4.6 C
Munich
Monday, March 27, 2023

IND vs AUS Nagpur and Delhi Test pitches rated Average by ICC Kannada news | IND vs AUS: ನಾಗ್ಪುರ ಮತ್ತು ದೆಹಲಿ ಸ್ಟೇಡಿಯಂ ಪಿಚ್‌ಗಳಿಗೆ ಐಸಿಸಿ ಯಾವ ರೇಟಿಂಗ್ ನೀಡಿದೆ ಗೊತ್ತಾ?

ಓದಲೇಬೇಕು

pruthvi Shankar |

Updated on: Feb 25, 2023 | 12:34 PM

IND vs AUS: ಎರಡೂ ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದಿದ್ದರು. ಹೀಗಾಗಿ ತನ್ನ ತಂಡದ ಹೀನಾಯ ಪ್ರದರ್ಶನವನ್ನು ಅರಗಿಸಿಕೊಳ್ಳದ ಆಸ್ಟ್ರೇಲಿಯದ ಮಾಧ್ಯಮಗಳು ಹಾಗೂ ಮಾಜಿ ಕ್ರಿಕೆಟಿಗರು ಭಾರತದ ಮೈದಾನದ ಪಿಚ್‌ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.

Feb 25, 2023 | 12:34 PM

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳು ಕೇವಲ ಮೂರೇ ದಿನದಲ್ಲಿ ಮುಕ್ತಾಯವಾಗಿವೆ. ಮೊದಲು ನಾಗ್ಪುರದಲ್ಲಿ, ನಂತರ ದೆಹಲಿಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ, ಆಸೀಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು.

ಎರಡೂ ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದಿದ್ದರು. ಹೀಗಾಗಿ ತನ್ನ ತಂಡದ ಹೀನಾಯ ಪ್ರದರ್ಶನವನ್ನು ಅರಗಿಸಿಕೊಳ್ಳದ ಆಸ್ಟ್ರೇಲಿಯದ ಮಾಧ್ಯಮಗಳು ಹಾಗೂ ಮಾಜಿ ಕ್ರಿಕೆಟಿಗರು ಭಾರತದ ಮೈದಾನದ ಪಿಚ್‌ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಈ ವಿಚಾರದಲ್ಲಿ ಐಸಿಸಿ ಕೂಡ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಈ ಎರಡೂ ಪಂದ್ಯಗಳಲ್ಲಿ ಐಸಿಸಿ ರೆಫರಿಯಾಗಿದ್ದ ಆಂಡಿ ಪೈಕ್ರಾಫ್ಟ್ ಅವರು, ನಾಗ್ಪುರ ಮತ್ತು ದೆಹಲಿ ಸ್ಟೇಡಿಯಂನ ಪಿಚ್‌ಗಳಿಗೆ 'ಸರಾಸರಿ' ರೇಟಿಂಗ್ ನೀಡಿದ್ದಾರೆ. ಇದರರ್ಥ ಈ ಎರಡೂ ಪಿಚ್​ಗಳು ಪಂದ್ಯವನ್ನಾಡಿಸದಷ್ಟು ಕಳಪೆಯಾಗಿರಲಿಲ್ಲ ಎಂಬುದಾಗಿದೆ. ಆದ್ದರಿಂದ ಎರಡೂ ಪಿಚ್​ಗಳ ವಿರುದ್ಧ ಯಾವುದೇ ಡಿಮೆರಿಟ್ ಅಂಕಗಳನ್ನು ನೀಡಲಾಗಿಲ್ಲ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಈ ಎರಡೂ ಪಂದ್ಯಗಳಲ್ಲಿ ಐಸಿಸಿ ರೆಫರಿಯಾಗಿದ್ದ ಆಂಡಿ ಪೈಕ್ರಾಫ್ಟ್ ಅವರು, ನಾಗ್ಪುರ ಮತ್ತು ದೆಹಲಿ ಸ್ಟೇಡಿಯಂನ ಪಿಚ್‌ಗಳಿಗೆ ‘ಸರಾಸರಿ’ ರೇಟಿಂಗ್ ನೀಡಿದ್ದಾರೆ. ಇದರರ್ಥ ಈ ಎರಡೂ ಪಿಚ್​ಗಳು ಪಂದ್ಯವನ್ನಾಡಿಸದಷ್ಟು ಕಳಪೆಯಾಗಿರಲಿಲ್ಲ ಎಂಬುದಾಗಿದೆ. ಆದ್ದರಿಂದ ಎರಡೂ ಪಿಚ್​ಗಳ ವಿರುದ್ಧ ಯಾವುದೇ ಡಿಮೆರಿಟ್ ಅಂಕಗಳನ್ನು ನೀಡಲಾಗಿಲ್ಲ.

ವಾಸ್ತವವಾಗಿ ಪಿಚ್​ಗಳಿಗೆ ಐಸಿಸಿಯಿಂದ 6 ಹಂತಗಳ ಪಿಚ್ ರೇಟಿಂಗ್‌ಗಳನ್ನು ನೀಡಲಾಗುತ್ತದೆ. ಇದರಲ್ಲಿ ಪಿಚ್ ಅನ್ನು ಸರಾಸರಿಗಿಂತ ಕಡಿಮೆ, ಕಳಪೆ ಅಥವಾ ಆಟಕ್ಕೆ ಅನರ್ಹವೆಂದು ರೇಟ್ ಮಾಡಿದರೆ 1, 3 ಮತ್ತು 5 ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.

ಐಸಿಸಿ ನೀಡುವ ಈ ಡಿಮೆರಿಟ್ ಅಂಕಗಳು 5 ವರ್ಷಗಳವರೆಗೆ ಅನ್ವಯವಾಗಲಿದ್ದು, ಈ ಐದು ವರ್ಷಗಳ ಅವಧಿಯಲ್ಲಿ ಯಾವ ಪಿಚ್ 5 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಅಂಕಗಳನ್ನು ಪಡೆಯುತ್ತದೊ ಅಂತಹ ಪಿಚ್​ಗಳಲ್ಲಿ 1 ವರ್ಷದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗುತ್ತದೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 91 ರನ್ ಗಳಿಸಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಟೀಂ ಇಂಡಿಯಾ ತನ್ನ ಏಕೈಕ ಇನ್ನಿಂಗ್ಸ್‌ನಲ್ಲಿ 400 ರನ್ ಗಳಿಸಿತ್ತು. ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಸೆಷನ್​ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಬಳಿಕ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 263 ರನ್ ಗಳಿಸಿದಲ್ಲದೆ, 1 ರನ್​ಗಳ ಮುನ್ನಡೆ ಕೂಡ ಪಡೆದಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ನಂತರವೂ ಇಡೀ ತಂಡ ಮೂರನೇ ದಿನದ ಮೊದಲ ಸೆಷನ್‌ನಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 113 ರನ್ ಗಳಿಸಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಮೂರನೇ ದಿನವೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!