ICC T20I Rankings: ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಕೂಡ 692 ಪಾಯಿಂಟ್ಗಳನ್ನು ಹೊಂದಿದ್ದಾರೆ. ಅಂದರೆ ಇಲ್ಲಿ ಟಾಪ್-4 ಆಟಗಾರರ ನಡುವೆ ಕೆಲವೇ ಕೆಲವು ಅಂಕಗಳ ವ್ಯತ್ಯಾಸವಿದೆ.
Feb 23, 2023 | 7:23 PM














ತಾಜಾ ಸುದ್ದಿ
TV9kannada Web Team | Edited By: Zahir PY
Updated on: Feb 23, 2023 | 7:23 PM
Feb 23, 2023 | 7:23 PM
ಐಸಿಸಿ ನೂತನ ಟಿ20 ಬೌಲರ್ಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ್ಯಾಂಕಿಂಗ್ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗೆಯೇ ನಂಬರ್ 1 ಸ್ಥಾನವನ್ನು ಶ್ರೀಲಂಕಾ ಸ್ಪಿನ್ನರ್ ತಮ್ಮದಾಗಿಸಿಕೊಂಡಿದ್ದಾರೆ.
ಲಂಕಾ ಸ್ಪಿನ್ನರ್ ವನಿಂದು ಹಸರಂಗ ಈ ಬಾರಿ ಅಗ್ರಸ್ಥಾನ ಅಲಂಕರಿಸಿದ್ದು, ಒಟ್ಟು 695 ಅಂಕಗಳನ್ನು ಹೊಂದಿದ್ದಾರೆ. ಆದರೆ ದ್ವಿತೀಯ ಸ್ಥಾನದಲ್ಲಿರುವ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ನಡುವೆ ಅಂಕಗಳ ವ್ಯತ್ಯಾಸ ಕೇವಲ 1 ಪಾಯಿಂಟ್ ಮಾತ್ರ.
ಹಾಗೆಯೇ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಕೂಡ 692 ಪಾಯಿಂಟ್ಗಳನ್ನು ಹೊಂದಿದ್ದಾರೆ. ಅಂದರೆ ಇಲ್ಲಿ ಟಾಪ್-4 ಆಟಗಾರರ ನಡುವೆ ಕೆಲವೇ ಕೆಲವು ಅಂಕಗಳ ವ್ಯತ್ಯಾಸವಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ಈ ಆಟಗಾರರ ನಡುವೆ ನಂಬರ್ 1 ಸ್ಥಾನಕ್ಕಾಗಿ ಪೈಪೋಟಿ ಕಂಡು ಬರಲಿದೆ.
ಇಲ್ಲಿ ಮತ್ತೊಂದು ಅಚ್ಚರಿ ಎಂದರೆ ಟಿ20 ಕ್ರಿಕೆಟ್ನ ನಂಬರ್ 1 ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾದ ಯಾವುದೇ ಬೌಲರ್ ಟಾಪ್-10 ನಲ್ಲಿ ಕಾಣಿಸಿಕೊಂಡಿಲ್ಲ ಎಂಬುದು. ಇದಾಗ್ಯೂ 635 ಅಂಕಗಳೊಂದಿಗೆ 13ನೇ ಸ್ಥಾನ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಟಾಪ್-20 ಯಲ್ಲಿರುವುದು ಸಮಾಧಾನಕರ. ಐಸಿಸಿ ಪ್ರಕಟಿಸಿರುವ ಟಿ20 ಬೌಲರ್ಗಳ ಹೊಸ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.
10- ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 654 ಅಂಕಗಳು
9- ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್)- 657 ಅಂಕಗಳು
8- ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)- 659 ಅಂಕಗಳು
7- ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 678 ಅಂಕಗಳು
6- ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 681 ಅಂಕಗಳು
5- ಸ್ಯಾಮ್ ಕರನ್ (ಇಂಗ್ಲೆಂಡ್)- 688 ಅಂಕಗಳು
4- ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 690 ಅಂಕಗಳು
3- ಆದಿಲ್ ರಶೀದ್ (ಇಂಗ್ಲೆಂಡ್)- 692 ಅಂಕಗಳು
2- ರಶೀದ್ ಖಾನ್ (ಅಫ್ಘಾನಿಸ್ತಾನ್)- 694 ಅಂಕಗಳು
1- ವನಿಂದು ಹಸರಂಗ (ಶ್ರೀಲಂಕಾ)- 695 ಅಂಕಗಳು