11.4 C
Munich
Thursday, March 30, 2023

IND vs AUS 4th test Shreyas Iyer undergoes scan due to lower back pain | IND vs AUS: ಶ್ರೇಯಸ್ ಅಯ್ಯರ್​ಗೆ ಇಂಜುರಿ; ಅಂತಿಮ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡುವುದು ಅನುಮಾನ?

ಓದಲೇಬೇಕು

Shreyas Iyer: ಬೆನ್ನು ನೋವಿನ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಅಹಮದಾಬಾದ್ ಟೆಸ್ಟ್‌ನಲ್ಲಿ ಇನ್ನೂ ಬ್ಯಾಟಿಂಗ್‌ಗೆ ಬಂದಿಲ್ಲ. ಸಾಮಾನ್ಯವಾಗಿ ಅವರು 4 ನೇ ಕ್ರಮಾಂಕದಲ್ಲಿ ಮಾತ್ರ ಬ್ಯಾಟ್ ಮಾಡುತ್ತಾರೆ.

ಶ್ರೇಯಸ್ ಅಯ್ಯರ್​

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಉಭಯ ತಂಡಗಳು ಗೆಲುವಿಗಾಗಿ ಹೋರಾಡುತ್ತಿವೆ. ಆಸ್ಟ್ರೇಲಿಯಾ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿರುವ ಟೀಂ ಇಂಡಿಯಾ (India Vs Australia) ಕೂಡ ಕಾಂಗರೂಗಳಿಗೆ ಸರಿಯಾಗಿ ಟಕ್ಕರ್ ಕೊಟ್ಟಿದೆ. ಆದರೆ ಈ ನಡುವೆ ಟೀಂ ಇಂಡಿಯಾ ಪಾಳದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಮಿಡಲ್ ಆರ್ಡರ್ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅಯ್ಯರ್ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಸ್ತುತ, ಅಯ್ಯರ್ ಅವರನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಬಿಸಿಸಿಐ (BCCI) ಕೂಡ ಮಾಹಿತಿ ಹಂಚಿಕೊಂಡಿದೆ.

ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿದ್ದು, ಇದರಲ್ಲಿ ಅಹಮದಾಬಾದ್ ಟೆಸ್ಟ್‌ನ ಮೂರನೇ ದಿನದಂದು ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರನ್ನು ಸ್ಕ್ಯಾನ್‌ಗೆ ಕರೆದೊಯ್ಯಲಾಗಿದೆ. ಬಿಸಿಸಿಐನ ವೈದ್ಯಕೀಯ ತಂಡವು ಅಯ್ಯರ್ ಗಾಯದ ಮೇಲೆ ನಿರಂತರವಾಗಿ ನಿಗಾ ಇರಿಸಿದೆ ಎಂದು ಹೇಳಿಕೊಂಡಿದೆ.

ನೋವಿನಿಂದಾಗಿ ಇನ್ನೂ ಬ್ಯಾಟಿಂಗ್​ಗೆ ಇಳಿದಿಲ್ಲ

ಬೆನ್ನು ನೋವಿನ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಅಹಮದಾಬಾದ್ ಟೆಸ್ಟ್‌ನಲ್ಲಿ ಇನ್ನೂ ಬ್ಯಾಟಿಂಗ್‌ಗೆ ಬಂದಿಲ್ಲ. ಸಾಮಾನ್ಯವಾಗಿ ಅವರು 4 ನೇ ಕ್ರಮಾಂಕದಲ್ಲಿ ಮಾತ್ರ ಬ್ಯಾಟ್ ಮಾಡುತ್ತಾರೆ. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಮೂರನೇ ದಿನ ಬ್ಯಾಟಿಂಗ್‌ಗೆ ಇಳಿದಿದ್ದರು. ನಾಲ್ಕನೇ ದಿನದಂದು ಜಡೇಜಾ ಔಟಾದಾಗಲೂ ಕೂಡ ಶ್ರೇಯಸ್​ ಬ್ಯಾಟಿಂಗ್​ ಬರಲಿಲ್ಲ. ಬದಲಿಗೆ ವಿಕೆಟ್ ಕೀಪರ್ ಕೆ. ಎಸ್. ಭರತ್ ಬ್ಯಾಟಿಂಗ್‌ಗೆ ಬಂದಿದ್ದಾರೆ. ಇದರಿಂದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವುದರ ಬಗ್ಗೆ ಅನುಮಾನ ಮೂಡುತ್ತಿದೆ. ಒಂದು ವೇಳೆ ಅಯ್ಯರ್ ಬ್ಯಾಟಿಂಗ್​ಗೆ ಬರದಿದ್ದರೆ, ಭಾರತಕ್ಕೆ ಭಾರಿ ಹಿನ್ನಡೆಯುಂಟಾಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!