7.9 C
Munich
Sunday, March 19, 2023

India ranked eighth on the list of polluted country in 2022 World Air Quality Report | Most Polluted City: ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ 39 ನಗರಗಳು ಭಾರತದಲ್ಲಿವೆ: ವರದಿ

ಓದಲೇಬೇಕು

2022 ರಲ್ಲಿ ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶದ ಐದು ಅತ್ಯಂತ ಕಲುಷಿತ ದೇಶಗಳೊಂದಿಗೆ ಭಾರತವು ಹಿಂದಿನ ವರ್ಷಕ್ಕಿಂತ ಮೂರು ಸ್ಥಾನಗಳನ್ನು ಕಳೆದುಕೊಂಡು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ

ಪ್ರಾತಿನಿಧಿಕ ಚಿತ್ರ

ದೆಹಲಿ: ಭಾರತವು 2022 ರಲ್ಲಿ ವಿಶ್ವದ ಅತಿ ಹೆಚ್ಚು ಮಾಲಿನ್ಯದ ದೇಶಗಳ (Pollution) ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ, ವರದಿಯ ಪ್ರಕಾರ ಹಿಂದಿನ ವರ್ಷ ಭಾರತ 5ನೇ ಸ್ಥಾನದಲ್ಲಿತ್ತು. 2022 ರಲ್ಲಿ ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶದ ಐದು ಅತ್ಯಂತ ಕಲುಷಿತ ದೇಶಗಳೊಂದಿಗೆ ಭಾರತವು ಹಿಂದಿನ ವರ್ಷಕ್ಕಿಂತ ಮೂರು ಸ್ಥಾನಗಳನ್ನು ಕಳೆದುಕೊಂಡು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. PM 2.5 ಮಟ್ಟವು 53.3 ಮೈಕ್ರೋಗ್ರಾಂಗಳು/ಕ್ಯೂಬಿಕ್ ಮೀಟರ್‌ಗೆ ಕುಸಿದಿದೆ. ಅದು ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು.  ಮಂಗಳವಾರ ಬಿಡುಗಡೆ ಮಾಡಿದ ‘ವಿಶ್ವ ವಾಯು ಗುಣಮಟ್ಟ ವರದಿ’ಯಲ್ಲಿ (World Air Quality Report) ಸ್ವಿಸ್ ಸಂಸ್ಥೆ IQAir ಶ್ರೇಯಾಂಕವನ್ನು ನಿರ್ಧರಿಸಿದೆ. ಇದು PM 2.5 ಮಟ್ಟವನ್ನು ಆಧರಿಸಿದೆ. 131 ದೇಶಗಳ ಡೇಟಾವನ್ನು 30,000 ಕ್ಕೂ ಹೆಚ್ಚು ಭೂ-ಆಧಾರಿತ ಮಾನಿಟರ್‌ಗಳಿಂದ ತೆಗೆದುಕೊಳ್ಳಲಾಗಿದ್ದು ಇವುಗಳ, ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳುಕಾರ್ಯನಿರ್ವಹಿಸುತ್ತದೆ.

ಟಾಪ್ 100ರಲ್ಲಿ ಭಾರತದ ನಗರಗಳು

7,300 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿರುವ ಪಟ್ಟಿಯ ಅಗ್ರಸ್ಥಾನದಲ್ಲಿ ಭಾರತೀಯ ನಗರಗಳು ಪ್ರಾಬಲ್ಯ ಹೊಂದಿವೆ. ವರದಿಯು ಭಾರತದಲ್ಲಿ ವಾಯು ಮಾಲಿನ್ಯದ ಆರ್ಥಿಕ ವೆಚ್ಚವನ್ನು 150 ಶತಕೋಟಿ ಡಾಲರ್ ಎಂದು ಹೇಳುತ್ತದೆ, ಸಾರಿಗೆ ವಲಯವು PM 2.5 ಮಾಲಿನ್ಯದ 20-35 ಪ್ರತಿಶತವನ್ನು ಉಂಟುಮಾಡುತ್ತದೆ. ಮಾಲಿನ್ಯದ ಇತರ ಮೂಲಗಳೆಂದರೆ ಕೈಗಾರಿಕಾ ಘಟಕಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಮತ್ತು ತ್ಯಾಜ್ಯ ಸುಡುವಿಕೆ.

ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಹೊಟಾನ್ ಮೊದಲ ಎರಡು ಅತ್ಯಂತ ಕಲುಷಿತ ನಗರಗಳಾಗಿದ್ದು, ರಾಜಸ್ಥಾನದ ಭಿವಾಡಿ ಮತ್ತು ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. 92.6 ಮೈಕ್ರೋಗ್ರಾಂಗಳಲ್ಲಿ, ದೆಹಲಿಯ PM 2.5 ಮಟ್ಟವು ಸುರಕ್ಷಿತ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚು ಆಗಿದೆ.

ಟಾಪ್ 10 ರಲ್ಲಿ ಆರು ಭಾರತೀಯ ನಗರಗಳಿವೆ. ಟಾಪ್ 20 ರಲ್ಲಿ 14, ಟಾಪ್50ಯಲ್ಲಿ 39 ಮತ್ತು ಅಗ್ರ 100 ರಲ್ಲಿ 65ಇದೆ. ಹಿಂದಿನ ವರ್ಷ ಇಲ್ಲಿ 61 ಇತ್ತು.. ಹೊಸ ವರ್ಗೀಕರಣದ ಆಧಾರದ ಮೇಲೆ ದೆಹಲಿ ಮತ್ತು ನವದೆಹಲಿ ಎರಡೂ ಟಾಪ್ 10 ರಲ್ಲಿವೆ.

ದೆಹಲಿ ಇನ್ನು ಮುಂದೆ ಅತ್ಯಂತ ಕಲುಷಿತ ರಾಜಧಾನಿ ಅಲ್ಲ

ದೆಹಲಿಯು ಇಲ್ಲಿಯವರೆಗೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿತ್ತು. ಆದರೆ ಈ ವರ್ಷ ವರದಿಯು ‘ಗ್ರೇಟರ್’ ದೆಹಲಿ ಮತ್ತು ನವದೆಹಲಿಯ ರಾಜಧಾನಿ ನಡುವೆ ವ್ಯತ್ಯಾಸವನ್ನು ಮಾಡಿದೆ. ಎರಡೂ ನಗರಗಳು ಟಾಪ್ 10 ರಲ್ಲಿದೆ. ಆದರೆ ನವದೆಹಲಿ 2 ನೇ ಸ್ಥಾನದಲ್ಲಿದೆ  ಮತ್ತು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ ಈಗ ಚಾಡ್ ರಾಜಧಾನಿ ಜಮೀನಾಗೆ ಇದೆ.

ಮಾಲಿನ್ಯದ ಮಟ್ಟದಲ್ಲಿನ ವ್ಯತ್ಯಾಸವು PM 2.5 ರ ಕನಿಷ್ಠ 0.6 ಮೈಕ್ರೋಗ್ರಾಂ ಆಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಜಮೀನಾ ಜನಸಂಖ್ಯೆಯು ಒಂದು ಮಿಲಿಯನ್‌ಗಿಂತಲೂ ಕಡಿಮೆಯಿದ್ದರೆ, ನವದೆಹಲಿಯ ಜನಸಂಖ್ಯೆಯು ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚಿದೆ.
ದೆಹಲಿಯ ಪಕ್ಕದ ಪಟ್ಟಣಗಳಾದ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳು ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡಿವೆ. ಗುರುಗ್ರಾಮ್‌ನಲ್ಲಿ ಶೇ 34 ಫರಿದಾಬಾದ್‌ನಲ್ಲಿ ಶೇಕಡಾ 21 ಆಗಿದ್ದು ಸರಾಸರಿ PM 2.5 ಮಟ್ಟಗಳಿಗೆ ಹೋಲಿಸಿದರೆ ಹಿಂದಿನ ವರ್ಷಗಳಿಂದ ಇದು ಕುಸಿದಿದೆ. ದೆಹಲಿಯಲ್ಲಿ ಈ ಮಟ್ಟ ಶೇ 8ರಷ್ಟು ಕುಸಿದಿದೆ.  ಆದರೆ ಈ ನಗರಗಳಲ್ಲಿನ ಮಾಲಿನ್ಯದ ನಿಜವಾದ ಮಟ್ಟವು ಭಾರತೀಯ ಸರಾಸರಿಗಿಂತ ತುಂಬಾ ಹೆಚ್ಚಾಗಿದೆ. 2022 ರಲ್ಲಿ ಗಾಜಿಯಾಬಾದ್‌ನ PM 2.5 ಸರಾಸರಿ 88 ಮೈಕ್ರೋಗ್ರಾಂಗಳಿಗಿಂತ ಹೆಚ್ಚಿದ್ದರೆ, ಗುರುಗ್ರಾಮ್ 70 ಆಗಿದೆ.

