IND vs AUS: ಮೊದಲ ದಿನದಾಟದಲ್ಲಿ ಜಡೇಜಾ ದಾಳಿಗೆ ನಲುಗಿದ್ದ ಆಸೀಸ್ ಪಡೆ, 2ನೇ ದಿನದಾಟದಲ್ಲಿ ವೇಗಿ ಉಮೇಶ್ ಯಾದವ್ ಹಾಗೂ ಅಶ್ವಿನ್ ಬೌಲಿಂಗ್ ಮುಂದೆ ಮಂಡಿಯೂರಿತು. ಹೀಗಾಗಿ ಆಸೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಅನ್ನು 197 ರನ್ಗಳಿಗೆ ಮುಗಿಸಿದೆ.
ಭಾರತ- ಆಸ್ಟ್ರೇಲಿಯಾ
ಇಂದೋರ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ನಲ್ಲಿ ಮೊದಲ ದಿನ ಟೀಂ ಇಂಡಿಯಾವನ್ನು 109 ರನ್ಗಳಿಗೆ ಕಟ್ಟಿಹಾಕಿ, ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ (India Vs Australia) ತಂಡ 2ನೇ ದಿನದಾಟದಲ್ಲಿ ಮಂಕಾಗಿದೆ. ಮೊದಲ ದಿನದಾಟದಲ್ಲಿ ಜಡೇಜಾ (Ravindra Jadeja) ದಾಳಿಗೆ ನಲುಗಿದ್ದ ಆಸೀಸ್ ಪಡೆ, 2ನೇ ದಿನದಾಟದಲ್ಲಿ ವೇಗಿ ಉಮೇಶ್ ಯಾದವ್ (Umesh Yadav) ಹಾಗೂ ಅಶ್ವಿನ್ (Ashwin) ಬೌಲಿಂಗ್ ಮುಂದೆ ಮಂಡಿಯೂರಿತು. ಹೀಗಾಗಿ ಆಸೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ಅನ್ನು 197 ರನ್ಗಳಿಗೆ ಮುಗಿಸಿದೆ. ಈ ಮೂಲಕ ಭಾರತ ವಿರುದ್ಧ 88 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯದ ಮೊದಲ ಇನ್ನಿಂಗ್ಸ್‌ನ ದೊಡ್ಡ ವಿಷಯವೆಂದರೆ ಎರಡನೇ ದಿನ ಕೇವಲ 11 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೊದಲ ದಿನ ಆಸ್ಟ್ರೇಲಿಯಾ 4 ವಿಕೆಟ್‌ಗೆ 156 ರನ್ ಗಳಿಸಿತ್ತು. ಎರಡನೇ ದಿನ ಹ್ಯಾಂಡ್‌ಸ್ಕಾಂಬ್ ಮತ್ತು ಕ್ಯಾಮೆರಾನ್ ಗ್ರೀನ್ ಜೋಡಿ ಇಲ್ಲಿಂದ ಇನ್ನಿಂಗ್ಸ್ ಮುಂದುವರೆಸಿತು.ಆದರೆ ಈ ಜೋಡಿಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಾಗಲಿಲ್ಲ. ಅಶ್ವಿನ್ ಬೌಲಿಂಗ್ನಲ್ಲಿ ಮೊದಲು ಹ್ಯಾಂಡ್ಸ್‌ಕಾಂಬ್ ಬಲಿಯಾದರೆ, ನಂತರ ಕ್ಯಾಮೆರಾನ್ ಗ್ರೀನ್ ಉಮೇಶ್ ಯಾದವ್ ವೇಗಕ್ಕೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಆಸೀಸ್ ಬ್ಯಾಟ್ಸ್ಮನ್ಗಳು ಪಿಚ್ ಅರ್ಥ ಮಾಡಿಕೊಳ್ಳುವ ಮೊದಲೇ ಪೆವಿಲಿಯನ್ ಕಡೆ ನಡೆಯಲಾರಂಭಿಸಿದರು.
Lionel Messi: ಒಂದೇ ಬಾರಿಗೆ ಬರೋಬ್ಬರಿ 35 ಚಿನ್ನದ ಐಫೋನ್‌ಗಳನ್ನು ಖರೀದಿಸಿದ ಮೆಸ್ಸಿ! ಕಾರಣವೇನು ಗೊತ್ತಾ?
ಎರಡನೇ ದಿನ ಅಶ್ವಿನ್-ಉಮೇಶ್ ಮ್ಯಾಜಿಕ್
ಮೊದಲ ದಿನ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಒಬ್ಬರೇ 4 ವಿಕೆಟ್ ಉರುಳಿಸಿದರೆ, ಎರಡನೇ ದಿನ ಅಶ್ವಿನ್ ಹಾಗೂ ಉಮೇಶ್ ಯಾದವ್ ಕಾಂಗರೂಗಳ ಕೋಟೆಗೆ ಸೆಡ್ಡು ಹೊಡೆಯುವ ಕೆಲಸ ಮಾಡಿದರು. ಇಬ್ಬರೂ ಒಟ್ಟಿಗೆ ತಲಾ 3 ವಿಕೆಟ್ ಹಂಚಿಕೊಂಡರು. ಮೊದಲು ಅಶ್ವಿನ್ ಅವರು ಪೀಟರ್ ಹ್ಯಾಂಡ್ಸ್‌ಕಾಂಬ್‌ಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಈ ವಿಕೆಟ್ ಭೇಟೆ ಆರಂಭಿಸಿದರು. ನಂತರ ಉಮೇಶ್ ಯಾದವ್ ಕ್ಯಾಮರೂನ್ ಗ್ರೀನ್ ಅವರನ್ನು ಎಲ್ಬಿಡಬ್ಲ್ಯು ಮಾಡಿದರು.
Innings Break!
6 wickets fell for 11 runs in the morning session as Australia are all out for 197, with a lead of 88 runs.
Scorecard – https://t.co/t0IGbs2qyj #INDvAUS @mastercardindia pic.twitter.com/gMSWusE6Vn
— BCCI (@BCCI) March 2, 2023
ನಂತರ ಬಂದ ಮಿಚೆಲ್ ಸ್ಟಾರ್ಕ್ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಬೌಲ್ಡ್ ಆದರೆ, ಅಶ್ವಿನ್ , ಅಲೆಕ್ಸ್ ಕ್ಯಾರಿ ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮತ್ತೊಂದು ಹೊಡೆತ ನೀಡಿದರು. ಇದಾದ ಬಳಿಕ ಉಮೇಶ್ ಯಾದವ್ ಎಸೆತದಲ್ಲಿ ಟಾಡ್ ಮರ್ಫಿ ಕ್ಲೀನ್ ಬೌಲ್ಡ್ ಆದರೆ, ಅಶ್ವಿನ್ ಎಸೆತದಲ್ಲಿ ನಾಥನ್ ಲಿಯಾನ್ ಔಟಾದರು. ಈ ಮೂಲಕ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ಗೆ ಅಂತ್ಯ ಹಾಡಲಾಯಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