8.6 C
Munich
Wednesday, March 22, 2023

Ind vs pak womens t20 world cup 2023 india beats pakistan and creats 5 big records | IND vs PAK: ಟಿ20 ವಿಶ್ವಕಪ್​ನಲ್ಲಿ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿ 5 ದಾಖಲೆ ನಿರ್ಮಿಸಿದ ಟೀಂ ಇಂಡಿಯಾ..!

ಓದಲೇಬೇಕು

TV9kannada Web Team | Edited By: pruthvi Shankar

Updated on: Feb 13, 2023 | 10:38 AM

IND vs PAK: ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 150 ರನ್‌ಗಳ ಗುರಿಯನ್ನು 19 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತ ಟಿ20 ವಿಶ್ವಕಪ್​ನ ಅತಿದೊಡ್ಡ ಗೆಲುವು ಸಾಧಿಸಿದ ಇತಿಹಾಸ ಬರೆಯಿತು.

Feb 13, 2023 | 10:38 AM

2023ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಅವರ ಇನ್ನಿಂಗ್ಸ್ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಪಾಕ್ ಮಣಿಸಿದ ಟೀಂ ಇಂಡಿಯಾ ಹಲವು ದಾಖಲೆಯಗಳನ್ನು ಬರೆದಿದ್ದು, ಅವುಗಳ ಪಕ್ಷಿ ನೋಟ ಇಲ್ಲಿದೆ.

ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 150 ರನ್‌ಗಳ ಗುರಿಯನ್ನು 19 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತ ಟಿ20 ವಿಶ್ವಕಪ್​ನ ಅತಿದೊಡ್ಡ ಗೆಲುವು ಸಾಧಿಸಿದ ಇತಿಹಾಸ ಬರೆಯಿತು. ಹಾಗೆಯೇ ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಗೆಲುವು ಕೂಡ ಇದಾಗಿದೆ.

ಈ ಮೂಲಕ ಪಾಕಿಸ್ತಾನ ವಿರುದ್ಧ ಭಾರತ ಐದನೇ ಬಾರಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಾಧಿಸಿದ ದಾಖಲೆ ಬರೆದಿದ್ದು, ಇದು ಯಾವುದೇ ತಂಡದ ವಿರುದ್ಧ ಭಾರತದ ಗರಿಷ್ಠ ಗೆಲುವಾಗಿದೆ.

ಪಾಕ್ ವಿರುದ್ಧ 53 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ ಜೆಮಿಮಾ ರೋಡ್ರಿಗಸ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಸಿಡಿಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಪೂನಂ ರಾವುತ್ (2010) ಮತ್ತು ಮಿಥಾಲಿ ರಾಜ್ (2018) ಈ ಸಾಧನೆ ಮಾಡಿದ್ದರು.

ಅಷ್ಟೇ ಅಲ್ಲ, ಟಿ20 ವಿಶ್ವಕಪ್‌ನಲ್ಲಿ ಜೆಮಿಮಾ ಅವರ ಎರಡನೇ ಅರ್ಧಶತಕ ಇದಾಗಿದೆ. ವಿಶ್ವಕಪ್‌ನಲ್ಲಿ ಭಾರತದ ಪರ ಮಿಥಾಲಿ ರಾಜ್ (5) ಮತ್ತು ಹರ್ಮನ್‌ಪ್ರೀತ್ ಕೌರ್ (3) ಹೆಚ್ಚು ಅರ್ಧಶತಕಗಳನ್ನು ಗಳಿಸಿದರೆ, ಪೂನಮ್ ರಾವುತ್ ಕೂಡ 2 ಅರ್ಧಶತಕ ಬಾರಿಸಿದ್ದರು.

ಅದೇ ಸಮಯದಲ್ಲಿ ರಿಚಾ ಘೋಷ್ ಕೂಡ 20 ಎಸೆತಗಳಲ್ಲಿ 31 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ವಿಕೆಟ್‌ಕೀಪರ್ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. 2010ರಲ್ಲಿ ಶ್ರೀಲಂಕಾ ವಿರುದ್ಧ 59 ರನ್ ಗಳಿಸಿದ್ದ ಸುಲಕ್ಷಣಾ ನಾಯಕ್ ಈ ದಾಖಲೆ ಬರೆದಿದ್ದರು.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!