1.7 C
Munich
Friday, March 3, 2023

ICC T20 Womens World Cup Here is the photos of India Women vs Pakistan Women Match Kannada News | INDW vs PAKW: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ರೋಚಕ ಕ್ಷಣಗಳು ಇಲ್ಲಿದೆ ನೋಡಿ

ಓದಲೇಬೇಕು

Vinay Bhat |

Updated on: Feb 13, 2023 | 8:57 AM

India Women vs Pakistan Women, T20 World Cup: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಹರ್ಮನ್​ಪ್ರೀತ್ ಕೌರ್ ನಾಯತ್ವದ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಕೇಪ್​ಟೌನ್​ನ ನ್ಯೂಲೆಂಡ್ಸ್​ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಮಹಿಳೆಯರು 7 ವಿಕೆಟ್​ಗಳಿಂದ ಗೆದ್ದು ಬೀಗಿದರು.

Feb 13, 2023 | 8:57 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಹರ್ಮನ್​ಪ್ರೀತ್ ಕೌರ್ ನಾಯತ್ವದ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಕೇಪ್​ಟೌನ್​ನ ನ್ಯೂಲೆಂಡ್ಸ್​ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಮಹಿಳೆಯರು 7 ವಿಕೆಟ್​ಗಳಿಂದ ಗೆದ್ದು ಬೀಗಿದರು.

ಜೆಮಿಯಾ ರೋಡ್ರಿಗಸ್ (Jemimah Rodrigues) ಅವರ ಆಕರ್ಷಕ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಮ್ಯಾಚ್ ವಿನ್ನಿಂಗ್ ಆಟವಾಡಿದ ಇವರು ಕೇವಲ 38 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಜವೆರಿಯಾ ಖಾನ್ (8) ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 42 ಆಗುವ ಹೊತ್ತಿಗೆ 12 ರನ್ ಗಳಿಸಿದ್ದ ಮುನೀಬಾ ಅಲಿ ಔಟಾದರೆ, ನಿದಾ ದರ್ ಬಂದ ಬೆನ್ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದರು. ಅಮೀನ್ ಆಟ 11 ರನ್​ಗೆ ಅಂತ್ಯವಾಯಿತು.

ಹೀಗೆ ಪಾಕ್ 68 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ನಾಯಕಿ ಬಿಸ್ಮಾ ಮರೂಫ್ ಜೊತೆಯಾದ ಆಯೇಶಾ ನಸೀಂ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕೊನೆಯ ವರೆಗೂ ಆಡಿದ ಈ ಜೋಡಿ ಭಾರತೀಯ ಬೌಲರ್​ಗಳನ್ನು ಕಾಡಿದರು. ಮರೂಫ್ 55 ಎಸೆತಗಳಲ್ಲಿ 7 ಫೋರ್​ನೊಂದಿಗೆ ಅಜೇಯ 68 ರನ್ ಚಚ್ಚಿದರೆ, ನಸೀಂ ಕೇವಲ 25 ಎಸೆತಗಳಲ್ಲಿ 2 ಫೊರ್, ಸಿಕ್ಸರ್​ನೊಂದಿಗೆ 43 ರನ್ ಬಾರಿಸಿ ಅಜೇಯರಾಗಿ ಉಳಿದರು.

ಪಾಕಿಸ್ತಾನ ಮಹಿಳಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಭಾರತ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ ಹಾಗೂ ಪೂಜಾ ತಲಾ 1 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಶೆಫಾಲಿ ವರ್ಮಾ ಜೊತೆಗೂಡಿ ಯಸ್ತಿಕಾ ಭಾಟಿಯ (17) 38 ರನ್​ಗಳ ಕೊಡುಗೆ ನೀಡಿದರು. ಶಫಾಲಿ 33 ರನ್ ಗಳಿಸಿದರು. ನಾಯಕಿ ಹರ್ಮನ್​ಪ್ರೀತ್ ಕೌರ್ 16 ರನ್ ಗಳಿಸಿದರು. ಒಂದು ಹಂತದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಭರ್ಜರಿ ಅಟವಾಡಿದ ಜೆಮಿಯಾ ಸೋಲಿನ ಅಪಾಯದಿಂದ ತಂಡವನ್ನು ಪಾರು ಮಾಡಿದರು. ಇವರಿಗೆ ರಿಚ್ಚಾ ಘೋಷ್ ಉತ್ತಮ ಸಾಥ್ ನೀಡಿದರು.

ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಯಾ ಹಾಗೂ ರಿಚ್ಚಾ ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವು ತಂದಿಟ್ಟರು. ಭಾರತ 19 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿ 7 ವಿಕೆಟ್​ಗಳಿಂದ ಗೆದ್ದು ಬೀಗಿತು ಜೆಮಿಯಾ 38 ಎಸೆತಗಳಲ್ಲಿ 8 ಫೋರ್​ನೊಂದಿಗೆ ಅಜೇಯ 53 ಹಾಗೂ ರಿಚ್ಚಾ 20 ಎಸೆತಗಳಲ್ಲಿ 5 ಫೋರ್​​ನೊಂದಿಗೆ ಅಜೇಯ 31 ರನ್ ಸಿಡಿಸಿದರು.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!