9 C
Munich
Friday, March 24, 2023

IND vs AUS 4th test Here’s Why Virat Kohli Kisses His locket After Scoring A Hundred | IND vs AUS: ಶತಕದ ನಂತರ ಕೊಹ್ಲಿ ಮುತ್ತಿಡುವ ಈ ಲಾಕೆಟ್‌ನ ವಿಶೇಷತೆ ಏನು ಗೊತ್ತಾ?

ಓದಲೇಬೇಕು

Virat Kohli: ಅಹಮದಾಬಾದ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ತನ್ನ ಲಾಕೆಟ್ ತೆಗೆದು ಮುತ್ತಿಟ್ಟು ಸಂಭ್ರಮಿಸಿದರು. ಇದು ಈ ಟೆಸ್ಟ್​ನಲ್ಲಿ ಮಾತ್ರವಲ್ಲ. ಇದಕ್ಕಿಂತಲೂ ಮುನ್ನ ಇತ್ತೀಚಿನ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದಾಗಲೆಲ್ಲ ಅವರು ಲಾಕೆಟ್‌ಗೆ ಮುತ್ತಿಟ್ಟು ಸಂಭ್ರಮಿಸುತ್ತಾರೆ.

ವಿರಾಟ್ ಕೊಹ್ಲಿ

ಟೀಂ ಇಂಡಿಯಾದ (Team India) ರನ್ ಮಷಿನ್ ಕಿಂಗ್ ಕೊಹ್ಲಿ (Virat Kohli) ಆಸ್ಟ್ರೇಲಿಯಾ ವಿರುದ್ಧದ (India Vs Australia) ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. 241 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿಗೆ ಇದು ಟೆಸ್ಟ್ ವೃತ್ತಿಜೀವನದ 28 ನೇ ಶತಕ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75 ನೇ ಶತಕವಾಗಿದೆ. ಅಲ್ಲದೆ ತಾಯ್ನಾಡಿನಲ್ಲಿ ಇದು ವಿರಾಟ್ ಅವರ 35ನೇ ಶತಕವೂ ಆಗಿದೆ. ಬರೋಬ್ಬರಿ 3 ವರ್ಷಗಳ ನಂತರ ಶತಕ ಸಿಡಿಸಿ ಮಿಂಚಿದ ಕೊಹ್ಲಿ ತಮ್ಮ ಶತಕದ ಸಂಭ್ರಮವನ್ನು ಲಾಕೆಟ್​ಗೆ (locket) ಮುತ್ತಿಡುವ ಮೂಲಕ ಆಚರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಿಂಗ್ ಕೊಹ್ಲಿ ವೃತ್ತಿ ಜೀವನ ಆರಂಭವಾಗಿನಿಂದ ಅವರು ಶತಕ ಸಿಡಿಸಿದರೆ ಆಕ್ರಮಣಕಾರಿ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡುವುದನ್ನು ನಾವೆಲ್ಲರು ನೋಡಿದ್ದೇವೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಿಂಗ್ ಕೊಹ್ಲಿ ಶತಕ ಸಿಡಿಸಿದ ಬಳಿಕ ತಾವು ಕೊರಳಿಗೆ ಧರಿಸಿರುವ ಲಾಕೆಟ್​ಗೆ ಮುತ್ತಿಟ್ಟು ಸಂಭ್ರಮಾಚರಣೆ ಮಾಡುತ್ತಾರೆ. ಅಷ್ಟಕ್ಕೂ ಕೊಹ್ಲಿ ಮುತ್ತಿಡುವ ಈ ಲಾಕೆಟ್​ನ ಹಿಂದಿನ ಸಿಕ್ರೇಟ್ ಏನು? ಕೆಲವೇ ಕೆಲವು ವರ್ಷಗಳಿಂದ ಕೊಹ್ಲಿ ತಮ್ಮ ಸಂಭ್ರಮಾಚರಣೆಯಲ್ಲಿ ಈ ಹೊಸ ಪ್ರವೃತ್ತಿಯನ್ನು ಶುರು ಮಾಡಿದ್ಯಾಕೆ ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು. ಅಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ಅಹಮದಾಬಾದ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ತನ್ನ ಲಾಕೆಟ್ ತೆಗೆದು ಮುತ್ತಿಟ್ಟು ಸಂಭ್ರಮಿಸಿದರು. ಇದು ಈ ಟೆಸ್ಟ್​ನಲ್ಲಿ ಮಾತ್ರವಲ್ಲ. ಇದಕ್ಕಿಂತಲೂ ಮುನ್ನ ಇತ್ತೀಚಿನ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದಾಗಲೆಲ್ಲ ಅವರು ಲಾಕೆಟ್‌ಗೆ ಮುತ್ತಿಟ್ಟು ಸಂಭ್ರಮಿಸುತ್ತಾರೆ.

IND vs AUS: ಕಾಕತಾಳೀಯವಾದರೂ ಸತ್ಯ; ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶತಕ ಬಾರಿಸುವ ಕೊಹ್ಲಿ!

ಕೊಹ್ಲಿ ಶತಕಕ್ಕೂ ಲಾಕೆಟ್‌ಗೆ ಮುತ್ತಿಡುವುದಕ್ಕೂ ಇರುವ ಸಂಬಂಧ

ವಾಸ್ತವವಾಗಿ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಲಾಕೆಟ್‌ಗೆ ಮುತ್ತಿಡುವ ಪ್ರವೃತ್ತಿ 2018 ರ ಜನವರಿಯಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಿಂದ ಆರಂಭವಾಯಿತು ಎಂತಲೇ ಹೇಳಬಹುದು. ಕೊಹ್ಲಿ ಮೊದಲ ಬಾರಿಗೆ ಶತಕ ಸಿಡಿಸಿದ ಬಳಿಕ ಈ ರೀತಿಯ ಸಂಭ್ರಮಾಚರಣೆ ಮಾಡಿದ್ದರು. ಆ ಪಂದ್ಯದಲ್ಲಿ 217 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 153 ರನ್​ಗಳ ಪ್ರಮುಖ ಇನ್ನಿಂಗ್ಸ್ ಆಡಿದ್ದರು.

ಇದಾದ 7 ತಿಂಗಳ ನಂತರ, ವಿರಾಟ್ ಕೊಹ್ಲಿ 2018ರ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ರೀತಿಯ ಸಂಭ್ರಮಾಚರಣೆ ಮಾಡಿದ್ದರು. ಆ ಶತಕ ಕೊಹ್ಲಿಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ಆಂಗ್ಲರ ನೆಲದಲ್ಲಿ ಅವರ ವಿರುದ್ಧ ಕೊಹ್ಲಿಯ ಮೊದಲ ಟೆಸ್ಟ್ ಶತಕ ಹಾಗೂ ತಮ್ಮ ವೃತ್ತಿಜೀವನದ 22 ನೇ ಟೆಸ್ಟ್ ಶತಕ ಅದಾಗಿತ್ತು. ದಾಖಲೆಯ ಶತಕ ಸಿಡಿಸಿದ ಬಳಿಕ ಕೊಹ್ಲಿ, ಮತ್ತೆ ಲಾಕೆಟ್‌ಗೆ ಮುತ್ತಿಟ್ಟರು. ಇದು ಮತ್ತೊಮ್ಮೆ ಜನರ ಗಮನ ಸೆಳೆಯಿತು.

ಇದಾದ ಬಳಿಕ ಈ ಲಾಕೆಟ್​ಗೆ ಮುತ್ತಿಡುವ ಸಂಭ್ರಮಾಚರಣೆ ಹೆಚ್ಚು ಚರ್ಚೆಯಾದದ್ದು ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ. ಅಂದು ಅಫ್ಘಾನಿಸ್ತಾನ ವಿರುದ್ಧ ತಮ್ಮ ಮೊದಲ ಟಿ20 ಶತಕ ಬಾರಿಸಿದ್ದ ಕೊಹ್ಲಿ, ಆಗಲೂ ಇದೇ ರೀತಿಯಾಗಿ ಸಂಭ್ರಮಿಸಿದ್ದರು. ಹಾಗಿದ್ದರೆ ಈ ಲಾಕೆಟ್​ ಮೇಲೆ ಕೊಹ್ಲಿಗೆ ಇರುವ ನಂಬಿಕೆಯಾದರೂ ಏನು? ಅದಕ್ಕೆ ಉತ್ತರ ಇಲ್ಲಿದೆ.

ವಿರಾಟ್ ಕೊಹ್ಲಿಯ ಲಾಕೆಟ್‌ನಲ್ಲಿರುವ ವಿಶೇಷತೆ ಏನು?

