Virat Kohli: ಕೊಹ್ಲಿ ಭಾರತದಲ್ಲಿ ಇದುವರೆಗೆ 49 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರ ದಾಖಲೆ ಅದ್ಭುತವಾಗಿದೆ. 58.21 ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ ಒಟ್ಟು 3958 ರನ್ ಗಳಿಸಿದ್ದಾರೆ.
Mar 09, 2023 | 12:57 PM





ತಾಜಾ ಸುದ್ದಿ
Updated on: Mar 09, 2023 | 12:57 PM
Mar 09, 2023 | 12:57 PM
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಗುರುವಾರದಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಇಡೀ ಸರಣಿಯಲ್ಲಿ ಸೈಲೆಂಟ್ ಆಗಿರುವ ಕಿಂಗ್ ಕೊಹ್ಲಿ ಬ್ಯಾಟ್ ಈ ಪಂದ್ಯದಲ್ಲಾದರೂ ಮ್ಯಾಜಿಕ್ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ. ಅಲ್ಲದೆ ಈ ಪಂದ್ಯ ಕೂಡ ಕೊಹ್ಲಿಗೆ ವಿಶೇಷವಾಗಿದ್ದು, ಭಾರತದ ನೆಲದಲ್ಲಿ ವಿಶೇಷ ದಾಖಲೆ ಮಾಡಿದ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.
ವಾಸ್ತವವಾಗಿ ಕೊಹ್ಲಿ ಕಳೆದ 13 ತಿಂಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿಲ್ಲ. ಅಲ್ಲದೆ ಟೆಸ್ಟ್ ಶತಕದ ಬರ ಕೂಡ ಎದುರಿಸುತ್ತಿದ್ದಾರೆ. ಇದೆಲ್ಲದರ ಹೊರತಾಗಿಯೂ ದಾಖಲೆ ಬರೆದಿರುವ ಕೊಹ್ಲಿ, ಅಹಮದಾಬಾದ್ ಟೆಸ್ಟ್ನಲ್ಲಿ ಕಣಕ್ಕಿಳಿಯುವ ಮೂಲಕ ಭಾರತದಲ್ಲಿ 50 ನೇ ಟೆಸ್ಟ್ ಪಂದ್ಯವನ್ನಾಡಿದ ಆಟಗಾರನೆನಿಸಿಕೊಳ್ಳಲಿದ್ದಾರೆ.
ಕೊಹ್ಲಿ ಭಾರತದಲ್ಲಿ ಇದುವರೆಗೆ 49 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರ ದಾಖಲೆ ಅದ್ಭುತವಾಗಿದೆ. 58.21 ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ ಒಟ್ಟು 3958 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕ ಮತ್ತು 12 ಅರ್ಧ ಶತಕಗಳು ಸೇರಿವೆ.
ಇದೀಗ ತವರಿನಲ್ಲಿ 50 ನೇ ಟೆಸ್ಟ್ ಆಡುತ್ತಿರುವ ಕೊಹ್ಲಿಗೆ ಶತಕದ ಬರ ನೀಗಿಸಿಕೊಳ್ಳಲು ಉತ್ತಮ ಅವಕಾಶವಿದೆ. ನವೆಂಬರ್ 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಅಂದಿನಿಂದ ಕೊಹ್ಲಿಗೆ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.
ಪ್ರಸಕ್ತ ಸರಣಿಯಲ್ಲೂ 5 ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 111 ರನ್‌ಗಳು ಹೊರಬಂದಿವೆ. ಇದರಲ್ಲಿ 44 ರನ್‌ಗಳು ಅವರ ಅತ್ಯಧಿಕ ಸ್ಕೋರ್ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕೊನೆಯ ಪಂದ್ಯದಲ್ಲಿ ಪ್ರಚಂಡ ಇನ್ನಿಂಗ್ಸ್‌ನೊಂದಿಗೆ ಸರಣಿಯನ್ನು ಕೊನೆಗೊಳಿಸುವುದು ಕೊಹ್ಲಿಯ ಟೆಸ್ಟ್ ವೃತ್ತಿಜೀವನಕ್ಕೆ ಬಲ ನೀಡಲಿದೆ.