IND vs AUS: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಟೆಸ್ಟ್ ಸರಣಿಯಲ್ಲೂ ರನ್ಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಸ್ಟೀವ್ ಸ್ಮಿತ್ ಕೂಡ ಹೆಣಗಾಡುತ್ತಿದ್ದಾರೆ.
Mar 02, 2023 | 10:18 AM





ತಾಜಾ ಸುದ್ದಿ
pruthvi Shankar |
Updated on: Mar 02, 2023 | 10:18 AM
Mar 02, 2023 | 10:18 AM
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಬ್ಯಾಟ್ ಮೌನವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಈ ಇಬ್ಬರು ಆಟಗಾರರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಲ್ಲದೆ ಈ ಟೂರ್ನಿಯಲ್ಲಿ ರನ್ ಗುಡ್ಡೆ ಹಾಕುವ ಆಟಗಾರರ ಪೈಕಿ ಈ ಇಬ್ಬರ ಹೆಸರೆ ಮೇಲ್ಪಂಕ್ತಿಯಲ್ಲಿತ್ತು. ಆದರೆ ಇದೀಗ ರನ್ ಬರ ಎದುರಿಸುತ್ತಿರುವ ಈ ಆಟಗಾರರಿಗೆ ಸಂಕಷ್ಟ ಎದುರಾಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಟೆಸ್ಟ್ ಸರಣಿಯಲ್ಲೂ ರನ್ಗಾಗಿ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಸ್ಟೀವ್ ಸ್ಮಿತ್ ಕೂಡ ಹೆಣಗಾಡುತ್ತಿದ್ದಾರೆ. ಒಂದು ಇನ್ನಿಂಗ್ಸ್ ಬಿಡಿ, ಇಬ್ಬರೂ ನಾಲ್ಕೈದು ಇನ್ನಿಂಗ್ಸ್‌ಗಳನ್ನು ಸೇರಿಯೂ 100 ರನ್ ಗಳಿಸಿಲ್ಲ.
ಟೆಸ್ಟ್ ಶತಕಕ್ಕಾಗಿ 3 ವರ್ಷಗಳ ಕಾಲ ಕಾಯುತ್ತಿರುವ ವಿರಾಟ್ ಕೊಹ್ಲಿ, ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 3 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ, 24.50 ಸರಾಸರಿಯಲ್ಲಿ ಕೇವಲ 98 ರನ್ ಗಳಿಸಿದ್ದಾರೆ.
ಇತ್ತ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯಷ್ಟೇ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅವರು 3 ಟೆಸ್ಟ್‌ಗಳ 5 ಇನ್ನಿಂಗ್ಸ್‌ಗಳಲ್ಲಿ, 24.25 ಸರಾಸರಿಯಲ್ಲಿ 97 ರನ್ ಗಳಿಸಿದ್ದಾರೆ.
ಆಧುನಿಕ ಕ್ರಿಕೆಟ್‌ನ ಫ್ಯಾಬ್ ಫೋರ್‌ನ ಎರಡು ದೊಡ್ಡ ಮುಖಗಳು ವಿರಾಟ್ ಮತ್ತು ಸ್ಮಿತ್. ಆದರೆ, ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇಬ್ಬರ ಸ್ಥಿತಿಯೂ ಒಂದೇ ಆಗಿದೆ. ಇಬ್ಬರೂ ಒಂದೂ ಅರ್ಧಶತಕ ಗಳಿಸಲಿಲ್ಲ. ಈಗ ಇದೇ ಪರಿಸ್ಥಿತಿ ಮುಂದುವರಿದರೆ ಇಬ್ಬರಿಗೂ ಅದರಲ್ಲೂ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ.