IND vs AUS: ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕೆಎಸ್ ಭರತ್ಗೆ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡಿತ್ತು. ಅವರು ಸರಣಿಯ ಎಲ್ಲಾ ನಾಲ್ಕು ಟೆಸ್ಟ್‌ಗಳಲ್ಲಿ ಆಡಿದರಾದರೂ ಅವರು ಬ್ಯಾಟ್‌ನಿಂದ ರನ್ ಹರಿದು ಬಂದಿಲ್ಲ.
ಲಭದ ಕ್ಯಾಚ್ ಕೈಚೆಲ್ಲಿದ ಭರತ್
ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದು, ರೋಹಿತ್ ಶರ್ಮಾ (Rohit Sharma) ಅವರ ಕಣ್ಣೆದುರೇ ನಂಬಲು ಸಾಧ್ಯವಾಗದ ಘಟನೆಯೊಂದು ನಡೆದಿದೆ. ವಾಸ್ತವವಾಗಿ, ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಕೆಎಸ್ ಭರತ್ (KS Bharat) ಅವರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ (Travis Head) ಅವರ ಸುಲಭದ ಕ್ಯಾಚ್ ಅನ್ನು ಕೈಬಿಟ್ಟರು. ಆಸೀಸ್ ಇನ್ನಿಂಗ್ಸ್ನ ಆರನೇ ಓವರ್‌ನಲ್ಲಿ ಉಮೇಶ್ ಯಾದವ್ ಎಸೆದ ಅತ್ಯುತ್ತಮ ಚೆಂಡನ್ನು ಹೆಡ್ಗೆ ಸರಿಯಾಗಿ ಮೀಡಲ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಡ್ ಬ್ಯಾಟಿನ ಅಂಚಿಗೆ ತಾಗಿದ ಚೆಂಡು ಸೀದಾ ವಿಕೆಟ್ ಕೀಪರ್ ಕೆ.ಎಸ್.ಭರತ್ ಅವರ ಗ್ಲೌಸ್‌ಗೆ ಹೋಯಿತು. ಆದರೆ ಇಲ್ಲಿ ಆತುರ ಮಾಡಿದ ಭರತ್ ಕ್ಯಾಚ್ ಅನ್ನು ಸರಿಯಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಚೆಂಡು ನೆಲಕ್ಕಪ್ಪಳಿಸಿತು.
ಮೌನವಾಗಿ ನಿಂತ ರೋಹಿತ್
ಅತ್ಯಂತ ಸುಲಭದ ಕ್ಯಾಚನ್ನು ಕೈಬಿಟ್ಟ ಕೂಡಲೇ ಸ್ವತಃ ಭರತ್ ಅವರೇ ಅಚ್ಚರಿಗೊಂಡರಾದರೂ, ಮುಜುಗರವನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಗಲು ಪ್ರಾರಂಭಿಸಿದರು. ಮತ್ತೊಂದೆಡೆ, ಈ ಡ್ರಾಪ್ ಕ್ಯಾಚ್ ನೋಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಇತರ ಆಟಗಾರರು ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾಗಿ ಮೈದಾನದಲ್ಲಿ ಮೌನವಾಗಿ ನಿಂತುಬಿಟ್ಟರು.
ವಾಸ್ತವವಾಗಿ ಇಂದಿನಿಂದ ಆರಂಭವಾಗಿರುವ ಈ ನಾಲ್ಕನೇ ಟೆಸ್ಟ್ನಲ್ಲಿ ಭರತ್ ಮಾಡಿದ ತಪ್ಪು ಇದೊಂದೆ ಅಲ್ಲ. ಬದಲಿಗೆ ವಿಕೆಟ್ ಹಿಂದೆ ಎರಡು ಬೌಂಡರಿಗಳನ್ನು ಬಿಟ್ಟರು. ಮೊಹಮ್ಮದ್ ಶಮಿ ಅವರ ಬಾಲ್ ಸಾಕಷ್ಟು ಸ್ವಿಂಗ್ ಆಗುತ್ತಿದ್ದು, ಅದನ್ನು ಹಿಡಿಯಲು ಭರತ್ ತುಂಬಾ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಭರತ್ ವಿಕೆಟ್ ಕೀಪಿಂಗ್ನಲ್ಲಿ ಏಕಾಗ್ರತೆಯ ಕೊರತೆ ಎದ್ದು ಕಾಣುತ್ತಿದೆ.
KS bharat drop here. You can see he takes a step to the legside. (Second photo) So already he is unbalanced, and then he doesn’t quiet get to the ball, he reaches out (last photo) very tough to take a opposite step then come back in. Technical error #INDvsAUSTest #INDvAUS pic.twitter.com/7pwSdIPUKu
— lucas (@LucasR32sky) March 9, 2023
ಭರತ್ ಬ್ಯಾಟ್ ಕೂಡ ಮೌನವಾಗಿದೆ
ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕೆಎಸ್ ಭರತ್ಗೆ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡಿತ್ತು. ಅವರು ಸರಣಿಯ ಎಲ್ಲಾ ನಾಲ್ಕು ಟೆಸ್ಟ್‌ಗಳಲ್ಲಿ ಆಡಿದರಾದರೂ ಅವರು ಬ್ಯಾಟ್‌ನಿಂದ ರನ್ ಹರಿದು ಬಂದಿಲ್ಲ. ಈ ಆಟಗಾರ ಈಗ ಆಡಿರುವ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 14.25 ಸರಾಸರಿಯಲ್ಲಿ 57 ರನ್ ಗಳಿಸಿದ್ದಾರೆ.
ಜೀವದಾನದ ಲಾಭ ಪಡೆಯುವಲ್ಲಿ ಹೆಡ್ ವಿಫಲ
ಆದರೆ ಭರತ್ ನೀಡಿದ ಜೀವದಾನವನ್ನು ಆಸೀಸ್ ಆರಂಭಿಕ ಟ್ರಾವಿಸ್ ಹೆಡ್ ಸರಿಯಾಗಿ ಬಳಸಿಕೊಳ್ಳಲಿಲ್ಲ. ಕ್ಯಾಚ್ ಡ್ರಾಪ್ ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಹೆಡ್ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ, 32 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಅಶ್ವಿನ್ ಎಸೆತದಲ್ಲಿ ದೊಡ್ಡ ಶಾಟ್ ಆಡುವ ಯತ್ನದಲ್ಲಿ ಹೆಡ್, ಜಡೇಜಾಗೆ ಕ್ಯಾಚ್ ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