3.9 C
Munich
Wednesday, March 29, 2023

Imran Khan video message Says If I Go To Jail or They Kill me | Imran Khan: ನಾನು ಜೈಲಿಗೆ ಹೋಗಬಹುದು ಅಥವಾ ಕೊಲೆಯಾಗಬಹುದು ನೀವು ನಿಮ್ಮ ಹೋರಾಟ ಬಿಡಬೇಡಿ: ಇಮ್ರಾನ್ ಖಾನ್

ಓದಲೇಬೇಕು

ನನ್ನನ್ನು ಜೈಲಿಗೆ ಹಾಕಿದರೆ ಅಥವಾ ಹತ್ಯೆ ಮಾಡಿದರೆ, ನೀವು ಇಮ್ರಾನ್ ಖಾನ್ ಇಲ್ಲದೆಯೂ ಹೋರಾಟವನ್ನು ಮುಂದುವರೆಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.

ಇಮ್ರಾನ್ ಖಾನ್

ನನ್ನನ್ನು ಜೈಲಿಗೆ ಹಾಕಿದರೆ ಅಥವಾ ಹತ್ಯೆ ಮಾಡಿದರೆ, ನೀವು ಇಮ್ರಾನ್ ಖಾನ್ ಇಲ್ಲದೆಯೂ ಹೋರಾಟವನ್ನು ಮುಂದುವರೆಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸದ ಬಳಿ ನೆರೆದಿರುವ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇಮ್ರಾನ್ ಖಾನ್ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಇಮ್ರಾನ್ ಖಾನ್ ನಿವಾಸದ ಎದುರು ಬೆಂಬಲಿಗರು ಸೇರಿದ್ದರು. ಪಾಕ್ ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ್ದ ಉಡುಗೊರೆಗಳನ್ನು ಮಾರಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ನನ್ನ ಬಂಧನದ ನಂತರ ದೇಶ ನಿದ್ದೆ ಮಾಡಲಿದೆ ಎಂದು ಅವರು ಭಾವಿಸಿದ್ದಾರೆ, ಅವರು ಭಾವಿಸಿರುವುದು ತಪ್ಪು ಎಂದು ನೀವು ಸಾಬೀತು ಮಾಡಿ ಎಂದು ಖಾನ್ ವಿಡಿಯೋ ಸಂದೇಶದಲ್ಲಿ ಕರೆ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಬಂದ ಪೊಲೀಸರೊಂದಿಗೆ ಅವರ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಕಳೆದ 14 ಗಂಟೆಗಳಿಂದ ಇಮ್ರಾನ್ ಖಾನ್ ಮನೆಯ ಹೊರಗೆ ಗಲಾಟೆ ನಡೆಯುತ್ತಿದೆ.
ಪಾಕಿಸ್ತಾನದಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿಯ ನಡುವೆ, ಇಮ್ರಾನ್ ಸೇನೆಯ ಮೇಲೆ ಕೋಪಗೊಂಡರು.

ಮತ್ತಷ್ಟು ಓದಿ: Non Bailable Warrant: ಇಮ್ರಾನ್ ಖಾನ್ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಪಾಕ್ ಕೋರ್ಟ್

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಮನೆಯ ಹೊರಗೆ ಅಶ್ರುವಾಯು ಶೆಲ್‌ಗಳನ್ನು ತೋರಿಸಿದ್ದಾರೆ. ಪೊಲೀಸರು ಮನೆಯೊಳಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

ಸೇನೆಯಿಲ್ಲದೆ ಒಂದು ದಿನವೂ ಸರ್ಕಾರ ಉಳಿಯುವುದಿಲ್ಲ
ಸೇನೆ ತನ್ನ ಕೈ ಹಿಂತೆಗೆದುಕೊಂಡರೆ ಶಹಬಾಸ್ ಸರ್ಕಾರ ಒಂದು ದಿನವೂ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ನಿಮ್ಮನ್ನು ಜೈಲಿಗೆ ಕಳುಹಿಸುವುದರಿಂದ ಸೈನ್ಯಕ್ಕೆ ಏನು ಪ್ರಯೋಜನ ಎಂದು ಕೇಳಿದಾಗ? ನನಗೆ ಗೊತ್ತಿಲ್ಲ, ಈ ಸೇನಾ ಮುಖ್ಯಸ್ಥರು ಏಕೆ ಬೆಂಬಲ ನೀಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಇದರಿಂದ ಸೇನೆಗೆ ತೊಂದರೆಯಾಗುತ್ತಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲವೇ? ಬಹುಶಃ ನವಾಜ್ ಷರೀಫ್ ಏನಾದರೂ ಭರವಸೆ ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ತೋಷಖಾನಾ ಭ್ರಷ್ಟಾಚಾರ ಪ್ರಕರಣ
ಇಮ್ರಾನ್ ಖಾನ್ ತೋಷಖಾನಾ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ, ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿದೇಶಿ ಗಣ್ಯರಿಂದ ಪಡೆದುಕೊಂಡಿರುವ ಉಡುಗೊರೆಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಚುನಾವಣಾ ಆಯೋಗ ಘೋಷಿಸಿದೆ. ಇಮ್ರಾನ್ ಖಾನ್ ವಿರುದ್ಧ ಸಮನ್ಸ್ ಹೊರಡಿಸಲಾಗಿದ್ದು, ಬಂಧನ ಭೀತಿಯಲ್ಲಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!