15.6 C
Munich
Wednesday, March 22, 2023

Ind vs aus 2nd odi Steve Smith take stunning catch of Hardik Pandya in Vizag ODI | IND vs AUS: ಅಬ್ಬಾ.. ಎಂಥಾ ಕ್ಯಾಚ್.! ಸ್ಮಿತ್ ಚಿರತೆ ಜಿಗತಕ್ಕೆ ಪೆವಿಲಿಯನ್ ಸೇರಿಕೊಂಡ ಪಾಂಡ್ಯ; ವಿಡಿಯೋ

ಓದಲೇಬೇಕು

IND vs AUS: ಒಟ್ಟಾರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ 4 ಆಟಗಾರರು ಶೂನ್ಯಕ್ಕೆ ಔಟಾದರು. ಇದರಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶುಭ್​ಮನ್ ಮತ್ತು ಸೂರ್ಯಕುಮಾರ್​ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

ಸ್ಟೀವ್ ಸ್ಮಿತ್

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೇವಲ 117 ರನ್​ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಎದುರು ಟೀಂ ಇಂಡಿಯಾದ (Team India) ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಮಂಕಾದರು. ಹೀಗಾಗಿ ಟೀಂ ಇಂಡಿಯಾ ಪರ ಕೊಹ್ಲಿಯನ್ನು ಬಿಟ್ಟರೆ ಮತ್ತ್ಯಾವ ಆಟಗಾರನೂ 30 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಕ್ಯಾಚ್​ಗಳನ್ನು ಕೈಚೆಲ್ಲಿ ಪಂದ್ಯವನ್ನು ಸೋತಿದ್ದ ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿತು. ಅದರಲ್ಲೂ ಮೊದಲ ಏಕದಿನ ಪಂದ್ಯದಲ್ಲಿ ಎರಡೆರಡು ಕ್ಯಾಚ್ ಬಿಟ್ಟಿದ್ದ ನಾಯಕ ಸ್ಮಿತ್ (Steve Smith), ಈ ಪಂದ್ಯದಲ್ಲಿ ಚಿರತೆಯಂತೆ ಎಗರಿ ಹಿಡಿದ ಕ್ಯಾಚ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅದ್ಭುತ ಕ್ಯಾಚ್ ಹಿಡಿದ ಸ್ಮಿತ್

ಒಟ್ಟಾರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ 4 ಆಟಗಾರರು ಶೂನ್ಯಕ್ಕೆ ಔಟಾದರು. ಇದರಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶುಭ್​ಮನ್ ಮತ್ತು ಸೂರ್ಯಕುಮಾರ್​ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಇನ್ನು ಬೌಲಿಂಗ್​ನಲ್ಲಿ ಶಮಿ, ಸಿರಾಜ್​ ಕೂಡ ಸೊನ್ನೆ ಸುತ್ತಿದರು. ಇವರನ್ನು ಹೊರತುಪಡಿಸಿ ಉಳಿದ ಆಟಗಾರರು ಖಾತೆ ತೆರೆದರಾದರೂ, ಎರಡಂಕಿ ಮುಟ್ಟಲು ಕೆಲವರಿಗೆ ಸಾಧ್ಯವಾಗಲಿಲ್ಲ. ಅಂತಹವರಲ್ಲಿ ಮೊದಲ ಏಕದಿನ ಪಂದ್ಯದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದಾರೆ. ಕೇವಲ ರನ್​ಗಳಿಗೆ ಸುಸ್ತಾದ ಪಾಂಡ್ಯ, ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್‌ನಿಂದ ಔಟಾದರು. ಸೀನ್ ಅಬಾಟ್ ಎಸೆತವನ್ನು ಥರ್ಡ್ ಮ್ಯಾನ್ ಬೌಂಡರಿಗೆ ಕಳುಹಿಸಲು ಪಾಂಡ್ಯ ಕಟ್ ಮಾಡಿದರು. ಆದರೆ ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್ ಜಿಗಿಯುವ ಮೂಲಕ ಅಮೋಘ ಕ್ಯಾಚ್ ಪಡೆದರು.

IND vs AUS: ಕೇವಲ 55 ನಿಮಿಷ, 66 ಎಸೆತಗಳಲ್ಲೇ ಮುಗಿದ ಪಂದ್ಯ! ಭಾರತಕ್ಕೆ 10 ವಿಕೆಟ್ ಸೋಲು

ಬೆಚ್ಚಿ ಬೆರಗಾದ ಕೊಹ್ಲಿ- ರೋಹಿತ್

ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಸ್ಮಿತ್ ಹಿಡಿದ ಕ್ಯಾಚ್‌ ನೋಡಿ ಬೆಚ್ಚಿ ಬೆರಗಾದರು. ಸ್ಟೀವ್ ಸ್ಮಿತ್ ಹಿಡಿದ ಕ್ಯಾಚ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆಸೀಸ್ ಇನ್ನಿಂಗ್ಸ್ ಹೀಗಿತ್ತು

ಇನ್ನು ಈ ಸಾಧಾರಣ ಗುರಿಯೊಂದಿಗೆ ಮೈದಾನಕ್ಕಿಳಿದ ಆಸೀಸ್ ದಾಂಡಿಗರು ಆರಂಭದಿಂದಲೂ ಟೀಂ ಇಂಡಿಯಾ ವೇಗಿಗಳ ಮೇಲೆ ಮುರಿದುಬಿದ್ದರು.  ಹೀಗಾಗಿ ಕೇವಲ 55 ನಿಮಿಷದೊಳಗೆ ಪಂದ್ಯ ಕೊನೆಗೊಂಡಿತು. ಆಸೀಸ್ ಆರಂಭಿಕರ ಆರ್ಭಟಕ್ಕೆ ಬ್ರೇಕ್ ಹಾಕಲು ಟೀಂ ಇಂಡಿಯಾ ನಾಯಕ ಎಷ್ಟೆಲ್ಲ ಪ್ರಯತ್ನ ಪಟ್ಟರು ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾರ್ಷ್​, 6 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 66 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ 10 ಬೌಂಡರಿ ಸಹಿತ 51 ರನ್ ಬಾರಿಸಿ ಅಜೇಯರಾಗಿ ಪೆವಿಲಿಯನ್​ಗೆ ಮರಳಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!