ICC Test Rankings: ಅ್ಯಂಡರ್ಸನ್ ಹಾಗೂ ಅಶ್ವಿನ್ ಅಂಕಗಳ ವಿಷಯದಲ್ಲಿ ಸಮಬಲ ಹೊಂದಿದ್ದರೂ, ಕಳೆದ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.
Mar 08, 2023 | 9:25 PM









ತಾಜಾ ಸುದ್ದಿ
TV9 Digital Desk | Edited By: Zahir Yusuf
Updated on: Mar 08, 2023 | 9:25 PM
Mar 08, 2023 | 9:25 PM
ICC Test Rankings: ಐಸಿಸಿ ನೂತನ ಟೆಸ್ಟ್ ಬೌಲರ್ಗಳ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆದರೆ ಕಳೆದ ಬಾರಿಗಿಂತ 6 ಅಂಕಗಳನ್ನು ಕಳೆದುಕೊಂಡಿದ್ದಾರೆ.
ಅಂದರೆ ಕಳೆದ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಅಶ್ವಿನ್ ಒಟ್ಟು 865 ಪಾಯಿಂಟ್ ಹೊಂದಿದ್ದರು. ಇದೀಗ 6 ಅಂಕಗಳನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾ ಸ್ಪಿನ್ನರ್ ಒಟ್ಟು 859 ಪಾಯಿಂಟ್ ಹೊಂದಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಅವರು ಕೂಡ 859 ಅಂಕಗಳನ್ನು ಹೊಂದಿದ್ದು, ಹೀಗಾಗಿ ಇಬ್ಬರ ನಡುವೆ ಅಗ್ರಸ್ಥಾನಕ್ಕೆ ನೇರ ಪೈಪೋಟಿ ಏರ್ಪಟ್ಟಿದೆ.
ಸದ್ಯ ಅ್ಯಂಡರ್ಸನ್ ಹಾಗೂ ಅಶ್ವಿನ್ ಅಂಕಗಳ ವಿಷಯದಲ್ಲಿ ಸಮಬಲ ಹೊಂದಿದ್ದರೂ, ಕಳೆದ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಅ್ಯಂಡರ್ಸನ್, ಅಶ್ವಿನ್ಗಿಂತ ಉತ್ತಮ ಪ್ರದರ್ಶನ ನೀಡಿದರೆ ಮೊದಲ ಸ್ಥಾನಕ್ಕೇರಬಹುದು.
ಹೀಗಾಗಿ ಅಹಮದಾಬಾದ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಶ್ವಿನ್ ತಮ್ಮ ರ‍್ಯಾಂಕಿಂಗ್ ಪಾಯಿಂಟ್ ಅನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್ಗಳ ಟಾಪ್-5 ಪಟ್ಟಿ ಈ ಕೆಳಗಿನಂತಿದೆ.
1- ರವಿಚಂದ್ರನ್ ಅಶ್ವಿನ್ (ಭಾರತ)- 859 ಅಂಕಗಳು
2- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 859 ಅಂಕಗಳು
3- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 849 ಅಂಕಗಳು
4- ಕಗಿಸೊ ರಬಾಡ (ಸೌತ್ ಆಫ್ರಿಕಾ)- 807 ಅಂಕಗಳು
5- ಶಾಹೀನ್ ಅಫ್ರಿದಿ (ಪಾಕಿಸ್ತಾನ್)- 787 ಅಂಕಗಳು