ಇದನ್ನೂ ಓದಿ:Brahmapuram: ಬ್ರಹ್ಮಪುರಂ ತ್ಯಾಜ್ಯ ನಿರ್ವಹಣೆ ಒಪ್ಪಂದದ ವಿವರಗಳನ್ನು ಸಲ್ಲಿಸಿ: ಕೊಚ್ಚಿ ಕಾರ್ಪೊರೇಷನ್‌ಗೆ ಕೇರಳ ಹೈಕೋರ್ಟ್

ಇಂತಹ ದೀರ್ಘಕಾಲಿಕವಾಗಿ ಹೆಚ್ಚಿನ ಮಟ್ಟದ ಮಾಲಿನ್ಯದಲ್ಲಿ  ಮಕ್ಕಳು, ವೃದ್ಧರು ಮತ್ತು ಅಸ್ವಸ್ಥರು, ವಿಶೇಷವಾಗಿ ಅಸ್ತಮಾ, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಜೊತೆಗೆ ಮಧುಮೇಹ ಹೊಂದಿರುವವರಿಗೆ ಹೆಚ್ಚಿನ ಅಪಾಯವಿದೆ. ಆರೋಗ್ಯದ ಅಪಾಯಗಳು ಹೆಚ್ಚಿರುವುದರಿಂದ ಈ ಕುಸಿತವನ್ನು ಸುಧಾರಣೆಯಾಗಿ ನೋಡಲಾಗುವುದಿಲ್ಲ. ಯಾಕೆಂದರೆ ಗಾಳಿಯು ಅಪಾಯಕಾರಿಯಾಗಿ ಉಳಿದಿದೆ. ಈ ಸಂಪೂರ್ಣ ಬೆಲ್ಟ್ ಮಿಲಿಯನ್‌ಗಟ್ಟಲೆ ಜನಸಂಖ್ಯೆಯನ್ನು ಹೊಂದಿದೆ.

ಆಗ್ರಾದಲ್ಲಿ ಕುಸಿದ ಮಾಲಿನ್ಯ ಮಟ್ಟ

31 ನಗರಗಳು ಮಾಲಿನ್ಯ ಮಟ್ಟದಲ್ಲಿ ಎರಡಂಕಿಯ ಶೇಕಡಾವಾರು ಕುಸಿತವನ್ನು ಕಂಡಿವೆ. ಇವುಗಳಲ್ಲಿ 10 ಉತ್ತರ ಪ್ರದೇಶದಲ್ಲಿ ಮತ್ತು ಏಳು ಹರಿಯಾಣದಲ್ಲಿವೆ. ಆಗ್ರಾದ ತಾಜ್ ಮಹಲ್ ನಗರದಲ್ಲಿ ಶೇ.55ರಷ್ಟು ದೊಡ್ಡ ಕುಸಿತವಾಗಿದೆ. 2017-21ರ ನಡುವಿನ ಸರಾಸರಿ PM 2.5 85 ಮೈಕ್ರೋಗ್ರಾಂಗಳು ಮತ್ತು 2022 ರಲ್ಲಿ ಇದು ಪ್ರತಿ ಘನ ಮೀಟರ್‌ಗೆ ಕೇವಲ 38 ಮೈಕ್ರೋಗ್ರಾಂಗಳಷ್ಟಿತ್ತು.
ಹಿಂದಿನ ವರ್ಷಗಳ ಸರಾಸರಿಗೆ ಹೋಲಿಸಿದರೆ 38 ನಗರಗಳು ಮತ್ತು ಪಟ್ಟಣಗಳು ಮಾಲಿನ್ಯದಲ್ಲಿ ಏರಿಕೆ ಕಂಡಿವೆ.

