-1.3 C
Munich
Wednesday, March 1, 2023

IND vs AUS 3rd Test Australia will continue its practice in Delhi at the Arun Jaitely Stadium Kannada News | IND vs AUS Test: ಡೆಲ್ಲಿ ಬಿಟ್ಟು ತೆರಳದ ಆಸ್ಟ್ರೇಲಿಯಾ ತಂಡ: 2ನೇ ಟೆಸ್ಟ್ ನಡೆದ ಮೈದಾನದಲ್ಲೇ ಅಭ್ಯಾಸ

ಓದಲೇಬೇಕು

Vinay Bhat |

Updated on: Feb 25, 2023 | 9:25 AM

India vs Australia 3rd Test: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್​ನಲ್ಲಿ ಶುರುವಾಗಲಿದೆ. ಆದರೆ, ಆಸೀಸ್ ತಂಡದ ಆಟಗಾರರು ಇನ್ನೂ ಡೆಲ್ಲಿಯಲ್ಲೇ ನೆಲೆಸಿದ್ದಾರೆ. ದ್ವಿತೀಯ ಟೆಸ್ಟ್ ನಡೆದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

Feb 25, 2023 | 9:25 AM

ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡಕ್ಕೆ ಇದುವರೆಗೆ ಒಂದೂ ಶುಭಸುದ್ದಿ ಸಿಕ್ಕಿಲ್ಲ. ನಾಗ್ಪುರ ಹಾಗೂ ದೆಹಲಿಯಲ್ಲಿ ನಡೆದ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗರೂ ಪಡೆ ಟ್ರೋಫಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನೇನಿದ್ದರು ಕನಿಷ್ಠ ಸಮಬಲಕ್ಕೆ ಹೋರಾಟ ನಡೆಸಬೇಕಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಬೇಕು ಎಂದರೆ ಉಳಿದಿರುವ ಎರಡೂ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಕೂಡ ಶುರು ಮಾಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್​ನಲ್ಲಿ ಶುರುವಾಗಲಿದೆ. ಆದರೆ, ಆಸೀಸ್ ತಂಡದ ಆಟಗಾರರು ಇನ್ನೂ ಡೆಲ್ಲಿಯಲ್ಲೇ ನೆಲೆಸಿದ್ದಾರೆ. ದ್ವಿತೀಯ ಟೆಸ್ಟ್ ನಡೆದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ನಾಲ್ಕರಿಂದ ಐದು ಗಂಟೆಗಳ ಕಾಲ ಆಸೀಸ್ ಪ್ಲೇಯರ್ಸ್ ನೆಟ್​ನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದು ಭಾನುವಾರ ಇಂದೋರ್​ಗೆ ಹೊರಡಲಿದ್ದಾರೆ.

ಇತ್ತ ಟೀಮ್ ಇಂಡಿಯಾ ಪ್ಲೇಯರ್ಸ್ ಎರಡನೇ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಮನೆಗೆ ತೆರಳಿದ್ದರು. ಇವರು ಇಂದು ಇಂದೋರ್​​ಗೆ ತಲುಪಿ ನಾಳೆಯಿಂದ ಅಭ್ಯಾಸ ಶುರು ಮಾಡಲಿದ್ದಾರೆ.

ಮೂರನೇ ಹಾಗೂ ನಾಲ್ಕನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಪ್ಯಾಟ್ ಕಮಿನ್ಸ್ ಇಡೀ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಭಾರತಕ್ಕೆ ಮರಳಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಮೊಣಕೈ ಸಮಸ್ಯೆಯಿಂದಾಗಿ ಈಗಾಗಲೇ ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇವರೊಂದಿಗೆ ಹ್ಯಾಜಲ್‌ವುಡ್ ಕೂಡ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮ್ಯಾಥ್ಯೂ ರೆನ್ಶಾ ಕೂಡ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಆಷ್ಟನ್ ಅಗರ್ ಕೂಡ ಅಲಭ್ಯರಾಗಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!