲಿರುವ ಪ್ರಮುಖ ವಿಷಯಗಳು ಒಂದೇ ಆಗಿರುತ್ತವೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವೇನು? ಏಕೆ? ರಕ್ಷಣಾ ಗುತ್ತಿಗೆಯನ್ನು ಅದಾನಿಗೆ ನೀಡಲಾಗುತ್ತಿದೆಯೇ? ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಅದಾನಿ ಪರ ಮಾತನಾಡಿದ್ದು ಯಾರು? ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ, ಎಸ್‌ಬಿಐ ಅಧ್ಯಕ್ಷ ಮತ್ತು ಅದಾನಿ ಸಭೆ ಏಕೆ ನಡೆಯಿತು? ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಇದನ್ನೂ ಓದಿ: Rahul Gandhi: ನಾನು ಲಂಡನ್​​ನಲ್ಲಿ ಭಾರತದ ವಿರುದ್ಧ ಏನನ್ನೂ ಹೇಳಿಲ್ಲ: ರಾಹುಲ್ ಗಾಂಧಿ

ನಾನು ಸಂಸದನಾಗಿರುವುದರಿಂದ ಸಂಸತ್ತಿನಲ್ಲಿ ಭಾಷಣ ಮಾಡುವುದು ನನ್ನ ಮೊದಲ ಜವಾಬ್ದಾರಿಯಾಗಿದೆ. ಸಂಸತ್ತಿನಲ್ಲಿ ಮಾತನಾಡುವ ಮೊದಲು ಈ ಬಗ್ಗೆ ಮಾಧ್ಯಮಗಳೊಂದಿಗೆ ವಿವರವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಸಂಸದನಾಗಿ ಸಂಸತ್ತು ನನ್ನ ವೇದಿಕೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದರು ಪಟ್ಟು ಹಿಡಿದಿದ್ದಾರೆ. ರಾಹುಲ್ ವಿದೇಶಿ ನೆಲದಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು ಭಾರತದ ವಿರುದ್ಧ ಏನನ್ನೂ ಹೇಳಿಲ್ಲ ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!