ವಾಸ್ತವವಾಗಿ ಸೆಂಚುರಿ ಸಿಡಿಸಿದಾಗಲೆಲ್ಲ ವಿರಾಟ್ ಕೊಹ್ಲಿ ಮುತ್ತಿಡುವ ಲಾಕೆಟ್​ನ ಹಿಂದೆ ತನ್ನ ಮಡದಿಯ ಪ್ರೇಮದ ಕಥೆ ಇದೆ. ಶತಕ ಬಾರಿಸಿದಾಗಲೆಲ್ಲ ವಿರಾಟ್ ಕೊಹ್ಲಿ ಚುಂಬಿಸುವ ಈ ಲಾಕೆಟ್ ಅವರ ಮದುವೆಯ ಉಂಗುರವಾಗಿದೆ. ಅಂದರೆ ಕೊಹ್ಲಿಯ ಮದುವೆಯಂದ್ದು, ಅವರ ಮಡದಿ ಅನುಷ್ಕಾ ಶರ್ಮಾ ಕೊಹ್ಲಿಗೆ ತೊಡಿಸಿದ ಉಂಗುರವನ್ನು ಕೊಹ್ಲಿ ಈಗ ಲಾಕೆಟ್ ಆಗಿ ಮಾಡಿಕೊಂಡು ಕೊರಳಿಗೆ ಹಾಕಿಕೊಂಡಿದ್ದಾರೆ. ಈ ವಿಚಾರವನ್ನು ಖ್ಯಾತ ನಿರೂಪಕ ಹರ್ಷಾ ಭೋಗ್ಲೆ ಒಮ್ಮೆ ತಮ್ಮ ಕಾಮೆಂಟರಿಯ ಸಂದರ್ಭದಲ್ಲಿ ತಿಳಿಸಿದ್ದರು. ಈ ಲಾಕೆಟ್ ಕೊಹ್ಲಿ ಅವರ ಪ್ರೀತಿಯ ಸಂಕೇತವಾಗಿದೆ. ಶತಕ ಸಿಡಿಸಿದ ಬಳಿಕ ಈ ಲಾಕೆಟ್​ಗೆ ಮುತ್ತಿಡುವ ಮೂಲಕ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದರು.

ಕೊಹ್ಲಿಗೆ ಸದಾ ಬೆಂಗಾವಲಾಗಿರುವ ಅನುಷ್ಕಾ

ವೃತ್ತಿಬದುಕು ಆರಂಭಿಸಿದಾಗಿನಿಂದಲೂ ಕೊಹ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​ ಬದುಕಿನಲ್ಲಿ ಕೊಹ್ಲಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿ ದೊರೆತಿದೆ. ಟಿ20 ವಿಶ್ವಕಪ್ ಬಳಿಕ ಕೊಹ್ಲಿಯನ್ನು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಆ ನಂತರ ಏಕದಿನ ಹಾಗೂ ಟೆಸ್ಟ್ ನಾಯಕತ್ವದಿಂದಲೂ ಕೊಹ್ಲಿಯನ್ನು ಬಲವಂತವಾಗಿ ಹೊರಹಾಕಲಾಯಿತು. ಇದರೊಂದಿಗೆ ಕಳಪೆ ಫಾರ್ಮ್​ ಕೂಡ ಕೊಹ್ಲಿಗೆ ಬಹಳಷ್ಟು ಹಿನ್ನಡೆಯುಂಟು ಮಾಡಿತ್ತು. ಹೀಗಾಗಿ ಭಾರತ ಕ್ರಿಕೆಟ್​ನಲ್ಲಿ ಕೊಹ್ಲಿ ಯುಗ ಮುಗಿದೇ ಹೋಯಿತು ಎಂತಲೂ ಎಲ್ಲರೂ ಮಾತನಾಡಿಕೊಳ್ಳಲಾರಂಭಿಸಿದ್ದರು. ಹೀಗಾಗಿ ಟೀಕಕಾರರ ಟೀಕೆಗಳಿಂದ, ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಕೊಹ್ಲಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಅನುಷ್ಕಾ ಮಾಡಿದ್ದರು. ಈ ವಿಚಾರವನ್ನು ಸ್ವತಃ ಕೊಹ್ಲಿಯವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ತನ್ನ ಕಷ್ಟದ ದಿನಗಳಲ್ಲಿ ತನ್ನ ಬೆನ್ನಿಗೆ ನಿಂತ ಮಡದಿಗೆ ಕೊಹ್ಲಿ ಈ ರೀತಿಯಾಗಿ ಪ್ರೀತಿ ವ್ಯಕ್ತಪಡಿಸುತ್ತಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!