2.1 C
Munich
Monday, March 27, 2023

IND vs AUS 4th test Shreyas Iyer ruled out of Border Gavaskar Trophy | IND vs AUS: ಪಂದ್ಯದ ನಡುವೆ ಭಾರತಕ್ಕೆ ಬಿಗ್ ಶಾಕ್; ತಂಡದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್!

ಓದಲೇಬೇಕು

Shreyas Iyer: ಶ್ರೇಯಸ್ ಅಯ್ಯರ್ ಮಾರ್ಚ್ 17ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿಯೂ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೆ ಐಪಿಎಲ್​ನಿಂದಲೂ ಹೊರಗುಳಿಯುವ ಲಕ್ಷಣಗಳು ಕಾಣುತ್ತಿವೆ.

ಶ್ರೇಯಸ್ ಅಯ್ಯರ್

ಅಹಮದಾಬಾದ್ ಟೆಸ್ಟ್‌ನಲ್ಲಿ 5 ನೇ ದಿನದ ಆಟ ಆರಂಭವಾಗಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ India Vs Australia ನೈಟ್​ ವಾಚ್​ಮನ್ ಮ್ಯಾಥ್ಯೂ ಕುಹ್ನೆಮನ್ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಆದರೆ ಈ ನಡುವೆ ಟೀಂ ಇಂಡಿಯಾ (Team India) ಪಾಳಯದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಇಂಜುರಿಯಿಂದಾಗಿ ಇಡೀ ಟೆಸ್ಟ್ ಪಂದ್ಯದಿಂದಲೇ ಹೊರಬಿದ್ದಿದ್ದಾರೆ. ವಾಸ್ತವವಾಗಿ ಈ ಟೆಸ್ಟ್ ಪಂದ್ಯದ ಮೂರನೇ ದಿನದಂದು ಅಯ್ಯರ್ ಬೆನ್ನು ನೋವಿಗೆ ತುತ್ತಾದರು. ಹೀಗಾಗಿ ಅವರನ್ನು ಸ್ಕ್ಯಾನಿಂಗ್​ಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆ ನಂತರ ಅಯ್ಯರ್ ತಂಡದ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಐ (BCCI) ನೀಡಿತ್ತು. ಗಾಯದ ಸಮಸ್ಯೆಯಿಂದ ಅಯ್ಯರ್ ಮೊದಲ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಮಾಡಲಿಲ್ಲ. ಈಗ ಪಂದ್ಯದಿಂದಲೇ ಅಯ್ಯರ್ ಹೊರಗುಳಿಯುತ್ತಿರುವುದು ಭಾರತಕ್ಕೆ ಕೊಂಚ ಹಿನ್ನಡೆಯುಂಟು ಮಾಡಿದೆ.

ಆದರೆ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಅಯ್ಯರ್ ಅಲಭ್ಯತೆ ಭಾರತ ತಂಡಕ್ಕೆ ಯಾವುದೇ ನಷ್ಟವುಂಟು ಮಾಡುವುದಿಲ್ಲ ಎಂದು ತೋರುತ್ತದೆ. ಏಕೆಂದರೆ ಇಂದು ಅಹಮದಾಬಾದ್ ಟೆಸ್ಟ್​ನ ಕೊನೆಯ ದಿನವಾಗಿದ್ದು, ಭಾರತ ಎರಡನೇ ಇನ್ನಿಂಗ್ಸ್ ಆಡಿದರೂ ಅಯ್ಯರ್ ಅಲಭ್ಯತೆ ತಂಡಕ್ಕೆ ಯಾವುದೇ ನಷ್ಟವುಂಟು ಮಾಡುವ ಸಾಧ್ಯತೆಗಳಿಲ್ಲ. ಏಕೆಂದರೆ ತಂಡದಲ್ಲಿ ಅಷ್ಟರ ಮಟ್ಟಿಗೆ ಬ್ಯಾಟಿಂಗ್ ಡೆಪ್ತ್ ಇದೆ.

BAN vs ENG: ವಿಶ್ವ ವಿಜೇತ ಇಂಗ್ಲೆಂಡ್​ಗೆ ಎಂಥಾ ಮುಖಭಂಗ; ಆಂಗ್ಲರೆದುರು ಚೊಚ್ಚಲ ಟಿ20 ಸರಣಿ ಗೆದ್ದ ಬಾಂಗ್ಲಾ

ಈ ಹಿಂದೆಯೂ ಇಂಜುರಿಗೊಳಗಾಗಿದ್ದ ಅಯ್ಯರ್

ವಾಸ್ತವವಾಗಿ ಅಯ್ಯರ್ ಗಾಯಗೊಂಡಿರುವುದು ಹೊಸದೇನಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರು ಇದೇ ಇಂಜುರಿಗೆ ತುತ್ತಾಗಿದ್ದರು. ನಂತರ ಅವರು ಎನ್​ಸಿಎಯಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅಯ್ಯರ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿಯೂ ಆಡಲು ಸಾಧ್ಯವಾಗಿರಲಿಲ್ಲ. ಆ ನಂತರ ಎರಡನೇ ಟೆಸ್ಟ್‌ಗೆ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಕೇವಲ 2 ಪಂದ್ಯಗಳನ್ನು ಆಡಿದ ನಂತರ, ಅಯ್ಯರ್ ಮತ್ತೆ ಇಂಜುರಿಗೆ ತುತ್ತಾಗಿದ್ದಾರೆ

ಏಕದಿನ ಸರಣಿ, ಐಪಿಎಲ್‌ನಿಂದಲೂ ಔಟ್?

ಈಗ ಇಂಜುರಿಗೆ ತುತ್ತಾಗಿರುವ ಶ್ರೇಯಸ್ ಅಯ್ಯರ್ ಸದ್ಯ ಅಹಮದಾಬಾದ್ ಟೆಸ್ಟ್‌ನಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. ಆದರೆ ಮಾರ್ಚ್ 17ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿಯೂ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೆ ಶ್ರೇಯಸ್ ಅಯ್ಯರ್, ಐಪಿಎಲ್​ನಿಂದಲೂ ಹೊರಗುಳಿಯುವ ಲಕ್ಷಣಗಳು ಕಾಣುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!