ಕಲುಷಿತ ನಗರಗಳ ಪಟ್ಟಿಯಲ್ಲಿ 6 ಮೆಟ್ರೊಸಿಟಿ

ಇತರ ಮಹಾನಗರಗಳಲ್ಲಿ ಕೋಲ್ಕತ್ತಾವು ದೆಹಲಿಯ ನಂತರ ಹೆಚ್ಚು ಕಲುಷಿತವಾಗಿದೆ, ಚೆನ್ನೈ ತುಲನಾತ್ಮಕವಾಗಿ WHO ನ ಸುರಕ್ಷಿತ ಮಟ್ಟಕ್ಕಿಂತ 5x ಮಾಲಿನ್ಯದೊಂದಿಗೆ ಅತ್ಯಂತ ಸ್ವಚ್ಛವಾಗಿದೆ. ವಾಸ್ತವವಾಗಿ, 2017 ರಿಂದ ಸರಾಸರಿಗಿಂತ ಮಾಲಿನ್ಯದ ಮಟ್ಟವು ಏರಿಕೆ ಕಂಡಿರುವ  ಮಹಾನಗರಗಳೆಂದರೆ ಹೈದರಾಬಾದ್ ಮತ್ತು ಬೆಂಗಳೂರು.

ದಕ್ಷಿಣ ಏಷ್ಯಾದಲ್ಲಿಯೇ ಸಮಸ್ಯೆ; ಪರಿಹಾರ ಏನು?

ಅಗ್ರ ನೂರು ನಗರಗಳಲ್ಲಿ 72 ದಕ್ಷಿಣ ಏಷ್ಯಾದಲ್ಲಿದೆ. ಈ ಎಲ್ಲಾ ನಗರಗಳು ಭಾರತದಲ್ಲಿದ್ದರೂ ಸಹ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವು ಹತ್ತು ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ ಈ ದೇಶಗಳು ‘ಏರ್ ಶೆಡ್ಸ್ ಹಂಚಿಕೊಳ್ಳುವುದರೊಂದಿಗೆ ವಾಯು ಮಾಲಿನ್ಯವು ಸಾಮಾನ್ಯ ಸಮಸ್ಯೆಯಾಗಿದೆ. ಏರ್ ಶೆಡ್ಸ್ ಅಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮಾಲಿನ್ಯಕಾರಕಗಳ ಚಲನೆ.

ದಕ್ಷಿಣ ಏಷ್ಯಾವನ್ನು ವಾಯುಮಾಲಿನ್ಯದ ಕೇಂದ್ರಬಿಂದು ಎಂದು ಕರೆದ ವಿಶ್ವಬ್ಯಾಂಕ್, ದೇಶಗಳು (ನೇಪಾಳ ಸೇರಿದಂತೆ) ತಾಂತ್ರಿಕವಾಗಿ ಕಾರ್ಯಸಾಧ್ಯವಾದ ಎಲ್ಲವನ್ನೂ ಮಾಡಿದರೆ ಮಾಲಿನ್ಯವನ್ನು ಕಡಿಮೆ ಮಾಡುವ ವೆಚ್ಚವನ್ನು ವಿಶ್ಲೇಷಿಸಿದೆ. ಪ್ರತ್ಯೇಕವಾಗಿ ಕೆಲಸ ಮಾಡಿದರೆ, PM 2.5 ರ 1 ಮೈಕ್ರೋಗ್ರಾಂ/ಕ್ಯೂಬಿಕ್ ಮೀಟರ್ ಅನ್ನು ಕಡಿಮೆ ಮಾಡಲು 2.6 ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ಆದಾಗ್ಯೂ, “ಸಂಪೂರ್ಣ ಸಮನ್ವಯ” ಇದ್ದಲ್ಲಿ ಈ ವೆಚ್ಚವು ಪ್ರತಿ 1 ಮೈಕ್ರೋಗ್ರಾಮ್‌ಗೆ 278 ಮಿಲಿಯನ್‌ಗೆ ಕುಸಿಯುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!